Search
  • Follow NativePlanet
Share
ಮುಖಪುಟ » ಸ್ಥಳಗಳು» ಲಾಚುಂಗ್

ಲಾಚುಂಗ್ - ನಯನ ಮನೋಹರ ಒಳನಾಡು

10

ಲಾಚುಂಗ್ ಸಿಕ್ಕಿಂ ನ ಆಕರ್ಷಕ ನಗರ. ಉತ್ತರ ಸಿಕ್ಕಿಂನ ಈ ಜಿಲ್ಲೆಯು ಸಮುದ್ರ ಮಟ್ಟದಿಂದ 9600 ಅಡಿ ಎತ್ತರದಲ್ಲಿದೆ. ಇದು ಲಾಚುಂಗ್ ಮತ್ತು ಲಾಚೆನ್ ನದಿ ಸೇರುವ ಸ್ಥಳವಾಗಿದೆ. ಲಾಚುಂಗ್ ಎಂದರೆ ಸಣ್ಣ ಪರ್ವತ ಎಂದು ಕವಿಗಳಿಂದ ಹೆಸರುವಾಸಿಯಾಗಿದೆ. ಬೌದ್ಧ ಮಠ ಯುಮ್ ಥಾಂಗ್ ನಿಂದಾಗಿ ಈ ಪ್ರದೇಶ ಹೆಸರುವಾಸಿಯಾಗಿದ್ದು, ಪ್ರಪಂಚದ ಎಲ್ಲಾ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಈ ಪ್ರದೇಶದಲ್ಲಿ ನೆಲಸಿರುವವರು ಲೆಪ್ಚ ಮತ್ತು ಟಿಬೆಟ್ ಮೂಲದವರು. ಅವರನ್ನು ಲಚುನ್ಗ್ಪಾಸ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಮಾತನಾಡುವ ಭಾಷೆಗಳು ನೇಪಾಳಿ, ಲೆಪ್ಚಾ ಮತ್ತು ಭುಟಿಯ ಆಗಿದೆ.

ಆಕರ್ಷಣೆಗಳು

ಲಾಚುಂಗ್ ಬೌದ್ಧ ಮಠ : ಇದು ಲಾಚುಂಗ್ ಮತ್ತು ಲಾಚೇನ್ ನದಿಯ ತಪ್ಪಲಿನಲ್ಲಿದೆ.  ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು 1888 ರಲ್ಲಿ ಕಟ್ಟಿದ ಬೌದ್ದರ  ನಿಂಗ್ಮ ಗೊಂಪ. ಇಲ್ಲಿ ನಿಂತು ಲಾಚುಂಗ್ ಕಣಿವೆ ಮತ್ತು ಸಂಪೂರ್ಣ ಹಸಿರನ್ನು ಕಾಣಬಹುದು. ಶಿಂಗ್ಬಾ  ರೊಡೋಡೆಂಡ್ರಾನ್(ದೊಡ್ಡ ಹೂ ಬಿಡುವ ಗುಲ್ಮಾ ಗಿಡ) ಅಭಯಾರಣ್ಯ ಉತ್ತರ ಸಿಕ್ಕಿಂ ನ ಪ್ರಕೃತಿ ಉದ್ಯಾನವನವಾಗಿದ್ದು, 3048 ರಿಂದ 4575 ಮೀ ವಿಸ್ತೀರ್ಣದಲ್ಲಿ ಹರಡಿದೆ. ಈ ಅಭಯಾರಣ್ಯದಲ್ಲಿ ರೊಡೋಡೆಂಡ್ರಾನ್(ದೊಡ್ಡ ಹೂ ಬಿಡುವ ಗುಲ್ಮಾ ಗಿಡ) ಪೊದೆಗಳು ಮತ್ತು ಗಸಗಸೆ, ಸಾಕ್ಸಿಫ್ರೆಜಸ್, ಜೇನ್ತಿಯನ್ಸ್ ಮತ್ತು ಪೊಟೆನ್ಟಿಲ್ಲ ಎಂಬ ಮರಗಳನ್ನು ಬೆಳೆಸಲಾಗಿದೆ. ಇಲ್ಲಿ ಹುಲಿಯ -ಸಿವೆಟ್ ನಂತಹ ಅಪರೂಪದ ಪ್ರಾಣಿಗಳನ್ನು ಕಾಣಬಹುದು. ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ನೋ ಗ್ರೈಂಡಿಂಗ್ ಮತ್ತು ಟ್ಯುಬಿಂಗ್  ಗಳನ್ನೂ ಒಳಗೊಂಡಿರುವ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ ಮೌಂಟ್ ಕಟಯೋ. ಹಿಮದಲ್ಲಿ ಆಟವಾಡಲು ಇಷ್ಟಪಡುವವರು ಇಲ್ಲಿಗೆ ಭೇಟಿ ನೀಡಲೇ ಬೇಕು.

ಹವಾಮಾನ

ಲಾಚುಂಗ್ ನಲ್ಲಿ ಚಳಿಗಾಲದ ಕೊರೆಯುವ ಚಳಿ ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿರುವುದರಿಂದ ಬೇಸಿಗೆ ಹದವಾಗಿರುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಲು ಬೇಸಿಗೆ ಪ್ರಾರಂಭವಾಗುವ ಕಾಲ ಸೂಕ್ತವಾಗಿದೆ.

ಲಾಚುಂಗ್ ಪ್ರಸಿದ್ಧವಾಗಿದೆ

ಲಾಚುಂಗ್ ಹವಾಮಾನ

ಉತ್ತಮ ಸಮಯ ಲಾಚುಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಾಚುಂಗ್

  • ರಸ್ತೆಯ ಮೂಲಕ
    ಲಾಚುಂಗ್ ತಲುಪಲು ಕ್ಯಾಬ್ ಮತ್ತು ಬಸ್ಸಿನ ವ್ಯವಸ್ಥೆ ಸಮರ್ಪಕವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಲಿಗುರಿ ಹತ್ತಿರವಿರುವ ನ್ಯೂ ಜಲಪೈಗುರಿ ಲಾಚುಂಗ್ ಗೆ ಹತ್ತಿರವಿರುವ ರೈಲು ನಿಲ್ದಾಣ. ಇದು ಲಾಚುಂಗ್ ನಿಂದ 139 ಕಿ ಮೀ ದೂರದಲ್ಲಿದೆ. ಜಲಪೈಗುರಿ, ಜಲಪೈಗುರಿ ರಸ್ತೆ ಮತ್ತು ನ್ಯೂ ಜಲಪೈಗುರಿ ಎಂಬ 3 ನಿಲ್ದಾಣಗಳಲ್ಲಿ ದಿನನಿತ್ಯದ ರೈಲು ನಿಲ್ದಾಣವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲಾಚುಂಗ್ ನಿಂದ 128 ಕಿ ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದ ಬಗ್ದೊಗ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ಹತ್ತಿರದಲ್ಲಿರುವ ವಾಯುನೆಲೆಯಾಗಿದೆ. ಇದು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಗವಾಹತಿ ಗೆ ಸಂಪರ್ಕ ಒದಗಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri