ಮಂಗನ್ - ವಿಶೀಷ್ಟ ಅನುಭವ ನೀಡುವ ತಾಣ

ಉತ್ತರ ಸಿಕ್ಕಿಂ ನ ಜಿಲ್ಲಾಕೇಂದ್ರವಾಗಿರುವ ಮಂಗನ್, ಗ್ಯಾಂಗ್ಟಾಕ್ ನಿಂದ 67 ಕಿ. ಮೀ ದೂರದಲ್ಲಿದೆ. ಇದು ಇಲ್ಲಿ ಸುತ್ತಲಿನ ಪ್ರದೇಶಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಮಂಗನ್ ಇಲ್ಲಿ ನಡೆಯುವ ಸಂಗೀತೋತ್ಸವಕ್ಕೆ ಹೆಸರುವಾಸಿಯಾಗಿದೆ. ಪ್ರತೀವರ್ಷ ಡಿಸೆಂಬರ್ ನಲ್ಲಿ ನಡೆಯುವ ಈ ಉತ್ಸವ 3 ದಿನಗಳವರೆಗೆ ಸಾಗುತ್ತದೆ. ಸಾಂಪ್ರದಾಯಿಕ ಸಂಗೀತ ಹಾಡುಗಾರಿಕೆ, ಸ್ಥಳೀಯ ಕರಕುಶಲ ವಸ್ತುಗಳ ಮಾರಾಟ ಮತ್ತು ಆಹಾರೋತ್ಸವ ಈ ಸ್ಥಳವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ.

ಭೂಗೋಲ

ಮಂಗನ್ ಸಮುದ್ರ ಮಟ್ಟದಿಂದ 3136 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಟಿಬೇಟ್ ಸ್ವಾಯತ್ತ ಪ್ರದೇಶ, ಪಷ್ಚಿಮ ಚಿನಾದ ಕಿಂಘೈ ಪ್ರಾಂತ್ಯ ಹಾಗು ಲಡಾಖ್ ಮತ್ತು ಜಮ್ಮು ಕಾಶ್ಮೀರದ ಕೆಲವು ಭಾಗ ಹೊಂದಿರುವ ಟಿಬೇಟಿಯನ್ ಪ್ರಸ್ತಭೂಮಿಗೆ ಇದು ಹೆಬಾಗಿಲು ಎಂದೆ ಹೇಳಬಹುದು.

ಸಂಸ್ಕೃತಿ

ಮಂಗನ್ ಮೂರು ದಿನಗಳ ಕಾಲ ನಡೆಯುವ ಸಂಗೀತೊತ್ಸವಕ್ಕೆ ಹೆಸರುವಾಸಿಯಾಗಿದೆ. ಈ ಉತ್ಸವವನ್ನು ಪ್ರತಿ ಡಿಸೆಂಬರ್ 12 ರಿಂದ 14 ರ ವರೆಗೆ ಆಯೋಜಿಸಲಾಗುತ್ತದೆ. ಅಲ್ಲದೆ ಇಲ್ಲಿ ಆಹಾರ ಉತ್ಸವ, ಸಾಂಪ್ರದಾಯಿಕ ಸಂಗೀತ ಪ್ರದರ್ಶನಗಳನ್ನು ಕಾಣಬಹುದಾಗಿದೆ.

ಭಾಷೆ

ಈ ಪ್ರದೇಶವು ಟಿಬೇಟ್ ಹಾಗು ನೇಪಾಳಿಗೆ ಅತಿ ಹತ್ತಿರದಲ್ಲಿರುವುದರಿಂದ ಆ ಪ್ರಾಂತ್ಯಗಳ ಭಾಷೆಗಳೊಂದಿಗೆ ಇಲ್ಲಿನ ಸ್ಥಳೀಯ ಭಾಷೆಗಳು ಯಥೇಚ್ಚವಾಗಿ ಬಳಸಲ್ಪಡುತ್ತವೆ. ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಭಾಷೆಗಳೆಂದರೆ ನೇಪಾಳಿ, ಭೂತಿಯಾ, ಲೆಪ್ಚಾ, ಲಿಂಬು, ನೇವಾರಿ, ರೈ, ಗುರುಂಗ್, ಮಂಗರ್, ಶೆರ್ಪಾ, ತಮಂಗ್ ಮತ್ತು ಸುನ್ವರ್  

Please Wait while comments are loading...