ಸಿಕ್ಕಿಂ ನ ಈ ಸುಂದರ ಸರೋವರ ಹಿಂದೂ ಮತ್ತು ಬೌದ್ಧರ ತೀರ್ಥ ಸ್ಥಳವಾಗಿದೆ. ಇದು ಇವರೀರ್ವರ ಕೋರಿಕೆಗಳನ್ನು ನೆರವೇರಿಸುವ ಹಾಗು ಪಾಪಮುಕ್ತರನ್ನಾಗಿಸುವ ಒಂದು ಪವಿತ್ರ ತೀರ್ಥವಾಗಿದೆ. ಇದನ್ನು ಖಚೋಟ್ ಪಾಲ್ರಿ ಎಂದೂ ಕರೆಯುತ್ತಾರೆ. ಖೆಚೆವ್ಪಲ್ರಿ ಸರೋವರವು ಇದೇ ಹೆಸರಿನ ಗ್ರಾಮದ ಹತ್ತಿರವಿದೆ. ಪವಿತ್ರವಾದ ಖೆಚೆವ್ಪಲ್ರಿ ಪರ್ವತ ಈ ಸರೋವರವನ್ನು ಆವರಿಸಿದೆ.
ಮತ್ತೊಂದೇನೆಂದರೆ ಈ ಸರೋವರ 'ದೆಮ್ಜೋಂಗ್' ಕಣಿವೆಯ ಒಂದು ಭಾಗ. ಈ ಸರೋವರದ ಸುತ್ತಾ ಬೌದ್ಧ ಪವಿತ್ರ ಧಾಮಗಳ ಸರಣಿಯೇ ಕಾಣಸಿಗುತ್ತದೆ. ಇವುಗಳಲ್ಲಿ ದುಬ್ಡಿ ತಶಿದಿಂಗ್ ಗುರುಕುಲ ಯುಕ್ಸಾಮ್ ಪೆಮಯಾನ್ಗತ್ಸೆ ಗುರುಕುಲ ರಬ್ದೆನ್ತ್ಸೆ ಪಾಲು ಮತ್ತು ಸಂಗ ಚೋಲಿಂಗ್ ಗುರುಕುಲ ಮುಖ್ಯವಾದವು.
ಕುತೂಹಲಕರವಾದ ಸಂಗತಿಯೇನೆಂದರೆ ಈ ಸರೋವರದಲ್ಲಿ ಯಾವುದೇ ಒಂದು ಎಲೆಯನ್ನು ಸಹ ಹಾಕಬಾರದು. ಹಾಗೆ ಹಾಕಿದ ಪಕ್ಷದಲ್ಲಿ ಪಕ್ಷಿಗಳು ಅದನ್ನು ಅಲ್ಲಿಂದ ಹೆಕ್ಕಿ ದೂರಕೊಂಡೊಯ್ದು ಬಿಸಾಡುತ್ತವೆ.