Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಹವಾಮಾನ

ಬಾಂಧವಗಡ್ ಹವಾಮಾನ

ಬಾಂಧವಗಡ್ ಗೆ ಭೇಟಿ ನೀಡಲು ಸೂಕ್ತ ಸಮಯ ಚಳಿಗಾಲ. ಅಕ್ಟೋಬರ್ ನಿಂದ ಬಾಂಧವಗಡ್ ನ ಹವಾಮಾನ ತಂಪು ಹಾಗೂ ಹಿತಕರವಾಗಿರುತ್ತದೆ. ಇದು ಮಾರ್ಚ್ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಬಾಂಧವಗಡ್ ನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ಬಾಂಧವಗಡ್ ನಲ್ಲಿ ಮಾರ್ಚ್ ನಿಂದ ಆರಂಭವಾಗುವ ಬೇಸಿಗೆ ಜೂನ್ ತನಕವಿರುತ್ತದೆ. ಈ ಸಮಯದಲ್ಲಿ ತಾಪಮಾನ ಸುಮಾರು 40 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ. ಎಪ್ರಿಲ್ ಮಧ್ಯಭಾಗದಿಂದ ಜೂನ್ ಅಂತ್ಯದವರೆಗೆ ಇಲ್ಲಿ ಉಷ್ಣ ಅಲೆಗಳು ಮತ್ತು ತೀವ್ರ ಶುಷ್ಕತೆ ಕಾಡುತ್ತದೆ. ಬೇಸಿಗೆ ಕಾಲದಲ್ಲಿ ಪ್ರವಾಸಿಗಳು ಬಾಂಧವಗಡ್ ಗೆ ಭೇಟಿ ನೀಡುವುದು ಅಷ್ಟು ಯೋಗ್ಯವಲ್ಲ.

ಮಳೆಗಾಲ

ಸುಡುವ ಬೇಸಿಗೆಯ ಬಳಿಕ ಜುಲೈಯಲ್ಲಿ ಬಾಂಧವಗಡ್ ಗೆ ಮನ್ಸೂನ್ ಆಗಮನವಾಗುತ್ತದೆ ಮತ್ತು ಸಪ್ಟೆಂಬರ್ ತನಕ ಇದು ಮುಂದುವರಿಯುತ್ತದೆ. ವಿಂಧ್ಯಾ ಬೆಟ್ಟದ ಶ್ರೇಣಿಯಲ್ಲಿರುವ ಕಾರಣ ಇಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನವನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಾರದು.

ಚಳಿಗಾಲ

ಅಕ್ಟೋಬರ್ ನಿಂದ ನವಂಬರ್ ತನಕ ಇಲ್ಲಿನ ಹವಾಮಾನ ತುಂಬಾ ಹಿತಕರವಾಗಿರುತ್ತದೆ. ಈ ಸಮಯದಲ್ಲಿ ಪ್ರತಿಯೊಂದು ಜಾಗದಲ್ಲಿ ಹಸಿರನ್ನು ಕಾಣಬಹುದು ಮತ್ತು ಜಲಬುಗ್ಗೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಬಾಂಧವಗಡ್ ನಲ್ಲಿ ಮೂರು ತಿಂಗಳ ಕಾಲ ಚಳಿಗಾಲವಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ತನಕ ಚಳಿಗಾಲವಿರುತ್ತದೆ ಮತ್ತು ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಿರುತ್ತದೆ.