Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊರ್ಬಾ

ಕೊರ್ಬಾ : ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ತಾಣ.

7

ಪ್ರಾಕೃತಿಕ ಸೌಂದರ್ಯಕ್ಕೆ, ದೇವಾಲಯಗಳಿಗೆ ಮತ್ತು ಕೋಟೆಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ತಾಣ. ಕೊರ್ಬಾವು ಚತ್ತೀಸ್‍ಗಢ್‍ನ ಶಕ್ತಿಯ ರಾಜಧಾನಿ. ಇದು ಹಚ್ಚ ಹಸಿರಿನಿ ಕಾಡುಗಳ ಮಧ್ಯೆ ಇರುವ ಅಹಿರನ್ ಮತ್ತು ಹಸ್‍ದೇವ್ ನದಿಗಳ ಸಂಗಮದಲ್ಲಿ ನೆಲೆಗೊಂಡಿದೆ. ಸಮುದ್ರ ಮಟ್ಟದಿಂದ 2520 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಚತ್ತೀಸ್‍ಗಢ್‍ನ ವಿದ್ಯುತ್ ಘಟಕಗಳು ಮತ್ತು ವಿದ್ಯುತ್ತಾಗಾರಗಳು ನೆಲೆಗೊಂಡಿವೆ. ಇದರ ಜೊತೆಗೆ ಇಲ್ಲಿ ಕೊರ್ಬಾ ಕೋಲ್‍ಫೀಲ್ಡ್ಸ್ ( ಕಲ್ಲಿದ್ದಲು ಘಟಕಗಳು) ಸಹ ನೆಲೆಗೊಂಡಿವೆ. ಇಲ್ಲಿನ ಸ್ಥಳೀಯ ಭಾಷೆಯನ್ನು ಚತ್ತೀಸ್‍ಗಢೀ ಎಂದು ಕರೆಯಲಾಗುತ್ತದೆ.

ಇಲ್ಲಿನ ಜನಸಂಖ್ಯೆಯಲ್ಲಿ ಬಹುಪಾಲು ಭಾಗ ಆದಿವಾಸಿಗಳಿಂದ ಕೂಡಿದೆ. ಗೊಂಡಾ, ಕವಾರ್, ಬಿಂಜ್‍ವಾರ್, ಸಟ್ನಾಮಿ, ರಾಜ್ ಗೊಂಡ್ ಇತ್ಯಾದಿ ಬುಡಕಟ್ಟು ಜನರು ಇಲ್ಲಿ ವಾಸವಾಗಿದ್ದಾರೆ. ಪ್ರಮುಖ ಹಬ್ಬಗಳ ಜೊತೆಗೆ ಇಲ್ಲಿ ಬುಡಕಟ್ಟು ಜನರ ಹಬ್ಬ ಹರಿದಿನಗಳನ್ನು ಸಹ ವೈಭವದಿಂದ ಆಚರಿಸಲಾಗುತ್ತದೆ. ಅವುಗಳಲ್ಲಿ  ಪೊಲ, ಹರೇಲಿ, ಕರ್ಮ, ದೇವ್ ಉತ್ನಿ ಇತ್ಯಾದಿ ಹಬ್ಬಗಳು ಪ್ರಮುಖವಾದವುಗಳಾಗಿವೆ. ಪೊಲ ಹಬ್ಬವನ್ನು ಎತ್ತುಗಳನ್ನು ಆರಾಧಿಸುವ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಎತ್ತುಗಳ ಓಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಹರೇಲಿ ಹಬ್ಬವನ್ನು ಶ್ರಾವಣ ಮಾಸದಲ್ಲಿ ರೈತರು ಅತ್ಯಂತ ಶ್ರದ್ಧಾ- ಭಕ್ತಿ ಹಾಗು ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ.

ಈ ಪ್ರಾಂತ್ಯವು ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಾಗಿ ಹೆಸರುವಾಸಿಯಾಗಿದೆ. ವಸ್ತ್ರಗಳ ತಯಾರಿಕೆಯಲ್ಲಿ ಬಳಸುವ ಉತ್ಕೃಷ್ಟ ದರ್ಜೆಯ ಕೋಸ ರೇಷ್ಮೆಯನ್ನು ಉತ್ಪಾದಿಸುವ ಸಲುವಾಗಿ ಈ ಪ್ರಾಂತ್ಯವು ಭಾರೀ ಖ್ಯಾತಿಯನ್ನು ಪಡೆದಿದೆ. ಕೋಸ ಸೀರೆಗಳು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿವೆ. ಕೋಸ ಸೀರೆಗಳನ್ನು ಇಲ್ಲಿನ ಹಾಟ್‍ಗಳಲ್ಲಿ ಅಥವಾ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ.

ಕೊರ್ಬಾದ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು

ಕೊರ್ಬಾದ ಸುತ್ತ- ಮುತ್ತ ಇರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದವುಗಳು- ಮಡವ ರಾಣಿ, ಕಂಕಿ, ಕೊಸಗೈಗಢ್, ಕೆಂಡೈ ಜಲಪಾತ ಮತ್ತು ಚೈತುರ್ ಗಢ್ ಕೋಟೆಗಳು ಪ್ರಮುಖವಾದವುಗಳಾಗಿವೆ. ಇಲ್ಲಿನ ದೇವಾಲಯ ಮತ್ತು ಕೋಟೆಗಳನ್ನು ನೋಡಬಹುದಾದವುಗಳಾಗಿವೆ. ಇವುಗಳೆಲ್ಲದರ ಜೊತೆಗೆ ಈ ಸ್ಥಳದಲ್ಲಿನ ಪ್ರಾಕೃತಿಕ ಸೌಂದರ್ಯವು ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುತ್ತದೆ. ನಯನ ಮನೋಹರವಾದ ಕೆಂಡೈ ಜಲಪಾತವು ಪ್ರವಾಸಿಗರನ್ನು ತನ್ಮಯಗೊಳಿಸುತ್ತದೆ. ಚೈತುರ್ ಗಢ್ ಕೊಟೆಯು ಈ ಪ್ರಾಂತ್ಯದ  ಪ್ರಸಿದ್ಧ ಕೋಟೆಯಾಗಿದೆ. ಇಲ್ಲಿಗೆ ನವರಾತ್ರಿಯ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ.

ಕೊರ್ಬಾ ಹವಾಮಾನ

ಕೊರ್ಬಾದಲ್ಲಿ ಹವಾಮಾನವು ಸ್ವಲ್ಪ ಅಧಿಕ ಉಷ್ಣಾಂಶದಿಂದ ಕೂಡಿರುತ್ತದೆ. ಏಕೆಂದರೆ ಇದು ಉಷ್ಣೋಧಿಕ ಹವಾಮಾನದ ಪ್ರದೇಶದಲ್ಲಿ ನೆಲೆಗೊಂಡಿದೆ.

ಕೊರ್ಬಾ ಪ್ರಸಿದ್ಧವಾಗಿದೆ

ಕೊರ್ಬಾ ಹವಾಮಾನ

ಉತ್ತಮ ಸಮಯ ಕೊರ್ಬಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊರ್ಬಾ

  • ರಸ್ತೆಯ ಮೂಲಕ
    ರೈಪುರ್ ಮತ್ತು ಬಿಲಾಸ್‍ಪುರಗಳಿಂದ ಇಲ್ಲಿಗೆ ನಿರಂತರವಾಗಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊರ್ಬಾವು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ. ಇದು ಚೆಂಪ ಗೆರ್ವ ರಸ್ತೆಯಲ್ಲಿ ನೆಲೆಗೊಂಡಿದೆ. ಬಿಲಾಸ್‍ಪುರ್ ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಇಲ್ಲಿಗೆ ದೇಶದ ಪ್ರಮುಖ ನಗರಗಳಿಂದ ರೈಲುಗಳು ಬಂದು ಹೋಗುತ್ತಿರುತ್ತವೆ. ಹಲವಾರು ಎಕ್ಸ್ ಪ್ರೆಸ್ ರೈಲುಗಳು ಕೊರ್ಬಾದ ಮೂಲಕ ಹಾದು ಹೋಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರೈಪುರದಲ್ಲಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat