ಗೊನಾಸಿಕಾ, ಕೆಯೊಂಝಾರ

ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿರುವ ಜನಪ್ರಿಯ ಪರ್ವತ ಗೊನಾಸಿಕಾ. ಬೈತರಾಣಿ ನದಿಯ ಮೂಲ ಮತ್ತು ಶ್ರೀಮಂತ ಐತಿಹಾಸಿಕ ಮೌಲ್ಯವಿರುವ ಪ್ರದೇಶವಾಗಿದೆ. ಕೆಯೊಂಜ್ಹಾರ ಜಿಲ್ಲಾ ಕಚೇರಿಯಿಂದ 45 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಕಾರಿನ ಮೂಲಕ ತಲುಪಲು ಅರ್ಧಗಂಟೆ ಸಾಕು. ಬ್ರಹ್ಮೇಶ್ವರ ಮಹದೇವ ಮಂದಿರವಿರುವ ಕಾರಣ ಈ ಪ್ರದೇಶವು ತುಂಬಾ ಪ್ರಸಿದ್ದಿಯಾಗಿದೆ. ಮೂಲದಿಂದ ಸ್ವಲ್ಪ ಮುಂದೆ ಸಾಗಿರ ಬಳಿ ಬೈತರಾಣಿ ಸ್ವಲ್ಪ ಭೂಮಿಯೊಳಗಿಂದ ಹರಿಯುತ್ತದೆ ಇದರ ಬಳಿಕ ಮತ್ತೆ ಮೇಲೆ ಬರುತ್ತದೆ.

ಈ ಸಂಪೂರ್ಣ ಹರಿವು ಗೋವಿನ ಮೂಗಿನ ಹೊಳ್ಳೆಯಂತೆ ಕಾಣಿಸುತ್ತದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಾರಾಂತ್ಯದಲ್ಲಿ ಸಮಯ ಕಳೆಯಲು ಇದು ಹೇಳಿಮಾಡಿಸಿದ ಜಾಗ. ಸರ್ಕಾರ ಆಯೋಜಿಸುವ ಪ್ರವಾಸಗಳಿವೆ ಮತ್ತು ಇಲ್ಲಿರುವ ಗೈಡ್ ಗಳು ಪ್ರವಾಸಿಗರಿಗೆ ಸ್ಥಳದ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಾರೆ.

Please Wait while comments are loading...