Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಚುಂಗ್ » ಹವಾಮಾನ

ಲಾಚುಂಗ್ ಹವಾಮಾನ

ಲಾಚುಂಗ್ ನಲ್ಲಿ ಚಳಿಗಾಲದ ಕೊರೆಯುವ ಚಳಿ ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿರುವುದರಿಂದ ಬೇಸಿಗೆ ಹದವಾಗಿರುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಲು ಬೇಸಿಗೆ ಪ್ರಾರಂಭವಾಗುವ ಕಾಲ ಸೂಕ್ತವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯ ಸಂದರ್ಭದಲ್ಲಿ ತಾಪಮಾನವು 28 ರಿಂದ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇದ್ದು ತಂಪಾಗಿಯೂ, ಆರಾಮದಾಯಕವಾಗಿಯೂ ಇರುತ್ತದೆ. ಇದು ಮಾರ್ಚ್ ನಿಂದ ಪ್ರಾರಂಭವಾಗಿ ಜೂನ್ ವರೆಗೆ ಇರುತ್ತದೆ. ಲಾಚುಂಗ್ ಸುತ್ತಲು ಬೇಸಿಗೆ ಆರಂಭದ ಕಾಲ ಸೂಕ್ತ.

ಮಳೆಗಾಲ

ನೈಋತ್ಯ ಮುಂಗಾರು ಲಾಚುಂಗ್ ಗೆ ಮಳೆ ತರುತ್ತದೆ. ಇದು ಜುಲೈ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಜನವರಿ ಇಲ್ಲಿ ಚಳಿಗಾಲ. 16 ರಿಂದ -5 ಡಿಗ್ರಿಗಳ ವರೆಗೆ ಉಷ್ಣಾಂಶ ಈ ಸಂದರ್ಭದಲ್ಲಿ ಇಳಿಯುತ್ತದೆ ಮತ್ತು ಈ ಸಮಯದಲ್ಲಿ ಹಿಮ ಬೀಳುವುದು ಇಲ್ಲಿ ಸಾಮಾನ್ಯ.