ಲೆಗ್ಶಿಪ್ - ಎಲ್ಲವೂ ಸುಂದರಮಯ

ಲೆಗ್ಶಿಪ್ ಪಶ್ಚಿಮ  ಸಿಕ್ಕಿಂನಲ್ಲಿರುವ ಪಟ್ಟಣ ಇತ್ತೀಚಿನ ಕೆಲವು ವರ್ಷಗಳಿಂದ ಜನಪ್ರಿಯವಾಗುತ್ತಿದೆ. ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ ಮತ್ತು ಕಿರಾತೇಶ್ವರ ಮಹದೇವ ದೇವಾಲಯಗಳು ಸೇರಿವೆ. ಈ ದೇವಾಲಯದ ಉಲ್ಲೇಖವನ್ನು ಪ್ರಸಿದ್ಧ ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಕಾಣಬಹುದಾಗಿದೆ.

ದಿನನಿತ್ಯದ ನಗರ ಜೀವನದ ಜಂಜಡಗಳಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ವಿರಮಿಸಲು ಲೆಗ್ಶಿಪ್ ಸೂಕ್ತವಾದ ಸ್ಥಳ.

ಆಕರ್ಷಣೆಗಳು

ಸಿಕ್ಕಿಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ್ ಒಂದು. ಇದು ಸಾಹಸಪ್ರಿಯರಿಗೆ ಅಚ್ಚರಿಗಳನ್ನು ಒದಗಿಸುವ ತಾಣ. ಇಲ್ಲಿ ರಿವರ್ ರಾಫ್ಟಿಂಗ್, ಮೀನು ಶಿಕಾರಿ ಮತ್ತು ಈಜುನಂತಹ ಚಟುವಟಿಕೆಗಳನ್ನು ಮಾಡಬಹುದು. ಇದು ಲೆಗ್ಶಿಪ್ನ ಸ್ಥಳೀಯರು ಆಸಕ್ತಿಯಿಂದ ನಿರ್ವಹಿಸಲಾಗುತ್ತಿದೆ.

ಕಿರಾತೇಶ್ವರ ಮಹದೇವ ಮಂದಿರವು ರಂಗಿತ್ ನದಿ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ಕತೆಗಳಿವೆ. ಈ ದೇವಾಲಯವು ಪೆಲ್ಲಿಂಗ್ನಿಂದ 4 ಕಿಮೀ ದೂರದಲ್ಲಿದೆ. ಗೆಯ್ಜಿಂಗ್ ಮತ್ತು ಪೆಮ್ಯಾಂಗ್ತ್ಸೆಯಿಂದ ಸುಲಭವಾಗಿ ತಲುಪಬಹುದು.

ತಲುಪುವುದು ಹೇಗೆ

ಲೆಗ್ಶಿಪ್ ಗ್ಯಾಂಗ್ಟಾಕ್ನಿಂದ 16ಕಿಮೀ ದೂರದಲ್ಲಿದೆ. ಇಲ್ಲಿಗೆ ಟ್ಯಾಕ್ಸಿ, ಜೀಪ್ ಮತ್ತು ಖಾಸಗಿ ವಾಹನಗಳ ಮೂಲಕ ಬರಬಹುದು. ಸಿಲಿಗುರಿಯಲ್ಲಿರುವ ರೈಲ್ವೇ ನಿಲ್ದಾಣವು ಇಲ್ಲಿಗೆ ಸಮೀಪವಿರುವ ಏಕಮಾತ್ರ ರೈಲ್ವೇ ನಿಲ್ದಾಣ. ಈ ನಿಲ್ದಾಣವು ರಾಜ್ಯದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

 

Please Wait while comments are loading...