ಘಾತಗಾಂವ್, ಕೆಯೊಂಝಾರ

ಮಾ ತಾರಿನಿ ಮಂದಿರವನ್ನು ಹೊಂದಿರುವ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಈ ಪ್ರದೇಶವು ಧರ್ಮಶ್ರದ್ಧೆಯುಳ್ಳ ಪ್ರದೇಶ. ರಾಜ್ಯದ ರಾಜಧಾನಿ ಭುವನೇಶ್ವರದಿಂದ ಕೇವಲ ಒಂದು ಘಂಟೆ ಪ್ರಯಾಣಿಸಿದರೆ ಘಾತಗಾಂವ್ ಗೆ ತಲುಪಬಹುದು. ಹಿಂದೂಗಳ ನಂಬಿಕೆಯಂತೆ ಮಾ ತಾರಿನಿ ಶಕ್ತಿಯ ಮೂಲವೆಂದು ಸ್ಥಳೀಯ ಜನರು ನಂಬಿದ್ದಾರೆ. ಒರಿಯಾ ಸಂಸ್ಕೃತಿಯಲ್ಲಿ ತಾರಿಕ ದೇವತೆಯನ್ನು ಇತರ ದೇವ-ದೇವತೆಗಳಿಗಿಂತ ಅತ್ಯಂತ ಶಕ್ತಿಯುತ ಪರಿಗಣಿಸಲಾಗಿದೆ.

ಘಾತಗಾಂವ್ ನಲ್ಲಿ ದೇವಸ್ಥಾನದ ಬಗ್ಗೆ ಒಂದು ಪುರಾಣ ಕಥೆಯಿದೆ. ದೇವಸ್ಥಾನದಲ್ಲಿರುವ ದೇವತೆಯ ಮೂರ್ತಿಯ ಮುಖ ಕೆಂಪಗಿದೆ ಮತ್ತು ಎರಡು ದೊಡ್ಡ ಕಣ್ಣುಗಳಿವೆ. ಕೆಲವು ಮಂದಿ ಈ ಪ್ರದೇಶವನ್ನು ತಂತ್ರಗಳಿಗೆ ಯೋಗ್ಯ ಪ್ರದೇಶವೆಂದು ಪರಿಗಣಿಸಿದ್ದಾರೆ ಮತ್ತು ಈ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಇದು ರೂಢಿಯಲ್ಲಿದೆ. ದೇವತೆಯನ್ನು ಪೂಜಿಸಲು ವರ್ಷವಿಡೀ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Please Wait while comments are loading...