Search
 • Follow NativePlanet
Share
ಮುಖಪುಟ » ಸ್ಥಳಗಳು» ಅರಿಟಾರ್

ಅರಿಟಾರ್ - ಮಿತಿಯಿಲ್ಲದ ಸೌಂದರ್ಯ !

12

ಕೆಲವು ಸ್ಥಳಗಳು ದೈವದತ್ತ. ಯಾಕೆಂದರೆ ಇಂತಹ ಸ್ಥಳಗಳಲ್ಲಿರುವ ಹಸಿರು ಸಿರಿ ಎಲ್ಲರ ಮೈಮನ ತಣಿಸುವಂತದ್ದು. ಇನ್ನೂ ಕೆಲವು ಸ್ಥಳಗಳು ಪ್ರಕೃತಿಯ ತುಂಬಿದ ಒಡಲು. ಇಂತಹ ಅದ್ಭುತ ಸ್ಥಳಗಳಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬನ್ನಿ, ಸಮೃದ್ಧ  ಸೌಂದರ್ಯ ನಗರಿ ಅರಿಟಾರ್ ನ್ನೊಮ್ಮೆ ಸುತ್ತಿ ಬರೋಣ!

ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಶ್ರೀಮಂತ ಇತಿಹಾಸಕ್ಕೆ ಹೆಸರುವಾಸಿಯಾಗಿರುವ ಅರಿಟಾರ್,  ಪೂರ್ವ ಸಿಕ್ಕಿಂನ ಒಂದು ಭಾಗವಾಗಿದೆ. ಈ ಪ್ರಕೃತಿಯ ಮಡಿಲಲ್ಲಿ ಕೊಂಚ ಸಮಯವನ್ನು ಕಳೆಯುಯುವುದಕ್ಕೆ ಹಂಬಲಿಸುತಿರುವವರಿಗೆ ಇದೊಂದು ಆದರ್ಶ ತಾಣವಾಗಿದೆ. ಪ್ರಶಾಂತ ಸರೋವರಗಳು, ಸೊಂಪಾದ ಕಾಡುಗಳ ಮತ್ತು ದಪ್ಪ ಭತ್ತ ಜಾಗ ಹೊಂದಿರುವ ಬೆಟ್ಟಗಳ ಒಂದು ಚಿತ್ರಸದೃಶ ದೃಶ್ಯಗಳು ಅವರ್ಣನೀಯ! ಈ ಸ್ಥಳಕ್ಕೆ ಹೋಗುತ್ತಿದ್ದಂತೆ ನಿಮಗೆ ಸ್ವರ್ಗದಲ್ಲಿ ಪ್ರಯಾಣಿಸಿದಂತೆಯೇ ಅನ್ನಿಸುತ್ತದೆ. ಈ ಸ್ಥಳದ ಮುಂಜಾನೆಯ ದೃಶ್ಯಗಳು ವರ್ಣನೆಗೆ ನಿಲುಕದ್ದು ಹಾಗೂ ನೋಡುಗರನ್ನು ಸ್ತಬ್ಧಗೊಳಿಸುವಂತಿದೆ.

ಭೌಗೋಳಿಕ

ಅರಿಟಾರ್,  ಪಾಕ್ ಯೋಗ್  ಅಥವಾ ರಂಗೋಪ್ ಮೂಲಕ ಗ್ಯಾಂಗ್ಟೋಕ್ ನಿಂದ ನಾಲ್ಕು ಗಂಟೆಗಳ ಪ್ರಯಾಣದ ಮೂಲಕ ತಲುಪಬಹುದಾಗಿದ್ದು ಹಿಮಾಲಯದ ಅಂಚಿನಲ್ಲಿ ನೆಲೆಸಿದೆ. ಇದು ಸಿಕ್ಕಿಂನ  ರೊಂಗಲಿ ಉಪವಿಭಾಗವಾಗಿದೆ. ಅರಿಟಾರ್ ಸಿಕ್ಕಿಂ ಉಳಿದ ಪ್ರದೇಶಗಳಿಂದ ಪ್ರತ್ಯೇಕವಾದ ಸ್ಥಳವಾಗಿದೆ. ಇದು ಮೌಂಟ್ ಕಾಂಚನಜುಂಗಾ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಇತಿಹಾಸದತ್ತ ಒಂದು ಇಣುಕು ನೋಟ ...

1904 ರಲ್ಲಿ ಇಂಡೋ-ಟಿಬೆಟ್ ವ್ಯಾಪಾರ ಸಮಾವೇಶದ ನಂತರ  ಅರಿಟಾರ್ ಪ್ರಾಮುಖ್ಯತೆ ಹೆಚ್ಚಿತು. ಬ್ರಿಟಿಷರಿಂದ ಹೊಸ ರಸ್ತೆಗಳು ನಿರ್ಮಾಣವಾದವು. ಆದರೆ ಟಿಬೆಟಿಯನ್ನರ ನಡುವೆ ಯುದ್ಧದಲ್ಲಿ ಇದು ಹಾನಿಗೊಳಗಾಯಿತು. ಟಿಬೆಟಿಯನ್ನರು ಸಿಕ್ಕಿಂ ನ ಜೆಲೆಪ್ಲಾ/ಜೆಲೆಪಲಾ ಪಾಸ್ ಹತ್ತಿರದ ಲಿಂಗ್ಟುವನ್ನು  ವಶಪಡಿಸಿಕೊಂಡರು.

ಆ ನಂತರ  ಲಾರ್ಡ್ ಯಂಗ್ಹಸ್ಬೆಂಡ್ ಅಪ್ಪಣೆಯಂತೆ ಒಪ್ಪಂದಕ್ಕೆ ಬಂದು ಯುದ್ಧವನ್ನು ನಿಲ್ಲಿಸಲಾಯಿತು.  ಬ್ರಿಟಿಷರಿಗೆ ಟಿಬೆಟ್ ನಲ್ಲಿ ಏಕಸ್ವಾಮ್ಯ ವ್ಯಾಪಾರ ಸೌಲಭ್ಯಗಳನ್ನು ಸಾಧಿಸಬೇಕಾಗಿತ್ತು. ಈ ಮಾರ್ಗವು ಡಾರ್ಜಿಲಿಂಗ್ ನಲ್ಲಿರುವ ಪೆಡೊಂಗ್, ಕಾಲಿಂಪಾಂಗ್  ಪ್ರಾರಂಭಿಸಿ,  ನಥುಲಾ ಪಾಸ್, ರೆನೊಕ್, ಅರಿಟಾರ್ ಮತ್ತು ಜಲುಕ್ ಮೂಲಕ ಮುಂದುವರಿಯುತ್ತಿತ್ತು. ಆದ್ದರಿಂದ ಅರಿಟಾರ್ ಆ ಅವಧಿಯಲ್ಲಿ ಗ್ಯಾಂಗ್ಟೋಕ್ ಗಿಂತಲೂ ಹೆಚ್ಚು ವಾಣಿಜ್ಯವಾಗಿ  ಪ್ರಾಮುಖ್ಯತೆಗಳಿಸಿತ್ತು.

ಅರಿಟಾರ್ ನ ಸಂಸ್ಕೃತಿ ಮತ್ತು ಸಂಪ್ರದಾಯ ...

ಅರಿಟಾರ್ ನಲ್ಲಿ ಪ್ರತಿ ವರ್ಷ, ಏಪ್ರಿಲ್ ಕೊನೆಯ ಸಮಯದಲ್ಲಿ ಅಥವಾ ಮೇ ಪ್ರಾರಂಭದಲ್ಲಿ ಲಂಪೋಖರಿ ಪ್ರವಾಸೋದ್ಯಮ ಉತ್ಸವ ಆಯೋಜಿಸಲಾಗುತ್ತದೆ. ಹಬ್ಬದಲ್ಲಿ ಹಲವಾರು ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗುತ್ತಿದ್ದು,  ಸಾಹಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಅರಿಟಾರ್ ನಲ್ಲಿ ನಡೆಸಲಾಗುವ ಕೆಲವು ಪ್ರವಾಸಿ ಚಟುವಟಿಕೆಗಳೆಂದರೆ ಸರೋವರದ ಸುತ್ತ ಕುದುರೆ ಸವಾರಿ, ದೋಣಿ ವಿಹಾರ, ಸಾಂಪ್ರದಾಯಿಕ ಬಿಲ್ಲುಗಾರಿಕೆ ಸ್ಪರ್ಧೆ ಮತ್ತು ಹತ್ತಿರದಲ್ಲಿಯೇ ದೃಷ್ಟಿ ಹಾಯಿಸಲು ಸಣ್ಣ ಚಾರಣಗಳು ಮತ್ತು ಹತ್ತಿರದ ಬೆಟ್ಟಗಳನ್ನು ಏರುವುದು ಮೊದಲಾದವುಗಳನ್ನು ಹೆಸರಿಸಬಹುದು.

ಇಷ್ಟೇ ಅಲ್ಲ, ಸಾಹಸ ಮಾಡಲು ಬಯಸುವವರಿಗೆ ಇಷ್ಟವಾಗುವಂತಹ ಹಲವಾರು ಚಟುವಟಿಕೆಗಳು ಇಲ್ಲಿವೆ. ರಾಕ್ ಕ್ಲೈಂಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮಾಡಬಲ್ಲವರಿಗೆ ಈ ಪ್ರಕೃತಿ ತಾಣ ಕೈ ಬೀಸಿ ಕರೆಯುತ್ತದೆ. ಜನಾಂಗೀಯ ಸಂಸ್ಕೃತಿ ಮತ್ತು ಅರಿಟಾರ್ ನ ಪಾಕಪದ್ಧತಿ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ಸ್ಥಳೀಯ ಭಕ್ಷ್ಯಗಳ  ಸೇವೆಯ ಜೊತೆಗೆ, ಬೆಂಕಿ ಹುರಿದ ಒಣ ಮಾಂಸ ಮತ್ತು ಸ್ಥಳೀಯ ಬಿಯರ್ ಹಬ್ಬದ ಸಮಯದಲ್ಲಿ ಸಂದರ್ಶಕರಿಗೆ ನೀಡಲಾಗುವ ಅದ್ಭುತ ಔತಣಗಳು.

ಪ್ರವಾಸಿ ಆಕರ್ಷಣೆಗಳು

ಅರಿಟಾರ್ ನಲ್ಲಿ ಭೇಟಿ ಮಾಡಲು ಇರುವ ಇತರ ಆಕರ್ಷಣೆಗಳೆಂದರೆ,  ಲಂಪೋಖರಿ ಸರೋವರ ( ಅರಿಟಾರ್ ಸರೋವರ ಅಥವಾ ಘಾಟಿ -ಟಿಸೊ ಎಂದೂ ಕರೆಯಲಾಗುತ್ತದೆ), ಅರಿಟಾರ್ ಗುಂಪಾ, ಮಂಖಿಮ್ ಮತ್ತು ಲವ್ ದಾರ ಮೊದಲಾದವುಗಳು.

ನೀವು ಪ್ರಕೃತಿ ಮತ್ತು ಸಾಹಸ ಚಟುವಟಿಕೆಗಳಲ್ಲಿ ಪ್ರೀತಿ ಉಳ್ಳವರಾಗಿದ್ದರೆ ಅರಿಟಾರ್ ಸ್ಥಳಕ್ಕೆ ಭೇಟಿ ನೀಡುವುದು ಅಪೇಕ್ಷಣೀಯ. ನೀವು ಬೆಟ್ಟಗಳ ತಪ್ಪಲಲ್ಲಿ ಚಾರಣ ಅಥವಾ ಒಂದು ಹುಟ್ಟು ದೋಣಿ ಸವಾರಿ ತೆಗೆದುಕೊಳ್ಳಲು ಬಯಸುವವರಿಗೆ ಇದು ಸೂಕ್ತ ಸ್ಥಳ. ಅಲ್ಲದೇ ನೀವು ಕಾಡಿನಲ್ಲಿ ವಿಹಾರ ಮಾಡುತ್ತ ಎತ್ತರದ ಮರಗಳು ಮತ್ತು ಬೃಹತ್ ಪರ್ವತಗಳ ಸೌಂದರ್ಯವನ್ನು ಸವಿಯುತ್ತ ನಿಮ್ಮ ಸಮಯ ವನ್ನು ಕಳೆಯಬಹುದು.

ಅರಿಟಾರ್ ಪ್ರಸಿದ್ಧವಾಗಿದೆ

ಅರಿಟಾರ್ ಹವಾಮಾನ

ಅರಿಟಾರ್
20oC / 68oF
 • Partly cloudy
 • Wind: S 11 km/h

ಉತ್ತಮ ಸಮಯ ಅರಿಟಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅರಿಟಾರ್

 • ರಸ್ತೆಯ ಮೂಲಕ
  ಸಿಕ್ಕಿಂ ಇತರೆ ನಗರಗಳ ಮೂಲಕ ಅರಿಟಾರ್ ತಲುಪಲು ಅತ್ಯಂತ ಅನುಕೂಲಕರವಾದ ಟ್ಯಾಕ್ಸಿ ತೆಗೆದುಕೊಂಡು ಹೋಗುವುದು ಉತ್ತಮ. ಇದು ಕೇವಲ ಗ್ಯಾಂಗ್ಟೋಕ್ ನಗರದಿಂದ ಮೂರು ಗಂಟೆಗಳ ಪ್ರಯಾಣದ ಅವಧಿಯನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅರಿಟಾರ್ ಹತ್ತಿರದ ರೈಲ್ವೆ ನಿಲ್ದಾಣ ಸಿಲಿಗುರಿ ನಿಲ್ದಾಣ. ಸಿಲಿಗುರಿ ರೈಲು ನಿಲ್ದಾಣ, ಚೆನೈ, ತಿರುವನಂತಪುರ, ಸಿಕಂದರಾಬಾದ್, ಕೊಚ್ಚಿನ್ ಮತ್ತು ಗೌಹಾತಿ ಸೇರಿದಂತೆ ದೇಶದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಿಲಿಗುರಿ ವಿಮಾನ ನಿಲ್ದಾಣ ಅರಿಟಾರ್ ಸ್ಥಳಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣ ಮುಂಬೈ, ದೆಹಲಿ, ಚೆನೈ ಮತ್ತು ಕೋಲ್ಕತಾ ಮೊದಲಾದ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬ್ಯಾಂಕಾಕ್ ಮತ್ತು ಪಾರೋ ಮುಂತಾದ ಸ್ಥಳಗಳಿಗೆ ಅಂತರಾಷ್ಟ್ರೀಯ ವಿಮಾನಗಳೂ ಸಹ ಈ ವಿಮಾನ ನಿಲ್ದಾಣದಿಂದ ಲಭ್ಯ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
05 Aug,Wed
Return On
06 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Aug,Wed
Check Out
06 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Aug,Wed
Return On
06 Aug,Thu
 • Today
  Aritar
  20 OC
  68 OF
  UV Index: 4
  Partly cloudy
 • Tomorrow
  Aritar
  6 OC
  44 OF
  UV Index: 4
  Moderate rain at times
 • Day After
  Aritar
  6 OC
  43 OF
  UV Index: 4
  Moderate or heavy rain shower