Search
  • Follow NativePlanet
Share
ಮುಖಪುಟ » ಸ್ಥಳಗಳು» ಜಮಷೇಡಪುರ್

ಜಮಷೇಡಪುರ್ - ಭಾರತದ ಕೈಗಾರಿಕಾ ನಗರ

17

ಜಮಷೇಡಪುರ್, ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು ಸ್ಟೀಲ್ ಸಿಟಿ ಅಥವಾ ಟಾಟಾ ನಗರ ಎಂದೇ ಜನಪ್ರಿಯತೆಯನ್ನು ಪಡೆದಿದೆ.

ಜಮಷೇಡಪುರ್  ನಗರವು ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ಬಮ್ ಜಿಲ್ಲೆಯ ಪ್ರಧಾನ ಕಾರ್ಯಸ್ಥಾನವಾಗಿದೆ. ಇದು ಕೋಲ್ಕತಾ ಮತ್ತು ಪಾಟ್ನಾ ನಂತರ ಪೂರ್ವ ಭಾರತದಲ್ಲಿನ ಮೂರನೇ ಅತಿದೊಡ್ಡ ನಗರವಾಗಿದೆ.ಈ ನಗರವು ಭಾರತದ ದೊಡ್ಡ ಕೈಗಾರಿಕಾ ವಲಯಗಳ ಒಂದು ನೆಲೆಯಾಗಿದ್ದು, ಇದನ್ನು ಆದಿತ್ಯಪುರ ಎಂದು ಕರೆಯಲಾಗುತ್ತದೆ. ಇದು 1,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿದೆ.

ಜಮಷೇಡಪುರ್ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಜಮಷೇಡಪುರ್ ನಗರವು ಕೂಡ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಜಮಷೇಡಪುರವು ಭೌಗೋಳಿಕವಾಗಿ ಬೆಟ್ಟ ಮತ್ತು ಅರಣ್ಯದ ಸಮೀಪದಲ್ಲಿರುವುದು ಇದಕ್ಕೆ ಲಾಭವಾಗಿ ಪರಿಣಮಿಸಿದೆ. ಇದು ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿಂದ ಇನ್ನು ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಈ ನಗರದ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಜುಬಿಲಿ ಪಾರ್ಕ್. ಇದು ಜಮಷೇಡಪುರ್ ನಾಗರಿಕರಿಗೆ ಟಾಟಾ ಸ್ಟೀಲ ಕಂಪನಿಯು ತಾನು 5೦ ವರ್ಷ ಯಶಸ್ವಿಯಾಗಿ ಪೂರೈಸಿದ  ಹಿನ್ನೆಲೆಯಲ್ಲಿ ನೀಡಿದ ಕೊಡುಗೆಯಾಗಿದೆ. ಪ್ರತಿ ವರ್ಷ ಮಾರ್ಚ 3 ರಂದು ಈ ಪಾರ್ಕ್ ಸುಂದರವಾದ ಬೆಳಕಿನ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಈ ದಿನವನ್ನು ಸಂಸ್ಥಾಪಕರ ದಿನಾಚರಣೆ ಎಂದು ಆಚರಿಸಲಾಗುತ್ತದೆ.

ದಿಮ್ನ ಲೇಕ್ ಇದೊಂದು ಕೃತಕ ಜಲಾಶಯವಾಗಿದೆ ಹಾಗೂ ಇದು ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಪ್ರವಾಸಿಗರಿಗೆ ಸಂತೋಷವನ್ನು ನೀಡುವ ವಿನೋದ ತುಂಬಿದ ಅನೇಕ ಚಟುವಟಿಕೆಗಳನ್ನು ನೋಡಬಹುದು. ಲೇಕ್ ಜೆಟ್ಸ್ಕೈಯಿಂಗ್, ರೋಯಿಂಗ್ ಮತ್ತು ವಾಟರ್ ಸ್ಕೂಟಿಂಗ್ ರೀತಿಯ ಅನೇಕ ಚಟುವಟಿಕೆಗಳು ಇಲ್ಲಿ ಕಂಡುಬರುತ್ತವೆ.  ಈ ನಗರದ ಇತರ ಪ್ರಮುಖ ಆಕರ್ಷಣಾ ಸ್ಥಳಗಳೆಂದರೆ  ಟಾಟಾ ಸ್ಟೀಲ್ ಝಾಲೋಜಿಕಲ್ ಪಾರ್ಕ್, ಚಾಂದಿಲ್ ಆಣೆಕಟ್ಟು, ನದಿಗಳ ಸಂಗಮದ ಸ್ಥಳ, ಹುಡ್ಕೋ ಸರೋವರ, ಸೆಂಟರ್ ಆಫ್ ಎಕ್ಸಲೆನ್ಸ್ ( ಸಿ. ಇ), ಭಾಟಿಯ ಪಾರ್ಕ್, ಮೂಲಗಾಂವಕರ್ ಪಾರ್ಕ್, ಭುವನೇಶ್ವರಿ ದೇವಸ್ಥಾನ ಮತ್ತು ಇತರೆ ಆಕರ್ಷಣ ಸ್ಥಳಗಳು. ನಗರದಿಂದ 4೦ ಕಿ.ಮೀ ದೂರದಲ್ಲಿರುವ ಘಾಟಸೀಲ ಎಂಬ ಸಣ್ಣ ನಗರವು ತನ್ನ ಪ್ರಕೃತಿ ಸೌಂದರ್ಯದಿಂದ ಪ್ರಸಿದ್ದಿಯನ್ನು ಪಡೆದಿದೆ.

ಇತಿಹಾಸ

ಜಮಷೇಡಪುರ್ ನಗರವನ್ನು ಮುಂಚೆ ಸಾಕ್ಚಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮುಂದೆ 1918 ರಲ್ಲಿ ಮಹಾನ ಕೈಗಾರಿಕೋದ್ಯಮಿಯಾದ ಮತ್ತು ಸಂಸ್ಥಾಪಕರಾದ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರಿಗೆ ಕೃತಜ್ನತೆಯನ್ನು ಸಲ್ಲಿಸುವ ಸಲುವಾಗಿ ಈ ನಗರಕ್ಕೆ ಜೇಮಷೇಡಪುರ್ ಎಂದು ಮರು ನಾಮಕರಣ ಮಾಡಲಾಯಿತು. ಜೇಮಷೆಡಜಿ ಟಾಟಾ ಒಮ್ಮೆ ಪಿಟ್ಸಬರ್ಗಗೆ ಹೋಗಿ ಅಲ್ಲಿನ ಭೂ ಗರ್ಭ ತಜ್ನರನ್ನು ಭೇಟಿಯಾಗಿ  ಭಾರತದಲ್ಲಿ ಮೊದಲ ಸ್ಟೀಲ ಕಂಪನಿಯನ್ನು ಸ್ಥಾಪಿಸುವ ತಮ್ಮ ಕನಸನ್ನು ನನಸು ಮಾಡಲು  ಒಂದು ಉತ್ತಮವಾದ ಸ್ಥಳವನ್ನು ತೋರಿಸಿ ನಮಗೆ ಸಹಾಯ ಮಾಡಬೇಕೆಂದು ಕೇಳಿಕೊಂಡರಂತೆ. ಈ ಘಟನೆಯನ್ನು 19 ನೇ ಶತಮಾನದ ತಿರುವು ಎಂದೇ ಭಾವಿಸಲಾಗಿದೆ.

ಆದರೆ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾದ ಸೂಕ್ತ ಭೂಮಿ ಹುಡುಕಲು ಸುಮಾರು ಮೂರು ವರ್ಷ ಸಮಯ ಬೇಕಾಯಿತು. ಕೊನೆಗೆ ಸಾಕ್ಚಿ ಎಂಬ ಪ್ರದೇಶದಲ್ಲಿ ( ಈಗ ಟಾಟಾ ನಗರದ ಒಂದು ಭಾಗ)  ಇಂತಹ  ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾದ ಸೂಕ್ತ ಭೂಮಿ ದೊರಕಿತು. ಈ ಸಾಕ್ಚಿ ಪ್ರದೇಶವು  ಛೋಟಾ ನಾಗ್ಪುರ ಪ್ರಸ್ಥಭೂಮಿಯ ದಟ್ಟವಾದ  ಅರಣ್ಯದ ಸಮೀಪ ಕಂಡು ಬಂದಿತು.

ಭೌಗೋಳಿಕತೆ

ಜಮಷೇಡಪುರ್ ನಗರವು ಜಾರ್ಖಂಡ್ ರಾಜ್ಯದ ದಕ್ಷಿಣ ತುದಿಯಲ್ಲಿ ಕಂಡು ಬರುತ್ತದೆ.  ಇದು  ಒರಿಸ್ಸ ಮತ್ತು ಪಶ್ಚಿಮ ಬಂಗಾಳಗಳನ್ನು ತನ್ನ ಗಡಿರಾಜ್ಯಗಳನ್ನಾಗಿ ಹೊಂದಿದೆ. ಈ ನಗರವು ಖಾರ್ಕಿ ಮತ್ತು ಸುಬರ್ಣ ರೇಖಾ ನದಿಗಳ ಸಂಗಮ ಸ್ಥಳದಲ್ಲಿ ಸ್ಥಾಪನೆಯಾಗಿದ್ದು, ಈ ಎರಡು ನದಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ ಮತ್ತು ನಗರದ ಪ್ರಮುಖ ಅಂತರ್ಜಲವಾಗಿದೆ.  ಜೇಮಜೇಡಪುರ ನಗರವು ಗುಡ್ಡ ಬೆಟ್ಟಗಳಿಂದ ಸಹ ಆವೃತವಾಗಿದೆ. ಇದು  ಪಶ್ಚಿಮದಿಂದ ಪೂರ್ವದವರೆಗೆ ಹಬ್ಬಿರುವ ದಾಲ್ಮ ಬೆಟ್ಟಗಳಿಂದ ಮತ್ತು ದಟ್ಟವಾದ ಕಾಡುಗಳಿಂದ ಆವೃತವಾಗಿದೆ.

ಜಮಷೇಡಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯ

ಅಕ್ಟೋಬರ ಮತ್ತು ಮಾರ್ಚ ನಡುವಿನ ಅವಧಿಯು ಜಮಷೇಡಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಅಕ್ಟೋಬರನಲ್ಲಿ ಇಲ್ಲಿ ಆಹ್ಲಾದಕರ ವಾತಾವರಣ ಕಂಡು ಬರುತ್ತದೆ. ಇದರಿಂದ ಸುಂದರ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ.

ಜಮಷೇಡಪುರ್ ನಗರವನ್ನು ತಲುಪುವುದು ಹೇಗೆ?

ಜಮಷೇಡಪುರ್ ನಗರವು ಜಾರ್ಖಂಡ್ ರಾಜ್ಯದ ಇತರ ಪ್ರಮುಖ ನಗರಗಳೊಂದಿಗೆ ರೇಲ್ವೆ ಮತ್ತು ರಸ್ತೆಗಳ ಮುಖಾಂತರ ಉತ್ತಮ ಸಂಪರ್ಕವನ್ನು  ಹೊಂದಿದೆ. ಈ ನಗರವು ರೇಲ್ವೆ ಮತ್ತು ರಸ್ತೆ ಸೌಕರ್ಯಗಳ ಕಾರಣದಿಂದ ಉತ್ತಮ ಸಂಪರ್ಕ ಸೇತುವೆಯನ್ನು ಹೊಂದಿದೆ.

ಜಮಷೇಡಪುರ್ದ ಹವಾಮಾನ

ಮಾನ್ಸೂನ ತಿಂಗಳುಗಳಲ್ಲಿ ಇಲ್ಲಿಯ ಹವಾಮಾನ ತುಂಬಾ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಈ ನಗರದ ಸುಂದರ ಪ್ರಾಕೃತಿಕ ದೃಶ್ಯಗಳನ್ನು ಮತ್ತು ಇತರ ಸುಂದರ ಸ್ಥಳಗಳನ್ನು ನೋಡಿ ಆನಂದಿಸಬಹುದು. ಮತ್ತು ಮಳೆಗಾಲವನ್ನು ಇಷ್ಟಪಡುವ ಪ್ರವಾಸಿಗರು ಮಳೆಗಾಲದ ಸಮಯದಲ್ಲಿ ಇಲ್ಲಿ ಭೇಟಿ ನೀಡಿ ಸಂತೋಷವನ್ನು ಅನುಭವಿಸಬಹುದು. . ಅಕ್ಟೋಬರನಲ್ಲಿ ಇಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಇದರಿಂದ ಸುಂದರ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ.

ಜಮಷೇಡಪುರ್ ಪ್ರಸಿದ್ಧವಾಗಿದೆ

ಜಮಷೇಡಪುರ್ ಹವಾಮಾನ

ಉತ್ತಮ ಸಮಯ ಜಮಷೇಡಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಮಷೇಡಪುರ್

  • ರಸ್ತೆಯ ಮೂಲಕ
    ಜಮಷೇಡಪುರ್ ನಗರವು ಭಾರತದ ಇತರ ಭಾಗಗಳೊಂದಿಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿನ ಪ್ರಮುಖ ಹೆದ್ದಾರಿ ಎಂದರೆ ರಾಷ್ಟ್ರೀಯ ಹೆದ್ದಾರಿ 33. ಇದು ಮುಂಬಯಿ ಮತ್ತು ದೆಹಲಿ ನಗರಗಳೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ. ಇನ್ನೊಂದು ರಾಷ್ಟ್ರೀಯ ಹೆದ್ದಾರಿಯಾದ 6. ಇದು ಖರಗಪುರ ಮತ್ತು ಕೋಲ್ಕತ್ತ ನಗರಗಳೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ. ಸ್ಥಳೀಯ ಸಾರಿಗೆಗಾಗಿ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಸ್ಥಳೀಯ ಬಸಗಳು ಮತ್ತು ಅಟೋ ರಿಕ್ಷಾಗಳಿವೆ. ಇವು ಪ್ರವಾಸಿಗರ ಅತ್ಯಂತ ಜನಪ್ರಿಯ ಸಾರಿಗೆಯ ಮಾಧ್ಯಮಗಳಾಗಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮಷೇಡಪುರ್ ನಗರವು ಟಾಟಾನಗರ ರೇಲ್ವೆ ಸ್ಟೇಷನ ಎಂದೇ ಹೆಸರುವಾಸಿವಾಗಿದೆ. ಇದು ಜಾರ್ಖಂಡ ರಾಜ್ಯದ ಬಹು ಪ್ರಮುಖ ಜಂಕ್ಷನ ಆಗಿದೆ. ಹೌರಾ ನಂತರ ದಕ್ಷಿಣ ಪೂರ್ವ ರೈಲ್ವೆ ವಿಭಾಗದ ಎರಡನೇ ಅತ್ಯಂತ ಅವಿಶ್ರಾಂತ ನಿಲ್ದಾಣವಾಗಿದೆ. ಈ ನಗರವು ಕೋಲ್ಕತಾ, ಮುಂಬೈ, ದೆಹಲಿ, ಅಹಮದಾಬಾದ್, ಬೆಂಗಳೂರು, ನಾಗ್ಪುರ, ಭುವನೇಶ್ವರ್ , ಪುಣೆ ಮತ್ತು ಭಾರತದ ಇತರ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಯ ಇತರ ಪ್ರಮುಖ ಸ್ಟೇಷನಗಳೆಂದರೆ ಆದಿತ್ಯಪುರ, ಗಮರಿಯ,ಕಾಂದ್ರಾ, ಗೋವಿಂದಪುರ್ ಮತ್ತು ಸಾಲಗೈಹರಿ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜಮಷೇಡಪುರ್ ನಗರವು ಸೋನಾರಿ ವಿಮಾನ ನಿಲ್ದಾಣ ಎಂದು ಕರೆಯಲ್ಪಡುವ ಒಂದು ಸಣ್ಣ ವಿಮಾನ ನಿಲ್ದಾಣವನ್ನು ಹೊಂದಿದೆ. ಇದನ್ನು ಪ್ರಮುಖವಾಗಿ ಟಾಟಾ ಗ್ರೂಪನ ಚಾರ್ಟರ್ಡ್ ವಿಮಾನಗಳನ್ನು ತರಲು ಬಳಸಲಾಗುತ್ತದೆ. ಜಮಷೇಡಪುರ್ಕ್ಕೆ ಹತ್ತಿರವಾದ ಪ್ರಮುಖ ವಾಣಿಜ್ಯಾತ್ಮಕ ವಿಮಾನ ನಿಲ್ದಾಣಗಳೆಂದರೆ ಕೋಲ್ಕತ್ತ ಮತ್ತು ರಾಂಚಿ. ಇವೆರಡು ಕ್ರಮವಾಗಿ 3೦೦ ಕೀ ಮಿ ಮತ್ತು 130 ಕೀ ಮಿ ದೂರದಲ್ಲಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri