Search
 • Follow NativePlanet
Share
ಮುಖಪುಟ » ಸ್ಥಳಗಳು» ಕೆಯೊಂಝಾರ

ಕೆಯೊಂಜ್ಹಾರ ಪ್ರವಾಸೋದ್ಯಮ : ಸಮೃದ್ಧಿಯ ಭೂಮಿ

17

ಒಡಿಶಾದ ಉತ್ತರ ಅಂಚಿನಲ್ಲಿರುವ ಅತ್ಯಂತ ಸುಂದರ ಪ್ರದೇಶವೇ ಕೆಯೊಂಜ್ಹಾರ. ಇದು ರಾಜ್ಯದ ಅತೀ ದೊಡ್ಡ ಜಿಲ್ಲೆ ಮತ್ತು ಮಹಾನಗರ ಪಾಲಿಕೆಯೂ ಆಗಿದೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಜಾರ್ಖಂಡ್ ರಾಜ್ಯ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಕ್ರಮವಾಗಿ ಜೈಪುರ, ಧೇಂಕನಲ್ ಮತ್ತು ಮಯುರಭಂಜ್ ಆವರಿಸಿದೆ. ಪ್ರಖ್ಯಾತ ಕೆಯೊಂಜ್ಹಾರ ಪ್ರಸ್ಥಭೂಮಿಯಲ್ಲಿ ಬೈತರಾಣಿ ನದಿ ಹುಟ್ಟುತ್ತದೆ.

ಕೆಯೊಂಜ್ಹಾರ ಪ್ರವಾಸೋದ್ಯಮವು ವರ್ಷವಿಡೀ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಸಸ್ಯ ಸಂಪತ್ತು ಹಾಗೂ ಪ್ರಾಣಿಸಂಕುಲ, ಖನಿಜಗಳು ಮತ್ತು ಅದಿರಿನಿಂದ ಸಮೃದ್ಧವಾಗಿರುವ ಈ ಪ್ರದೇಶವು ಆಕರ್ಷಕ ಜಲಪಾತಗಳಿಂದ ತುಂಬಾ ಜನಪ್ರಿಯವಾಗಿದೆ. ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಕೆಯೊಂಜ್ಹಾರ. ಜಿಲ್ಲೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಭಾಗವನ್ನು ಅರಣ್ಯವು ವ್ಯಾಪಿಸಿದೆ ಮತ್ತು ಜಿಲ್ಲೆಯ ಹಲವು ಭಾಗಗಳಲ್ಲಿ ಮ್ಯಾಂಗನೀಸ್ ಅದಿರಿನ ಶ್ರೀಮಂತ ಮೂಲವಿದೆ. ಜಿಲ್ಲೆಯ ರೆಬಾನ ಮತ್ತು ಕಲಾಪತ ಪ್ರದೇಶಗಳಲ್ಲಿ ಹುಲಿಗಳು ಕಂಡುಬರುತ್ತದೆ.

ಕೆಯೊಂಜ್ಹಾರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಕೆಯೊಂಜ್ಹಾರ ಪ್ರವಾಸೋದ್ಯಮ ಪ್ರವಾಸಿಗಳಿಗೆ ತುಂಬಾ ಆಕರ್ಷಣೆ ಒದಗಿಸುತ್ತದೆ. ಕಂದಹಾರ ಜಲಪಾತ, ಸಂಘಗರ ಜಲಪಾತ, ಬಡ ಘಾಗರ ಜಲಪಾತ ಪ್ರವಾಸಿಗರ ಆಕರ್ಷಣೆಯ ತಾಣಗಳು. ಈ ಜಲಪಾತಗಳನ್ನು ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಘಾಟ್ ಗಾವ್ ನಲ್ಲಿರುವ ಮಂದಿರ ಮತ್ತೊಂದು ಪ್ರವಾಸಿ ತಾಣ. ಈ ಮಂದಿರಕ್ಕೆ ವರ್ಷವಿಡೀ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಗೊನಾಸಿಕಾ, ಗುಂಡಿಚಾಘಾಯಿ, ಭೀಮಕುಂಡ ಮತ್ತು ಮುರ್ಗಮಹಾದೇವ್ ಮಂದಿರ, ಜಿಲ್ಲಾ ಮ್ಯೂಸಿಯಂ ಇತರ ಪ್ರವಾಸಿ ತಾಣಗಳು. ಪ್ರಾಚೀನ, ಪ್ರಸಿದ್ಧ ಶಿವನ ಮಂದಿರವಿರುವ ಚಕ್ರತೀರ್ಥ ಪಿಕ್ನಿಕ್ ಗೂ ಒಳ್ಳೆಯ ತಾಣ.

ಸಿತಾ ಬಿನ್ಜ್ ಮತ್ತು ರಾಜನಗರ ಕೆಯೊಂಜ್ಹಾರ ಪ್ರವಾಸೋದ್ಯಮದ ಜನಪ್ರಿಯ ಐತಿಹಾಸಿಕ ಆಕರ್ಷಣೆಗಳು. ರಾಜನಗರದಲ್ಲಿ ಕೆಯೊಂಜ್ಹಾರದ ರಾಜನಿಗೆ ಸೇರಿದ ಪುರಾತನ ಬಂಗಲೆಯ ಅವಶೇಷವಿದೆ. ಈ ಪ್ರದೇಶದಲ್ಲಿ ದಾಧಿಬಮಾನ ಯಹೂದಿ ಮಂದಿರ ಮತ್ತು ರಘುನಾಥ ಯಹೂದಿ ಮಾತವಿದೆ. ಚಳಿಗಾಲದ ವೇಳೆ ರಾಜನಗರದ ಚಡೈ ಕುಡೂರ್ ಗೆ ವಲಸೆ ಪಕ್ಷಿಗಳು ಆಗಮಿಸುತ್ತವೆ. ದಿಯೊಗಾಂವ್ದ ಕುಶಲೇಶ್ವರ ಹಿಂದೆ ಬೌದ್ಧ ಕೇಂದ್ರವಾಗಿತ್ತು. ಇಲ್ಲಿನ ಕುಶಲೇಶ್ವರ ಮಂದಿರವೂ ಪ್ರಸಿದ್ಧವಾಗಿದೆ.

ಕೆಯೊಂಜ್ಹಾರ: ಪ್ರಾಚೀನ ಗೌರವದ ಪುನಸ್ಸಂಸ್ಕರಣೆ

ಜುಯಾಂಗ್ಸ್ ಮತ್ತು ಭುಯಾನ್ಸ್ ಈ ಜಿಲ್ಲೆಯ ಗೌರವವನ್ನು ಪುನಸ್ಸಂಸ್ಕರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡು ಬುಡಕಟ್ಟು ಜನಾಂಗಗಳು. ಈ ಎರಡು ಬುಡಕಟ್ಟು ಜನಾಂಗಗಳು ತುಂಬಾ ಪ್ರಾಚೀನ ಬುಡಕಟ್ಟು ಜನಾಂಗದವರು ಮತ್ತು ಈ ಪ್ರದೇಶದ ಮೂಲ ನಿವಾಸಿಗಳು.

ಕೆಯೊಂಜ್ಹಾರ ತೆರಳಲು ಸೂಕ್ತ ಸಮಯ

ನವಂಬರ್ ತಿಂಗಳಲ್ಲಿ ಹವಾಮಾನ ಪರಿಸ್ಥಿತಿ ಸಾಧಾರಣವಾಗಿರುವ ಕಾರಣ ಕೆಯೊಂಜ್ಹಾರಗೆ ಪ್ರಯಾಣಿಸಲು ಸೂಕ್ತ ಸಮಯ

ಕೆಯೊಂಜ್ಹಾರಗೆ ತಲುಪುವುದು ಹೇಗೆ

ಕೆಯೊಂಜ್ಹಾರಗೆ ನವಂಬರ್ ತಿಂಗಳಲ್ಲಿ ಭೇಟಿ ನೀಡಬೇಕು. ಈ ಸಮಯದಲ್ಲಿ ಭೇಟಿ ನೀಡುವುದು ಸೂಕ್ತ. ಇಲ್ಲಿಗೆ ವಿಮಾನ, ರೈಲು ಮತ್ತು ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ವಿಮಾನ ನಿಲ್ದಾಣ ಸಮೀಪದ ವಿಮಾನ ನಿಲ್ದಾಣ ಮತ್ತು ಕೆಯೊಂಜ್ಹಾರಗೆ ರೈಲಿನ ಮೂಲಕ ಜೆ.ಕೆ. ರೋಡ್ ರೈಲು ನಿಲ್ದಾಣ ಮೂಲಕ ತಲುಪಬಹುದು.

ಕೆಯೊಂಝಾರ ಪ್ರಸಿದ್ಧವಾಗಿದೆ

ಕೆಯೊಂಝಾರ ಹವಾಮಾನ

ಕೆಯೊಂಝಾರ
33oC / 92oF
 • Partly cloudy
 • Wind: W 5 km/h

ಉತ್ತಮ ಸಮಯ ಕೆಯೊಂಝಾರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೆಯೊಂಝಾರ

 • ರಸ್ತೆಯ ಮೂಲಕ
  ಕೆಯೊಂಜ್ಹಾರ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇದು ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 15 ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಖಾಸಗಿ ಬಸ್ ಮತ್ತು ಕಾರುಗಳು ಸುಲಭವಾಗಿ ಲಭ್ಯವಿದ್ದು, ಯಾವುದೇ ತೊಂದರೆಯಿಲ್ಲದೆ ತಲುಪಬಹುದು. ನೆರೆಯ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಈ ಪ್ರದೇಶದಿಂದ ರಸ್ತೆ ಮಾರ್ಗಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೆಯೊಂಜ್ಹಾರಗೆ ರೈಲು ಮೂಲಕ ತಲುಪಬೇಕಾದರೆ ಜೆ.ಕೆ. ರಸ್ತೆಯಲ್ಲಿರುವ ರೈಲು ನಿಲ್ದಾಣಕ್ಕೆ ಹೋಗಬೇಕು ಮತ್ತು ಇದು 114 ಕಿ.ಮೀ. ದೂರದಲ್ಲಿದೆ. ರಾಜ್ಯದ ಇತರ ಭಾಗಗಳಿಗೆ ರೈಲು ನಿಲ್ದಾಣದಿಂದ ಒಳ್ಳೆಯ ಸಂಪರ್ಕವಿದೆ ಮತ್ತು ರೈಲು ನಿಲ್ದಾಣದಿಂದ ಕೆಯೊಂಜ್ಹಾರಗೆ ತಲುಪಲು ಎರಡು ಗಂಟೆ ಬೇಕಾಗಿದೆ. ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ ಗಳು ಕೆಯೊಂಜ್ಹಾರಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ವಿಮಾನ ನಿಲ್ದಾಣ ಕೆಯೊಂಜ್ಹಾರಕ್ಕೆ ಸಮೀಪದ ವಿಮಾನ ನಿಲ್ದಾಣ. ವಿಮಾನ ನಿಲ್ದಾಣಕ್ಕೆ ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಿಗೆ ವಿಮಾನಗಳಿವೆ ಮತ್ತು ಕೆಯೊಂಜ್ಹಾರದ ಜಿಲ್ಲಾಕೇಂದ್ರಕ್ಕೆ ತಲುಪಲು ಕೆಲವು ಗಂಟೆಗಳು ಬೇಕು. ಈ ಪ್ರದೇಶ ಭುವನೇಶ್ವರ ವಿಮಾನ ನಿಲ್ದಾಣದಿಂದ 269 ಕಿ.ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 May,Mon
Return On
21 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Mon
Check Out
21 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Mon
Return On
21 May,Tue
 • Today
  Keonjhar
  33 OC
  92 OF
  UV Index: 8
  Partly cloudy
 • Tomorrow
  Keonjhar
  28 OC
  83 OF
  UV Index: 9
  Sunny
 • Day After
  Keonjhar
  29 OC
  84 OF
  UV Index: 9
  Sunny