Search
 • Follow NativePlanet
Share
ಮುಖಪುಟ » ಸ್ಥಳಗಳು» ಬಾಂಧವಗಡ್

ಬಾಂಧವಗಡ್: ಮಹಾರಾಜರ ಕೋಟೆ ಈಗ ಹುಲಿ ರಕ್ಷಿತಾರಣ್ಯ

16

ರೆವಾ ಮಹಾರಾಜರಿಗೆ ಬೇಟೆಯಾಡುವ ಪ್ರದೇಶವಾಗಿದ್ದ ಬಾಂಧವಗಡ್ ಪ್ರದೇಶ ಒಂದು ಹಳೆಯ ಕೋಟೆ. ಈ ಕೋಟೆಯನ್ನು ದಟ್ಟ ಅರಣ್ಯ ಸುತ್ತುವರಿದುಕೊಂಡಿದೆ. ಬಾಂಧವಗಡ್ ಬಿಳಿ ಹುಲಿಗಳ ಮೂಲ ಮನೆಯಾಗಿದೆ. ಇದು ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲ್ಪಡುತ್ತದೆ. ಹಿಂದೆ ಇದು ಬೇಟೆಗಾರರಿಗೂ ಅತ್ಯಂತ ಪ್ರಿಯ ಸ್ಥಳವಾಗಿತ್ತು. ಅದರೆ ಈಗ ಬೇಟೆಗೆ ಸಂಪೂರ್ಣವಾಗಿ ತೆರೆ ಬಿದ್ದಿದ್ದು, ಭಾರತ ಸರ್ಕಾರ ಹುಲಿಗಳನ್ನು ಬೇಟೆಯಾಡುವುದಕ್ಕೆ ನಿಷೇಧ ಹೇರಿದೆ ಮತ್ತು ಇದರಿಂದಾಗಿಯೇ ಹುಲಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ.

ಪ್ರಕೃತಿ ಮಡಿಲಲ್ಲಿರುವ ಬಾಂಧವಗಡ್

ಹಲವಾರು ಜೀವವೈವಿಧ್ಯವನ್ನು ಹೊಂದಿರುವ ಬಾಂಧವಗಡ್ ಅನ್ನು 1968 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. ಈ ಪ್ರದೇಶವು ಭಾರತದಲ್ಲಿ ಹುಲಿಗಳಿಗೆ ಆಶ್ರಯತಾಣವಾಗಿ ಜನಪ್ರಿಯ ಮತ್ತು ದೇಶದ ಗರಿಷ್ಠ ಹುಲಿಗಳು ಆಶ್ರಯತಾಣದಲ್ಲಿವೆ. ಹುಲಿಗಳನ್ನು ಹೊರತುಪಡಿಸಿ ಇಲ್ಲಿ ಚಿರತೆ, ವಿವಿಧ ಜಾತಿಯ ಜಿಂಕೆ ಮತ್ತು ವಿಭಿನ್ನ ಪ್ರಾಣಿಗಳಿವೆ.

ಬಾಂಧವಗಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 250 ಜಾತಿಯ ಪಕ್ಷಿಗಳು, 37 ಜಾತಿಯ ಸಸ್ತನಿಗಳು, 80 ವಿಧದ ಚಿಟ್ಟೆಗಳು ಮತ್ತು ವಿವಿಧ ಜಾತಿಯ ಸರೀಸೃಪಗಳಿವೆ. ಸಾಲ್, ಧೋಬಿನ್, ಸಲೈ, ಸಜಾ ಸೇರಿದಂತೆ ವೈವಿಧ್ಯಮಯ ಸಸ್ಯಸಂಪತ್ತು ಇಲ್ಲಿದೆ. ಸಸ್ಯ ಹಾಗೂ ಪ್ರಾಣಿ ಸಂಪತ್ತು ಬಾಂಧವಗಡ್ ನ ಪ್ರವಾಸೋದ್ಯಮದ ಪ್ರಮುಖ ಅಂಶ. ಅದರಲ್ಲೂ ಹುಲಿ ಇಲ್ಲಿನ ಪ್ರಮುಖ ಆಕರ್ಷಣೆ. ಬಾಂಧವಗಡ್ ನ ಪ್ರಕೃತಿ ಸೌಂದರ್ಯ ಮತ್ತು ಹುಲಿ ಹಾಗೂ ಇತರ ಪ್ರಾಣಿಗಳನ್ನು ನೋಡಲು ಇಲ್ಲಿ ಕನಿಷ್ಠ ಮೂರು ಹಗಲು ಹಾಗೂ ರಾತ್ರಿ ಕಳೆಯಬೇಕು.

ಕಣಿವೆಗಳ ಆಚೆಗೆ: ಬಾಂಧವಗಡ್ ನ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಬಾಂಧವಗಡ್ ಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರವಾಸಿಗ ಕೂಡ ಬಾಂಧವಗಡ್ ಕೋಟೆ ಹಾಗೂ ವಿಂಧ್ಯಾ ಬೆಟ್ಟದ ಸೊಬಗನ್ನು ನೋಡಲೇ ಬೇಕು. ಇದರ ಸಂಪೂರ್ಣ ವ್ಯಾಪ್ತಿಯಲ್ಲಿ ಅನೇಕ ಕಣಿವೆಗಳು ಅಂತರ್ಗತವಾಗಿದ್ದು, ಸಣ್ಣ ಹಾಗೂ ಸುಂದರ ಹುಲ್ಲುಗಾವಲಿನೊಂದಿಗೆ ಕೊನೆಯಾಗುತ್ತದೆ. ಸ್ಥಳೀಯವಾಗಿ ಇದನ್ನು ಬೊಹೆರಾ ಎಂದು ಕರೆಯಲಾಗುತ್ತದೆ. ತಾಲ್ ಎನ್ನುವ ಸ್ಥಳ ಈ ಪಾರ್ಕ್ ನ ಅತ್ಯಂತ ಕೆಳಮಟ್ಟದಲ್ಲಿರುವ ಸ್ಥಳವಾಗಿದೆ. ಬಾಂಧವಗಡ್ ಮಧ್ಯಪ್ರದೇಶದ ಅತ್ಯಂತ ಫೇವರಿಟ್ ಪ್ರವಾಸಿ ತಾಣ.

ಬಾಂಧವಗಡ್ ನ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಬಾಂಧವಗಡ್ ನ್ಯಾಶನಲ್ ಪಾರ್ಕ್ ಪ್ರಮುಖವಾದದ್ದು, ಮಧ್ಯಪ್ರದೇಶದಲ್ಲಿ 9 ರಾಷ್ಟ್ರೀಯ ಉದ್ಯಾನವನ ಮತ್ತು 25 ಅಭಯಾರಣ್ಯಗಳಿವೆ. ಮಧ್ಯಪ್ರದೇಶ ಭಾರತದ ಹುಲಿಗಳ ರಾಜ್ಯವೆಂದೇ ಪ್ರಸಿದ್ದಿ ಪಡೆದುಕೊಂಡಿದೆ ಹಾಗೂ ರಾಷ್ಟ್ರದ ಗರಿಷ್ಠ ಸಂಖ್ಯೆಯ ಹುಲಿಗಳು ಇಲ್ಲಿವೆ. ಬಾಂಧವಗಡ್ ಪ್ರವಾಸೋದ್ಯಮದಲ್ಲಿ ಪ್ರಮುಖ ಆಕರ್ಷಣೀಯ ತಾಣಗಳೆಂದರೆ ಬಾಂಧವಗಡ್ ಗಿರಿಧಾಮ, ಬಾಂಧವಗಡ್ ನ ಪ್ರಾಚೀನ ಗುಹೆಗಳು, ತಾಲ್ ಗ್ರಾಮ, ಚಾರಣ ಪಾಯಿಂಟ್, ಘರ್ ಪುರಿ ಅಣೆಕಟ್ಟು, ಶೇಶ ಶಯನ, ಘೋರದೆಮಾ ಜಲಪಾತ. ಬಾಘೆಲ್ ಮ್ಯೂಸಿಯಂನಲ್ಲಿರುವ ವಸ್ತುಗಳು ಹಿಂದಿನ ಕಾಲದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಬಾಂಧವಗಡ್ ನ ಜನಪ್ರಿಯ ಪಾಕಪದ್ಧತಿಗಳು

ಮಧ್ಯ ಪ್ರದೇಶ, ಪರ್ಷಿಯನ್ ಮತ್ತು ಹಿಂದೂಸ್ತಾನಿ ಸಂಸ್ಕೃತಿಯ ಇತಿಹಾಸವನ್ನು ಹೊಂದಿದ್ದು, ಇಲ್ಲಿನ ಅಡುಗೆಯಲ್ಲಿ ಅದು ಎದ್ದುಕಾಣುತ್ತದೆ. ಬಾಂಧವಗಡ್ ಗೆ ಭೇಟಿ ನೀಡಿದವರು ಭುಟ್ಟೆ ಕಿ ಕೀಸ್, ಮಾವ ಬಟಿ ಕಬಾಬ್ ಮತ್ತು ಖೊಪ್ರಪಾಕ್ ನ ಸವಿಯುಣ್ಣದಿದ್ದರೆ ಆ ಪ್ರವಾಸ ಅಪೂರ್ಣವಾದಂತೆ.

ಬಾಂಧವಗಡ್ ಗೆ ಭೇಟಿ ಹೇಗೆ

ಬಾಂಧವಗಡ್ ಗೆ ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಸಬಹುದು. ಬಾಂಧವಗಡ್ ಗೆ ಸಮೀಪದ ವಿಮಾನ ಹಾಗೂ ರೈಲು ನಿಲ್ದಾಣ ಜಬಲ್ಪುರ. ಬಾಂಧವಗಡ್ ಗೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ನಡುವೆ ಭೇಟಿ ನೀಡಬಹುದು.

ಬಾಂಧವಗಡ್ ಪ್ರಸಿದ್ಧವಾಗಿದೆ

ಬಾಂಧವಗಡ್ ಹವಾಮಾನ

ಬಾಂಧವಗಡ್
34oC / 93oF
 • Sunny
 • Wind: WSW 17 km/h

ಉತ್ತಮ ಸಮಯ ಬಾಂಧವಗಡ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಾಂಧವಗಡ್

 • ರಸ್ತೆಯ ಮೂಲಕ
  ಬಾಂಧವಗಡ್ ಗೆ ರಸ್ತೆ ಸಂಪರ್ಕ ಉತ್ತಮವಾಗಿದೆ. ಖಾಸಗಿ ಹಾಗೂ ರಾಜ್ಯ ಸಾರಿಗೆ ಬಸ್ ಗಳು ಮಧ್ಯಪ್ರದೇಶದ ಪ್ರಮುಖ ನಗರಗಳಿಂದ ಬಾಂಧವಗಡ್ ಗೆ ಸೇವೆಯನ್ನು ನೀಡುತ್ತವೆ. ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಹತ್ತಿರದ ನಗರ ಹಾಗೂ ಪಟ್ಟಣದಿಂದ ಜೀಪ್ ಹಾಗೂ ಕಾರುಗಳು ಬಾಡಿಗೆಗೆ ಸಿಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬಾಂಧವಗಡ್ ಗೆ ಹತ್ತಿರ ರೈಲು ನಿಲ್ದಾಣ ಕತ್ನಿ. ಇದು ಬಾಂಧವಗಡ್ ನಿಂದ 37 ಕಿ.ಮೀ. ದೂರದಲ್ಲಿದೆ. ಕತ್ನಿ ರೈಲು ನಿಲ್ದಾಣದಿಂದ ದೆಹಲಿ, ವಡೋದರ, ಮುಂಬಯಿ, ಹೌರಾ, ಬೆಂಗಳೂರು ಮತ್ತು ಚೆನ್ನೈ ಹಾಗೂ ಇತರ ಪ್ರದೇಶಗಳಿಗೆ ರೈಲು ಸೇವೆಯಿದೆ. ರೈಲ್ವೆ ನಿಲ್ದಾಣದಿಂದ ಖಾಸಗಿ ಹಾಗೂ ಸರ್ಕಾರಿ ಬಸ್ ಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬಾಂಧವಗಡ್ ಗೆ ಹತ್ತಿರದ ವಿಮಾನ ನಿಲ್ದಾಣ ಜಬಲ್ಪುರ. ಇಲ್ಲಿಂದ ಮುಂಬಯಿ, ಇಂದೋರ್ ಮತ್ತು ದೆಹಲಿಗೆ ವಿಮಾನಗಳಿವೆ. ಜಬಲ್ಪುರದಿಂದ ಬಾಂಧವಗಡ್ ಗೆ 195 ಕಿ.ಮೀ. ದೂರವಿದೆ. ವಿಮಾನ ನಿಲ್ದಾಣದಿಂದ ಬಾಂಧವಗಡ್ ಗೆ ಬಸ್ ಹಾಗೂ ಟ್ಯಾಕ್ಸಿಗಳು ಲಭ್ಯವಿರುತ್ತದೆ. ಖಾಸಗಿ ವಾಹನಗಳು ಲಭ್ಯವಿದ್ದು, ಉಮರಿಯಾ ಮೂಲಕ ರಾಷ್ಟ್ರೀಯ ಉದ್ಯಾನವನ ತಲುಪುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Bandhavgarh
  34 OC
  93 OF
  UV Index: 9
  Sunny
 • Tomorrow
  Bandhavgarh
  30 OC
  85 OF
  UV Index: 9
  Sunny
 • Day After
  Bandhavgarh
  30 OC
  86 OF
  UV Index: 9
  Sunny