ರುಮ್ಟೆಕ್ - ಎಲ್ಲೆಲ್ಲೂ ನಿತ್ಯಹರಿದ್ವರ್ಣದ ಸಿರಿ

ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ನ ಸಮೀಪವಿರುವ ಪಟ್ಟಣ ರುಮ್ಟೆಕ್. ಟಿಬೆಟಿಯನ್ ಬೌದ್ಧರ ರುಮ್ಟೆಕ್ ಮಠದಿಂದಾಗಿ ಈ ಪ್ರದೇಶವು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.

ರುಮ್ಟೆಕ್ನ ಪ್ರವಾಸಿ ಆಕರ್ಷಣೆಗಳು

ರುಮ್ಟೆಕ್ನ ಪ್ರಮುಖ ಆಕರ್ಷಣೆ ರುಮ್ಟೆಕ್ ಮಠ. ಈ ಮಠವು ಬೆಟ್ಟದ ಮೇಲಿದೆ. ಇಲ್ಲಿಂದ ಗ್ಯಾಂಗ್ಟಾಕ್ ನಗರದ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು. ಮಠದಲ್ಲಿನ ವಾರ್ಷಿಕ ಆಚರಣೆಗಳ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೌದ್ಧ ಆಚರಣೆಗಳನ್ನು ತಿಳಿದುಕೊಳ್ಳಬಹುದು.

ರುಮ್ಟೆಕ್ನ ಮತ್ತೊಂದು ಆಕರ್ಷಣೆ ಜವಹಾರಲಾಲ ನೆಹರು ಬೊಟಾನಿಕಲ್ ಗಾರ್ಡನ್. ಇದು ರುಮ್ಟೆಕ್ ಮಠದ ಸಮೀಪದಲ್ಲಿದೆ. ಇಲ್ಲಿ ಹಲವು ಜಾತಿಯ ಸಸ್ಯಗಳು ಮತ್ತು ಹಿಮಾಲಯದ ಹೂಗಳನ್ನು ಕಾಣಬಹುದು. ಸಿಕ್ಕಿಂ ಪ್ರವಾಸೋದ್ಯಮ ಇಲಾಖೆಯವರು ಈ ಉದ್ಯಾನವನ್ನು ನೋಡಿಕೊಳ್ಳುತ್ತಿದ್ದಾರೆ.

ತಲುಪುವುದು ಹೇಗೆ?

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಬಾಗ್ಡೋರ ವಿಮಾನ ನಿಲ್ದಾಣ. ಇದು ದೆಹಲಿ ಮತ್ತು ಕೊಲ್ಕತ್ತಾಗಳೊಂದಿಗೆ ಸಂಪರ್ಕ ಹೊಂದಿದೆ. ಗ್ಯಾಂಗ್ಟಾಕ್ನಿಂದ ರುಮ್ಟೆಕ್ಗೆ ನಿಯಮಿತ ಬಸ್ ಸಂಚಾರ ಸೌಲಭ್ಯವಿದೆ. ಜೀಪುಗಳು ಕೂಡ ಸಿಗುತ್ತವೆ.

ಹವಾಮಾನ

ರುಮ್ಟೆಕ್ನಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಆಹ್ಲಾದಕರ ವಾತಾವರಣವಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ಚಳಿಗಾಲದ ಆರಂಭದ ದಿನಗಳು.

Please Wait while comments are loading...