Search
  • Follow NativePlanet
Share
ಮುಖಪುಟ » ಸ್ಥಳಗಳು» ಸಂಬಲ್ಪುರ

ಸಂಬಲ್ಪುರ : ವಿಶಿಷ್ಟ ಅನುಭವಗಳ ಖಜಾನೆ

35

ಸಂಬಲ್ಪುರವು ಇತಿಹಾಸ ಮತ್ತು ಆಧುನಿಕತೆಯ ಮಿಶ್ರಣ. ಇಂದು ಸಂಬಲ್ಪುರ ಎಂದು ಹೆಸರಾಗಿರುವ ಈ ಊರು ಹಲವು ಆಳ್ವಿಕೆಗಳು ಮತ್ತು ಸರ್ಕಾರಗಳಡಿಯಲ್ಲಿ ಹಲವು ವಿಭಾಗಗಳನ್ನು ಮತ್ತು ವಿಲೀನಗಳನ್ನು ಕಂಡಿದೆ. ಹಲವು ಆಳ್ವಿಕೆಗಳ ಪರಿಣಾಮವಾಗಿ ಹಲವು ಸಂಸ್ಕೃತಿಗಳ ಪ್ರಭಾವವು ಇಂದಿನ ಸಂಬಾಲ್ಪುರವನ್ನು ರೂಪಿಸಿದೆ. ಇದು ರಾಜ್ಯದ ಪಶ್ಚಿಮ ಭಾಗದಲ್ಲಿದ್ದು ಸಾಂಸ್ಕೃತಿಕವಾಗಿ ಮತ್ತು ಪ್ರಾಕೃತಿಕವಾಗಿ ಶ್ರೀಮಂತವಾಗಿದೆ.

ಸಂಬಲ್ಪುರ- ವಜ್ರಗಳ ವ್ಯಾಪಾರಿ ಕೇಂದ್ರ. ಹಲವು ಶತಮಾನಗಳಿಂದಲೂ ಈ ಪ್ರದೇಶವು ವಜ್ರಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಮಹಾನದಿಯ ಸುತ್ತ ವಜ್ರಗಳು ಸಿಗುತ್ತವೆ. ಇದು ಗುಣಮಟ್ಟದಲ್ಲಿ ಉತ್ತಮವಾಗಿರುವುದರಿಂದ ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಇಲ್ಲಿ ಸಿಗುವ ಶುದ್ಧವಾದ ವಜ್ರವನ್ನು 146 ಕ್ಯಾರೆಟ್ “ತಾಜ್-ಇ-ಮಹ್” ಎಂದು ಕರೆಯುತ್ತಾರೆ. ಇದರರ್ಥ ‘ಚಂದ್ರನ ಕಿರೀಟ”.

ಸಂಬಲ್ಪುರ - ಕೈಮಗ್ಗದ ನಗರ

ಸಂಬಲ್ಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆ. ಇದು ಈ ಪ್ರದೇಶದ ವಿಶಿಷ್ಟ ಉತ್ಪತ್ತಿ. ಸೀರೆಯ ವಿನ್ಯಾಸ ಮತ್ತು ಬಣ್ಣಗಳು ಸಂಬಾಲ್ಪುರದ ಸೀರೆಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ. ಇಕ್ಕತ್ ಅಥವ ಬಂಧಕಲಾ ಸೀರೆಗಳೂ ಕೂಡ ಇದೇ ರೀತಿ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.  ಬಂಧಕಲಾ ಸೀರೆಗಳಲ್ಲದೆ ಬಂಧಕಲಾ ಬಟ್ಟೆಗಳನ್ನು ಸಲ್ವಾರ್ಗಳಿಗೆ, ಡ್ರೆಸ್ಗಳಿಗೆ ಮತ್ತು ಟವಲ್ಗಳಿಗೆ ಕೂಡ ಬಳಸಲಾಗುತ್ತದೆ. ಆದರೂ ಇಲ್ಲಿ ಬಟ್ಟೆಗಳನ್ನು ಕೊಳ್ಳುವಾಗ ನಕಲಿ ವಸ್ತುಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.

ಸಂಬಲ್ಪುರದ ಸುತ್ತ ಮುತ್ತಲ ಪ್ರವಾಸಿತಾಣಗಳು

ಸಂಬಲ್ಪುರದ ಪ್ರವಾಸೋದ್ಯಮವು ಹಲವು ಕಾರಣಗಳಿಂದ ಪ್ರಸಿದ್ಧವಾಗಿದೆ. ಹಿರಾಕುಡ್ ಡ್ಯಾಂ, ಸಮಾಲೇಶ್ವರಿ ದೇವಾಲಯ, ಹುಮಾದ ಬಾಗು ಆಲಯ, ಚಿಪಿಲಿಮ ಜಲವಿದ್ಯುತ್ ಯೋಜನೆ, ಘಂಟೇಶ್ವರಿ ದೇವಾಲಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಹಾನದಿ ಸಂಬಾಲ್ಪುರದ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಿದೆ. ದೆಬಿಗರ್ ವನ್ಯಜೀವಿಧಾಮ ಇಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇಲ್ಲಿನ ಅರಣ್ಯವು ಸಸ್ಯ ಮತ್ತು ಜೀವವೈವಿಧ್ಯತೆಯಿಂದ ಕೂಡಿದೆ. ಇಲ್ಲಿನ ಇನ್ನಿತರ ಪ್ರವಾಸಿ ಆಕರ್ಷಣೆಗಳೆಂದರೆ ಜಾನುವಾರು ದ್ವೀಪ, ಉಷಾಕೋಥಿ, ಕಂಧಾರ, ಹತಿಬರಿ ಮತ್ತು ವಿಕ್ರಂಖೋಲ್.

ಸಂಬಲ್ಪುರ ತಲುಪುವುದು ಹೇಗೆ?

ಸಂಬಲ್ಪುರವು ನೋಟ, ಧ್ವನಿ, ರುಚಿ ಹಾಗೂ ಅನುಭವಗಳಲ್ಲಿ ಪ್ರವಾಸಿಗರಿಗೆ ವಿಶಿಷ್ಟವಾದ ಅನುಭವಗಳನ್ನು ನೀಡುವುದರಿಂದ ಇದು ಪ್ರವಾಸಿಗರ ಸ್ವರ್ಗವೆನಿಸಿದೆ. ಸಂಬಾಲ್ಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಸೆಪ್ಟಂಬರ್ನಿಂದ ಮಾರ್ಚ್ವರೆಗೆ. ಸಂಬಾಲ್ಪುರಕ್ಕೆ ಉತ್ತಮ ರೈಲು, ರಸ್ತೆ ಮತ್ತು ವಾಯು ಮಾರ್ಗಗಳಿವೆ.

ಸಂಬಲ್ಪುರ ಪ್ರಸಿದ್ಧವಾಗಿದೆ

ಸಂಬಲ್ಪುರ ಹವಾಮಾನ

ಉತ್ತಮ ಸಮಯ ಸಂಬಲ್ಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಂಬಲ್ಪುರ

  • ರಸ್ತೆಯ ಮೂಲಕ
    ಸಂಬಲ್ಪುರದ ಮುಖ್ಯ ನಗರಗಳು ಉತ್ತಮ ರಸ್ತೆ ಸೌಲಭ್ಯವನ್ನು ಹೊಂದಿದೆ. ಸಾರಿಗೆ ಸಂಪರ್ಕ ಕೂಡ ಉತ್ತಮವಾಗಿದೆ. ರೌರ್ಕೆಲ-ಸಂಬಲ್ಪುರ ಹೆದ್ದಾರಿಯನ್ನು ಚತುಷ್ಪತದಿಂದ ಷಟ್ಪಥ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ. ಹಿರಾಕುಡ್ ಅಣೆಕಟ್ಟು ಮತ್ತು ಇತರ ಕೆಲವು ಪ್ರವಾಸಿತಾಣಗಳಿಗೆ ಹೋಗುವ ರಸ್ತೆಗಳು ಪ್ರಕೃತಿ ಸೌಂದರ್ಯದಿಂದಾಗಿ ಮನಸೆಳೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಂಬಲ್ಪುರ ಜಿಲ್ಲೆಯಲ್ಲಿ ಹಲವು ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ನಾಲ್ಕು ನಿಲ್ದಾಣಗಳು ಖೇತ್ರಜ್ಪುರ, ಫತಕ್, ಹಿರಾಕುಡ್ ಮತ್ತು ಸಂಬಲ್ಪುರ ನಗರಗಳಲ್ಲಿವೆ. ಸಂಬಲ್ಪುರ ನಗರದ ನಿಲ್ದಾಣದ ಜಂಕ್ಷನ್ ಭುವನೇಶ್ವರ- ಜರ್ಸಾಗುಡ ಮಾರ್ಗಲ್ಲಿದೆ. ಇನ್ನಿತರ ಜಂಕ್ಷನ್ಗಳು ಜರ್ಸಾಗಡ-ಬರ್ಗರ್ಹ ಮಾರ್ಗದಲ್ಲಿದೆ. ಇವುಗಳೊಂದಿಗೆ ಹಲವು ರೈಲು ಮಾರ್ಗಗಳು ಸಂಪರ್ಕ ಹೊಂದಿವೆ. ಆದರೆ ಗುವಹಾಟಿ, ಲಕ್ನೋ, ಡೆಹ್ರಾಡೂನ್ ಮತ್ತು ಇಂದೋರ್ ಇವುಗಳೊಂದಿಗೆ ಸಂಪರ್ಕ ಹೊಂದಿಲ್ಲ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳೆಂದರೆ ಬಿಜು ಪಟ್ನಾಯಕ್ ವಿಮಾನ ನಿಲ್ದಾಣವು 325 ಕಿಮೀ ದೂರದಲ್ಲಿದೆ ಮತ್ತು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವು 262 ಕಿಮೀ ದೂರದಲ್ಲಿದೆ. ಇದಲ್ಲದೆ ಜರ್ಸುಗುಡದಲ್ಲಿ ವಿಮಾನ ನಿಲ್ದಾಣವು ನಿರ್ಮಾಣ ಹಂತದಲ್ಲಿದೆ. ಒಡಿಶಾದಲ್ಲಿನ ವಿಮಾನ ನಿಲ್ದಾಣವು ಅತ್ಯಂತ ಹತ್ತಿರದ್ದಾಗಿದ್ದು 50 ಕಿಮೀ ದೂರದಲ್ಲಿದೆ. ಸಂಬಾಲ್ಪುರವು ಉತ್ತರ ಭಾರತ ಮಾತ್ರವಲ್ಲದೆ ಇಡೀ ಭಾರತದೊಂದಿಗೆ ಉತ್ತಮವಾಗಿ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat