ಶಿವಾಜಿಯ ಏಣಿಯು ನೋಡಲೇಬೇಕಾದ ಸ್ಥಳ. ಮಾಥೆರಾನ್ನ ಸುತ್ತಲಿರುವ ಪ್ರದೇಶಗಳಲ್ಲೇ ಆಕರ್ಷಣೀಯವಾದ ಈ ಪ್ರದೇಶವು ಮಾಥೆರಾನ್ ಕಣಿವೆಯಿಂದ ಒನ್ ಟ್ರೀ ಹಿಲ್ ಪಾಯಿಂಟ್ಗೆ ಸಂಪರ್ಕವನ್ನುಹೊಂದಿದೆ. ಇದು ಏಣಿಯ ರೀತಿಯಲ್ಲಿ ನಿರ್ಮಿತವಾಗಿದೆ.
ಶಿವಾಜಿ ಮಹಾರಾಜ ಈ ಏಣಿಯನ್ನು ಬೇಟೆಗೆ ಮತ್ತು ನಿಸರ್ಗ ವೀಕ್ಷಣೆಗೆ ಬಳಸಿದ್ದ ಎಂದು ಹೇಳಲಾಗಿದೆ. ಇಡೀ ಮಾಥೆರಾನ್ ಪ್ರದೇಶವೇ ಭೂಮಿಯ ಮೇಲಿನ ಸ್ವರ್ಗದ ಹಾಗೆ ಕಾಣುವುದರಿಂದ, ಈ ಪ್ರದೇಶವೂ ಕೂಡಾ ಇದೇ ರೀತಿ ಜಲಪಾತಗಳು ಮತ್ತು ಹಸಿರಿನ ಹಿನ್ನೆಲೆಯನ್ನು ಹೊಂದಿರುವುದರಲ್ಲಿ ಆಶ್ಚರ್ಯವೇ ಇಲ್ಲ.
ಇದು ಚಾರಣಿಗರಿಗೆ ಮತ್ತು ಸಾಹಸೀ ಕೃತ್ಯದಲ್ಲಿ ಆಸಕ್ತಿಯಿದ್ದವರಿಗೆ ಇಷ್ಟವಾಗುವ ಪ್ರದೇಶ.