Search
  • Follow NativePlanet
Share
ಮುಖಪುಟ » ಸ್ಥಳಗಳು» ಯುಕ್ಸಾಮ್

ಯುಕ್ಸಾಮ್

14

ಯುಕ್ಸಾಮ್ ಸಿಕ್ಕಿಮ್ ರಾಜ್ಯದ ಪಶ್ಚಿಮ ಜಿಲ್ಲೆಯ ಒಂದು ಊರು. ಚಾರಣಿಗರ ಮೆಚ್ಚುಗೆಯ ಊರಾದ ಗೈಜಿಂಗ್ ನ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸಿಕ್ಕಿಮ್ ನ ಮೊದಲ ರಾಜಧಾನಿಯಾದ ಯುಕ್ಸಾಮ್ ಅನ್ನು ಅಭಿವ್ರುದ್ದಿಪಡಿಸಿದವರು ಪುತ್ಸೊಂಗ್ ನಾಮ್ಗ್ಯಾಲ್. ಇವರೇ ಸಿಕ್ಕಿಮ್ ನ ಮೊದಲ ರಾಜ. ಇವರನ್ನು ಚೊಗ್ಯಾಲ್ ಎಂದೂ  ಕರೆಯವರು. ಇವರು 1642 ಕ್ರಿ ಶಕದಲ್ಲಿ ರಾಜರಾಗಿದ್ದರು. ಚೊಗ್ಯಾಲ್ ವಂಶದವರು ಸಿಕ್ಕಿಮ್ ಅನ್ನು 333 ವರ್ಷ ಆಳಿದರು. ಯೊಕ್ಸೊಮ್ ನ ಒಂದು ವಿಶೇಷವೇನೆಂದರೆ  ಇವರು ಪರಿಸರ ಪ್ರೇಮ ಉಳ್ಳವರಾಗಿದ್ದು ಪರಿಸರ   ಪ್ರವಾಸೊದ್ಯಮದ  ಪ್ರೊತ್ಸಾಹಿತರಾಗಿದ್ದು ಸರಕಾರಕ್ಕೆ ಉತ್ತೇಜನ ನೀಡುವವರಾಗಿದ್ದಾರೆ. ಈ ಜಾಗ ಪರಿಸರಪ್ರೇಮಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುತ್ತದೆ.

ಯುಕ್ಸಾಮ್ ನ ಇಥಿಹಾಸ  

ಯುಕ್ಸಾಮ್ ಸಿಕ್ಕಿಮ್ ನ ಹಳೆಯ ರಾಜಧಾನಿ. ಈ ಯುಕ್ಸಾಮ್ ಎಂದರೆ  'ಮೂರು ಸನ್ಯಾಸಿ ವಿದ್ವಾಂಸರುಗಳು ಸೇರುವ ಸ್ಥಳ'. ಈ ಮೂರು ಸನ್ಯಾಸಿಗಳು (ಬೌದ್ಧ ಭಿಕ್ಷುಗಳು ) ಟಿಬೆಟ್ನಿಂದ ಇಲ್ಲಿಗೆ ಬಂದು ಇಲ್ಲಿನ ರಜನನ್ನಾಗಿ ಪ್ಹುನ್ತ್ಸೊಂಗ್ ನಾಮ್ಗ್ಯಾಲ್  ನನ್ನು ನೇಮಕ ಮಾಡಿದರು. ಹಾಗೂ ಅವನನ್ನು ಚೋಗ್ಯಾಲ್ ಎಂದು ಕರೆದರು. ಇಲ್ಲಿನ ಸುಂದರ ಗಿರಿಕಂದರಗಳನ್ನು ಹಿಂದೆ ನೀಪೆಮ್ಕಾಂಗ್ ಎಂದು ಕರೆಯುತ್ತಿದ್ದರು.

ಯುಕ್ಸಾಮ್ ಭೌಗೋಳಿಕ ಇತಿಹಾಸ

ಈ ಸುಂದರ ಯುಕ್ಸಾಮ್ ಗ್ರಾಮ ಸುಮಾರು 1780 ಮೀಟರ್ ಎತ್ತರದಲ್ಲಿ ಸುಮಾರು 2,006.9 ಎಕರೆ ಜಾಗದಲ್ಲಿ ಹರಡಿದೆ .ಈ ಸುಂದರ ಗ್ರಾಮ ಹಿಮಕಂದರಗಳ ಹೊದಿಕೆಯನ್ನು ಸುತ್ತಲೂ ಹೊಂದಿದ್ದು 'ಕಾಂಚನಜುಂಗ' ಪರ್ವತದ ಹೆಬ್ಬಾಗಿಲು ಎನಿಸಿಕೊಂಡಿದೆ.

ವಾತಾವರಣ

ಯುಕ್ಸಾಮ್ ಒಂದು ಸರಾಸರಿ ಎತ್ತರದಲ್ಲಿ ಸ್ಥಿತಗೊಂಡಿದ್ದು ಮಿತವಾದ ವಾತಾವರಣ ಹೊಂದಿದೆ. ಮಾರ್ಚಿನಿಂದ ಜೂನ್ ವರಗೆ ಇಲ್ಲಿನ ವಾತಾವರಣ ಆಹ್ಲಾದಕರವಾಗಿದ್ದು ಮತ್ತು ಸೆಪ್ಟೆಂಬರ್ ನಿಂದ  ನವಂಬರ್  ವರಗೆ ಸಹ ಚೆನ್ನಾಗಿರುತ್ತದೆ. ಆದರೆ ಚಳಿಗಾಲದಲ್ಲಿ ಅಂದರೆ ಡಿಸೆಂಬರ್ ನಿಂದ ಫೆಬ್ರವರಿ  ವರಗೆ ತುಂಬಾ ಚಳಿಯಿರುತ್ತದೆ. ಈ ಸ್ಥಳದ ಹೆಗ್ಗಳಿಕೆಯೆಂದರೆ ಉತ್ತಮ ಮತ್ತು ದಟ್ಟವಾದ ಕಾಡು. ತೂಹಲಕರವಾದ ಮೇಪಲ್, ಚೆಸ್ಟ್ನಟ್, ಮಂಗೋಲಿಯ ಸಿಲ್ವರ್ ಓಕ್ , ಅಗಲ ಎಲೆಗಳ ಓಕ್ ಮುಂತಾದ ಮರಗಳಿಂದ ಕೂಡಿದ ದಟ್ಟವಾದ  ಕಾಡಾಗಿದೆ.

ಭೇಟಿ ಕೊಡಬೇಕಾದ ಜಾಗಗಳು

ಇಲ್ಲಿ ಬೇಕಾದಷ್ಟು ಆಕರ್ಷಕ ಜಾಗಗಳು ಕಾಣಿಸುತ್ತವೆ. ಇವುಗಳಲ್ಲಿ ಪ್ರಮುಖವಾಗಿರುವುದು ರಾತ್ಹೊಂಗ್ ಚು ನದಿ, ಖೆಚೆವ್ಪಲ್ರಿ ಸರೋವರ, ಟಿಬೆಟನ್ ಬೌದ್ಧ ಗುರುಕುಲ, ದುಬ್ಡಿ ಗುರುಕುಲ, ಕಾರ್ತೊಕ್ ಗುರುಕುಲ ಹಾಗೂ ತಶಿದಿಂಗ್ ಗುರುಕುಲ.

ಯುಕ್ಸಾಮ್ ಪ್ರಸಿದ್ಧವಾಗಿದೆ

ಯುಕ್ಸಾಮ್ ಹವಾಮಾನ

ಉತ್ತಮ ಸಮಯ ಯುಕ್ಸಾಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಯುಕ್ಸಾಮ್

  • ರಸ್ತೆಯ ಮೂಲಕ
    ಗೈಜಿಂಗ್ ಮತ್ತು ಗಂಗ್ತೋಕ್ ನಿಂದ ರಸ್ತೆ ಮುಖಾಂತರ ಯುಕ್ಸಾಮ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಲಪೈಗುರಿಯಿಂದ ಯುಕ್ಸೊಂ 150 ಕಿಲೋಮೀಟರ್ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತುಂಬಾ ಹತ್ತಿರದ ವಿಮಾನ ನಿಲ್ದಾಣ 'ಬಾಗ್ದೋಗ್ರ', ಇದು ಸಿಲಿಗುರಿಯಿಂದ 12 ಕಿಲೋಮೀಟರ್ ದೂರದಲ್ಲಿದೆ ಹಾಗು ಯುಕ್ಸಾಮ್ ನಿಂದ 170 ಕಿಲೋಮೀಟರ್ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed