Search
 • Follow NativePlanet
Share
ಮುಖಪುಟ » ಸ್ಥಳಗಳು» ಸಿಮಡೆಗಾ

ಪ್ರಕೃತಿ ಮಡಿಲಿನಲ್ಲಿ ಬುಡಕಟ್ಟು ಜನಾಂಗದ ಅನುಭವಕ್ಕಾಗಿ ಸಿಮಡೆಗಾಕ್ಕೊಮ್ಮೆ ಭೇಟಿ ಕೊಡಿ

5

ಪ್ರಕೃತಿ ಸೌಂದರ್ಯ ಮತ್ತು ಬುಡಕಟ್ಟು ಜನಾಂಗದವರ ಜೀವನ ಅನುಭವವನ್ನು ಪಡೆಯಬೇಕಾದರೆ ಜಾರ್ಖಂಡ್ ನಲ್ಲಿರುವ ಸಿಮಡೆಗಾಗೆ ಒಮ್ಮೆ ಭೇಟಿ ನೀಡಬೇಕು. ಜಾರ್ಖಂಡ್ ನ ಜಿಲ್ಲೆಯಾಗಿರುವ ಸಿಮಡೆಗಾ ಜಿಲ್ಲಾಕೇಂದ್ರ ಹಾಗೂ ಪ್ರಮುಖ ನಗರ. ವಿಕಾಸದ ಹಾದಿಯಲ್ಲಿರುವ ಸಿಮಡೆಗಾ ಅರೆ ಪಟ್ಟಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದರೂ ಇಲ್ಲಿನ ಪ್ರಕೃತಿ ಸೌಂದರ್ಯದ ತಾಜಾತನ ಹಾಗೆ ಉಳಿದುಕೊಂಡಿದೆ.

ಈ ಪ್ರದೇಶದಲ್ಲಿ ಹಲವಾರು ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ. ಪ್ರವಾಸಿಗಳು ಸ್ಥಳೀಯ ಪರಿಸರದ ಅನುಭವದ ಖುಷಿ ಪಡೆಯಲು ಮತ್ತು ಹಚ್ಚ ಹಸಿರಿನ ಕಾಡುಗಳಲ್ಲಿ ಬಿಡಾರ ಹಾಕಿ ಸಮಯ ಕಳೆಯಲು ಇಲ್ಲಿಗೆ ಬರುತ್ತಾರೆ. ಇತರ ಕೆಲವು ಚಟುವಟಿಕೆಗಳು ಇಲ್ಲಿ ನಡೆಯುತ್ತಿರುದು ಸಾಮಾನ್ಯವಾಗಿದೆ.

ಸಿಮಡೆಗಾ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು:

ಸಿಮಡೆಗಾದಲ್ಲಿ ಕೆಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಕೆಲಘಡ್ ಅಣೆಕಟ್ಟು ಇದರಲ್ಲಿ ಪ್ರಮುಖವಾದದ್ದು. ಅಣಿಕಟ್ಟಿನ ಸುತ್ತಮುತ್ತಲು ಇರುವ ಬೆಟ್ಟಗಳಿಂದ ಇದನ್ನು ವೀಕ್ಷಿಸುವುದು ಕಣ್ಣಿಗೊಂದು ಹಬ್ಬ. ರಾಮರೇಖಾ ಧಾಮ, ದಂಗ್ಡಿ, ಕೆತುಂಗಾ ಧಾಮ, ಭನ್ವರ್ ಪಹಾರ್ ಮತ್ತು ಅಂಜರ್ ಪೀರ್ ಸಾಹಿಬ್ ನ ಮಝರ್ ಸಿಮಡೆಗಾದಲ್ಲಿರುವ ಇತರ ಕೆಲವು ಆಕರ್ಷಣೀಯ ಪ್ರವಾಸಿ ತಾಣಗಳು.

ಸಿಮಡೆಗಾದ ಇತಿಹಾಸ...

ಹಲವಾರು ರಾಜರುಗಳಿಂದ ಆಳಲ್ಪಟ್ಟಿರುವ ಸಿಮಡೆಗಾ ದೊಡ್ಡ ಇತಿಹಾಸವನ್ನು ಹೊಂದಿದೆ. ರಾಜ ಕತನ್ಗಡೊ ಆಳುತ್ತಿದ್ದ ಸಮಯದಲ್ಲಿ ಇದು ಬಿಹು ಕಲ್ಸರ್ಪುರ್ ಪರ್ಗನ ಎಂದು ಕರೆಯಲಾಗುತ್ತಿತ್ತು. ಕತನ್ಗಡೊ ಸಾವಿನ ಬಳಿಕ ಈ ಪ್ರದೇಶ ಮಹಾರಾಜ ಶಿವಕರ್ಣನ ಪಾಲಾಯಿತು. ಇದರ ಬಳಿಕ ಸಿಮಡೆಗಾದಲ್ಲಿ ಮುಂಡಾ ಮತ್ತು ಖರಿಯಾ ಹಾಗೂ ಒರವೊನ್ ಬುಡಕಟ್ಟು ಜನಾಂಗದವರು ನೆಲೆಸಲು ಆರಂಭಿಸಿದರು. ಕ್ರಿ. ಶ. 1503ರಲ್ಲಿ ಸಿಮಡೆಗಾವನ್ನು ಕಾಳಿಂಗ ರಾಜರು ಆಳುತ್ತಿದ್ದರು. ರಾಜ ಕುಟುಂಬದ ಮೂಲದವರು ಇಂದು ಕೂಡ ಸಿಮಡೆಗಾದಲ್ಲಿದ್ದಾರೆ.

ಸಿಮಡೆಗಾಗೆ ಭೇಟಿ ನೀಡಲು ಸೂಕ್ತ ಸಮಯ:

ಫೆಬ್ರವರಿಯಿಂದ ಎಪ್ರಿಲ್ ಸಮಯದಲ್ಲಿ ಸಿಮಡೆಗಾಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಸಿಮಡೆಗಾ ತಲುಪುವುದು ಹೇಗೆ:

ಜಾರ್ಖಂಡ್ ನ ಇತರ ಪ್ರಮುಖ ನಗರಗಳಿಗೆ ಸಿಮಡೆಗಾ ಒಳ್ಳೆಯ ಸಂಪರ್ಕ ಹೊಂದಿದೆ. ಸಿಮಡೆಗಾಗೆ ಹತ್ತಿರದ ವಿಮಾನ ನಿಲ್ದಾಣ ರಾಂಚಿ. ಇದು ಸಿಮಡೆಗಾದಿಂದ 162 ಕಿ.ಮೀ. ದೂರದಲ್ಲಿದೆ. ಇತರ ನಗರಗಳಿಂದ ಬಸ್ ಹಾಗೂ ರೈಲುಗಳ ಮೂಲಕ ಪ್ರಯಾಣಿಸಬಹುದು.

ಸಿಮಡೆಗಾ ಪ್ರಸಿದ್ಧವಾಗಿದೆ

ಸಿಮಡೆಗಾ ಹವಾಮಾನ

ಸಿಮಡೆಗಾ
33oC / 92oF
 • Sunny
 • Wind: W 4 km/h

ಉತ್ತಮ ಸಮಯ ಸಿಮಡೆಗಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಿಮಡೆಗಾ

 • ರಸ್ತೆಯ ಮೂಲಕ
  ರಾಂಚಿ, ಗುಮ್ಲಾ, ಲೊಹರ್ಡಾಗ, ಸಸಾರಾಮ್ ಮತ್ತು ರೂರ್ಕೆಲಾದಿಂದ ಸಿಮಡೆಗಾಗೆ ಬಸ್ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಒರಿಸ್ಸಾದ ರೂರ್ಕೆಲಾ ರೈಲ್ವೆ ನಿಲ್ದಾಣ ಸಿಮಡೆಗಾಗೆ ತುಂಬಾ ಹತ್ತಿರದ ರೈಲು ನಿಲ್ದಾಣ. ಇಲ್ಲಿಂದ ರಾಷ್ಟ್ರದ ವಿವಿಧ ನಗರಗಳಿಗೆ ಪ್ರಯಾಣಿಸಲು ರೈಲುಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಿಮಡೆಗಾಗೆ ಹತ್ತಿರದ ವಿಮಾನ ನಿಲ್ದಾಣ ರಾಂಚಿ. ಇಲ್ಲಿಂದ ಸಿಮಡೆಗಾಗೆ 162 ಕಿ. ಮೀ. ಪ್ರಯಾಣಿಸಬೇಕು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Jun,Mon
Return On
25 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Mon
Check Out
25 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Mon
Return On
25 Jun,Tue
 • Today
  Simdega
  33 OC
  92 OF
  UV Index: 9
  Sunny
 • Tomorrow
  Simdega
  27 OC
  80 OF
  UV Index: 9
  Sunny
 • Day After
  Simdega
  28 OC
  83 OF
  UV Index: 9
  Sunny

Near by City