Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗನ್ » ಹವಾಮಾನ

ಮಂಗನ್ ಹವಾಮಾನ

ಮಂಗನ್ ಸಿಕ್ಕಿಂ ನ ಇತರ ಪ್ರದೇಶಗಳಿಗಿಂತ ತಗ್ಗು ಪ್ರದೇಶವಾದುದರಿಂದ, ಇಲ್ಲಿ ವರ್ಷಪೂರ್ತಿ ಸಮಶೀತೋಷ್ಣ ವಾತಾವರಣವಿರುತ್ತದೆ. ಮಂಗನ್ ಗೆ ಭೇಟಿ ನೀಡಲು ಬೇಸಗೆಕಾಲ ಉತ್ತಮವಾಗಿರುತ್ತದೆ.

ಬೇಸಿಗೆಗಾಲ

ಏಪ್ರಿಲ್ ತಿಂಗಳಲ್ಲಿ ಶುರುವಾಗುವ ಬೇಸಗೆಕಾಲ ಜುಲೈ ತಿಂಗಳ ಮಧ್ಯ ಭಾಗದ ವರೆಗೆ ಮುಂದುವರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ 28 ರಿಂದ 10 ಡಿಗ್ರಿ ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ.

ಮಳೆಗಾಲ

ಮಂಗನ್ ನಲ್ಲಿ ಜುಲೈ ನಿಂದ ಸೆಪ್ಟೆಂಬರ್ ವರೆಗೆ ಮಳೆಯಾಗುತ್ತದೆ. ಮಳೆಗಾಲದಲ್ಲಿ ಇಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಹಿತವಲ್ಲ.

ಚಳಿಗಾಲ

ಚಳಿಗಾಲವು ಅಕ್ಟೋಬರ್ ನಿಂದ ಫೆಬ್ರವರಿ ತನಕ ಇರುತ್ತದೆ. ಇಲ್ಲಿನ ತಾಪಮಾನ 16 ರಿಂದ  -5 ಡಿಗ್ರಿ ವರೆಗೆ ಇರುತ್ತದೆ. ಚಳಿಗಾಲದ  ಪ್ರಾರಂಭದ ದಿನಗಳನ್ನು ಹೊರತುಪಡಿಸಿ, ಇತರ ಸಮಯದಲ್ಲಿ ಹವಾಮಾನ ವೈಪರಿತ್ಯದ ಕಾರಣ ಮಂಗನ್ ಗೆ ಪ್ರಯಾಣ ಮಾಡುವುದು ಸೂಕ್ತವಲ್ಲ.