ರಿಂಚೆಂಪಾಂಗ್ - ವರ್ಣನಾತೀತ ಅನುಭವ

ಪಶ್ಚಿಮ ಸಿಕ್ಕಿಂನ ದಟ್ಟ ಅರಣ್ಯಗಳ ನಡುವೆಯಿರುವ ರಿಂಚೆಂಪಾಂಗ್ ರಮಣೀಯ ಪರ್ವತ ದೃಶ್ಯಗಳು ಮತ್ತು ಸುಂದರವಾದ ಪ್ರದೇಶಗಳಿಂದ ಆವೃತವಾಗಿದೆ. ಇದು ಸಮುದ್ರ ಮಟ್ಟದಿಂದ 5576 ಅಡಿ ಎತ್ತರದಲ್ಲಿದೆ. ಚಿಕ್ಕ ಚಿಕ್ಕ ಚಾರಣಗಳಿಗೆ ಸೂಕ್ತವಾದ ಜಾಗ.

ರಿಂಚೆಂಪಾಂಗ್ನ ವೀಕ್ಷಣಾಸ್ಥಳಗಳು..

ರಿಂಚೆಂಪಾಂಗ್ ಭೌಗೋಳಿಕ ಮತ್ತು ಪ್ರಾಕೃತಿಕ ಸೌಂದರ್ಯದೊಂದಿಗೆ ಕಂಚನಜುಂಗ ಪರ್ವತ ಶ್ರೇಣಿಯ ಅದ್ಭುತ ದೃಶ್ಯಗಳನ್ನು ನೋಡಲು ಸೂಕ್ತವಾದ ಸ್ಥಳವಾದ್ದರಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ನೀವು ಕಂಚನ ಜುಂಗವನ್ನು ಪಟ್ಟಣದಿಂದ ನೋಡಲು ಪ್ರಯತ್ನಸಿದ್ದರೆ ನಿಮಗೆ ರಿಂಚೆಂಪಾಂಗ್ ಈ ತರಹದ ನೋಟ ನೋಡಲು ಸೂಕ್ತವಾದ ಸ್ಥಳ.

ರಿಂಚೆಂಪಾಂಗ್ನ ಐತಿಹಾಸಿಕ ಮಹತ್ವ

ಇಲ್ಲಿ ಸಿಕ್ಕಿಂನ ದೊರೆ ಚೊಗ್ಯಾಲ್ ಮತ್ತು ಬ್ರಿಟೀಷ್ ಪಡೆಗಳ ನಡುವೆ ಯುದ್ಧವು ನಡೆದಿತ್ತು. ಈ ಯುದ್ಧದಲ್ಲಿ ಹಲವು ಮಂದಿ ಬ್ರಿಟೀಷ್ ಸೈನಿಕರನ್ನು ಸಿಕ್ಕಿಂನ ಬುಡಕಟ್ಟು ಜನಾಂಗದವರಾದ ಲೆಪ್ಚಾಗಳು ಅಲ್ಲಿದ್ದ ಏಕಮಾತ್ರ ನೀರಿನ ಕೊಳಕ್ಕೆ ವಿಷ ಬೆರೆಸುವ ಮೂಲಕ ಕೊಂದರು. ಇಂದಿಗೂ ಈ ಕೊಳ ವಿಷಯುಕ್ತವಾಗಿದೆ. ಇದನ್ನು “ಬಿಖ್-ಪೊಖರಿ” ಎಂದರೆ ‘ವಿಷದ ಕೊಳ’ ಎಂದು ಕರೆಯುತ್ತಾರೆ.

ಪ್ರವಾಸಿ ಆಕರ್ಷಣೆಗಳು

ರಿಂಚೆಂಪಾಂಗ್ ಒಂದು ಮನೋಹರವಾದ ಸ್ಥಳ. ಪ್ರತಿ ಪ್ರವಾಸಿಗನು ಇಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾನೆ. ರಿಂಚೆಂಪಾಂಗ್ ಮಠ, ಮಾಗ್ಗಿ ದಾರ ಮತ್ತು ರವೀಂದ್ರ ಸ್ಮೃತಿ ವನ ಇವು ಇಲ್ಲಿನ ಪ್ರಮುಖ ಆಕರ್ಷಣೆಗಳು.

Please Wait while comments are loading...