ರುಮ್ಟೆಕ್ ಮಠ, ರುಮ್ಟೆಕ್

ರುಮ್ಟೆಕ್ ಮಠವು ಗ್ಯಾಂಗ್ಟಾಕ್ ಸಮೀಪದ ರುಮ್ಟೆಕ್ನಲ್ಲಿದೆ. ಇದು ಟಿಬೆಟಿಯನ್ ಬೌದ್ಧರ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಇದು ಧರ್ಮಚಕ್ರ ಕೇಂದ್ರ ಎಂದು ಕೂಡ ಹೆಸರಾಗಿದೆ.ಈ ಮಠವು ಸಮುದ್ರ ಮಟ್ಟದಿಂದ 5800 ಅಡಿ ಎತ್ತರದಲ್ಲಿದೆ. ಈ ಮಠವು ಟಿಬೆಟಿನ ಹೊರಗಿನ ಕಾಗ್ಯೂ ವಂಶದ ಮಹತ್ವಪೂರ್ಣ ಕೇಂದ್ರಗಳಲ್ಲಿ ಒಂದು.

ಟಿಬೇಟ್ ನಲ್ಲಿರುವ ಸುರ್ಫು ಮಠದ ಪ್ರತಿರೂಪವಾಗಿ ಈ ಮಠವನ್ನು ನಿರ್ಮಿಸಲಾಗಿದೆ. ನಾಲ್ಕು ಅಂತಸ್ತುಗಳುಳ್ಳ ಈ ಮಠವು ಸಿಕ್ಕಿಂ ನಲ್ಲಿರುವ ಅತಿ ದೊಡ್ಡ ಮಠ. ಚಿನೀಯರ ಆಕ್ರಮಣದಿಂದ ಬೇಸತ್ತು ಹದಿನಾರನೇಯ ಟಿಬೇಟ್ ಗ್ಯಾಲ್ವಾ ಕರಂಪಾರು ಇತರೆ ಬೌದ್ಧ ಸನ್ಯಾಸಿಗಳೊಡನೆ ರುಮ್ಟೆಕ್ ಗೆ ಬಂದರು. ಅಂದಿನ ರುಮ್ಟೆಕ್ ನ ಚೊಗ್ಯಾಲ್ ರವರು ಇವರಿಗೆ ಮಠ ಹಾಗು ಧಾರ್ಮಿಕ ಅಧ್ಯಯನವನ್ನು ಕೈಗೊಳ್ಳಲು ಒಂದು ಕೇಮ್ದ್ರವನ್ನು ನಿರ್ಮಿಸಲು ಭೂಮಿಯನ್ನು ನೀಡಿದರು.

ಈ ಮುಖ್ಯ ಮಠದ ಹಿಂಬದಿಯಲ್ಲಿ ಕರ್ಮಾ ನಾಲಂದಾ ಎಂಬ ಬೌದ್ಧರ ಅಧ್ಯಯನ ಕೇಂದ್ರವಿದ್ದು, ಅಲ್ಲಿ ಜಗತ್ತಿನ ಹಲವು ಭಾಗಗಳಿಂದ ವ್ಯಾಸಂಗ ಮಾಡಲು ಬಂದಿರುವ ಹಲವು ವಿದ್ಯಾರ್ಥಿಗಳನ್ನು ಕಾಣಬಹುದು. ಒಂದು ಸಣ್ಣ ಕೊಠಡಿಯನ್ನು ಕಾಣಬಹುದಾಗಿದ್ದು, ಅದರಲ್ಲಿ ಆಭರಣಾಲಂಕೃತ ಬಂಗಾರದ ಸ್ತೂಪವನ್ನು ಕಾಣಬಹುದು.

ರುಮ್ತಕ್ ಧರ್ಮ ಚಕ್ರ ಕೇಂದ್ರವು ಈ ಮಠದಿಂದ 2 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಕೇಂದ್ರದಲ್ಲಿ ಅತ್ತಿ ಅನನ್ಯ ಎನ್ನಬಹುದಾದ ಧಾರ್ಮಿಕ ಕಲಾಕೃತಿಗಳನ್ನು ಕಾಣಬಹುದಾಗಿದೆ. ಪ್ರತಿ ವರ್ಷದ ಹತ್ತನೇಯ ತಿಂಗಳಿನ 28 ಮತ್ತು 29 ರಂದು ಇಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಸಿಕ್ಕಿಂನಲ್ಲಿ ಅತಿಯಾಗಿ ಭೇಟಿ ನೀಡಲ್ಪಟ್ಟ ತಾಣಗಳಲ್ಲೊಂದು.  

Please Wait while comments are loading...