Search
 • Follow NativePlanet
Share
ಮುಖಪುಟ » ಸ್ಥಳಗಳು» ಕಬೀರಧಾಮ್

ಕಬೀರ್ ಧಾಮ : ಪುರಾತತ್ವ ಮತ್ತು ಸೌಂದರ್ಯಕ್ಕಾಗಿ

30

ಕಬೀರಧಾಮವನ್ನು ಈ ಮುಂಚೆ ಖಾವರ್ಧಾ ಜಿಲ್ಲೆ ಎಂದು ಕರೆಯಲಾಗುತ್ತಿತ್ತು. ಇದು ದುರ್ಗ, ರಾಜನಂದಗಾಂವ, ರಾಯಪುರ ಮತ್ತು ಬಿಸಲಾಪುರದ ನಡುವೆ ಇದೆ. ಕಬೀರಧಾಮವು ಸುಮಾರು 4447.5 ಚದುರ ಕೀಲೊ ಮೀಟರ ವ್ಯಾಪ್ತಿ ಪ್ರದೇಶವನ್ನು ಹೊಂದಿದ್ದು, ಶಾಂತ ಮತ್ತು ಅಹ್ಲಾದಕರ ಸ್ಥಳವಾಗಿದೆ.

ಪ್ರಕೃತಿ ಪ್ರಿಯರಿಗೆ ಹೇಳಿ ಮಡಿಸಿರುವ ಸ್ಥಳ ಇದಾಗಿದ್ದು, ಇದರ ಸುತ್ತಮುತ್ತಲೂ ಅರಣ್ಯಗಳು, ಪರ್ವತಗಳು, ದಾರ್ಮಿಕ ಶಿಲ್ಪಗಳು ಇವೆ. ಕಬೀರಧಾಮದ ಉತ್ತರ ಮತ್ತು ಪಶ್ಚಿಮ ಭಾಗಗಳು ಸಾತ್ಪುರ ಪರ್ವತ ಶ್ರೇಣಿಗಳ ಮೈಕೆಲ್ ಪರ್ವತಗಳಿಂದ ಸುತ್ತುವರೆದಿದೆ. ಇದು ಸಾಕರಿ ನದಿಯ ದಕ್ಷಿಣ ತೀರದ ಮೇಲೆ ಇದೆ. ಇದು ಇಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಮೆರಗನ್ನು ನೀಡಿದೆ. ಇಲ್ಲಿ ಹರಡಿರುವ ಹಸಿರು, ಅರಣ್ಯಗಳು ಮತ್ತು ಬೆಟ್ಟಗಳು ಈ ಸ್ಥಳವನ್ನು ಹೆಚ್ಚು ನೆನೆಪಿನಲ್ಲಿಡುವಂತೆ ಮಾಡುತ್ತವೆ.

ಗುರು ಕಬೀರರ ನೆನೆಪಿನಲ್ಲಿ ಈ ಸ್ಥಳಕ್ಕೆ ಕಬೀರ ಧಾಮ ಎಂದು ಹೆಸರು ಬಂದಿದೆ. ಕಬೀರ ಅನುಯಾಯಿಯಾದ ಧರ್ಮದಾಸರು ಸಹ ಕಬೀರಧಾಮದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇದು ಕಬೀರ ಪಂಥದ ಗುರು ಗಡ್ಡಿ ಪೀಠ ಎಂದು 1806 ರಿಂದ 1903 ರವರೆಗೆ ಉಳಿದುಕೊಂಡಿತ್ತು. ಖಾವರ್ಧಾವನ್ನು 1751 ರಲ್ಲಿ ಮಹಾಬಲಿ ಸಿಂಗನು ನಿರ್ಮಿಸಿದನು. ಇದರ ಹೆಸರನ್ನು 2003 ರಲ್ಲಿ ಕಬೀರಧಾಮ ಎಂದು ಬದಲಾಯಿಸಲಾಯಿತು. ಇದು ಮುಂಚೆ ಬ್ರಿಟಿಷ ಆಡಳಿತದ ಸಮಯದಲ್ಲಿ ಪ್ರಾಂತ್ಯ ರಾಜ್ಯವಾಗಿತ್ತು ಮತ್ತು ಬಿಸಲಾಪುರದ ಒಂದು ಭಾಗವಾಗಿತ್ತು.

ಇಲ್ಲಿ ವಾಸವಾಗಿರುವ ಸ್ಥಳಿಯರು ಬಳಸುವ ಭಾಷೆ ಎಂದರೆ “ಅಗರಿಯ” ವಿಶೇಷವಾಗಿ ಇದನ್ನು ಮೈಕೆಲ ಬೆಟ್ಟದ ಪ್ರದೇಶಕ್ಕೆ ಸೇರಿದ ಜನರು ಈ ಭಾಷೆಯನ್ನು ಹೆಚ್ಚು ಬಳಸುತ್ತಾರೆ. ಹಫ್ ಮತ್ತು ಫೋಕ್ ಕಬೀರಧಾಮದಲ್ಲಿ ಹರಿಯುವ ಎರಡು ನದಿಗಳಾಗಿವೆ. ಮೈಕೆಲ ಪರ್ವತದಲ್ಲಿರುವ ಎತ್ತರದ ಶಿಖರ ಎಂದರೆ ಕೇಸ್ಮರ್ದ. ಅಂತಿಮವಾಗಿ ಕಬೀರಧಾಮವು ಪ್ರವಾಸಿಗರ ಆಕರ್ಷಕ ತಾಣವಾಗಿದೆ.

ಕಬೀರಧಾಮ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಕಬೀರಧಾಮವು ಭೋರಮ ದೇವ ದೇವಾಲಯದ ಕಾರಣದಿಂದಾಗಿ ಪ್ರಸಿದ್ಧಿಯನನು ಪಡೆದಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು, ನೋಡಲು ಖುಜರಾಹೋ ದೇವಾಲಯದಂತಿದೆ. ಅದ್ದರಿಂದ ಈ ದೇವಸ್ಥಾನವನ್ನು “ ಛತ್ತೀಸಘರ ಖುಜರಾಹೋ ದೇವಸ್ಥಾನ” ಎಂದು ಕರೆಯಲಾಗುತ್ತದೆ. ಈ ದೇವಾಲಯವು ಜಿಲ್ಲಾ ಮುಖ್ಯ ಕೇಂದ್ರದಿಂದ 18 ಕೀಲೊ ಮೀಟರ ದೂರದಲ್ಲಿದ್ದು, ಐತಿಹಾಸಿಕವಾಗಿಯೂ ಮತ್ತು ಪುರಾತತ್ವವಾಗಿಯೂ ಮಹತ್ವವನ್ನು ಪಡೆದಿದೆ.

ಕಬೀರಧಾಮವು ಅನೇಕ ಆಡಳಿತಗಾರರನ್ನು ಕಂಡಿದೆ. ನಾಗವಂಶಿ ರಾಜರು 9 ರಿಂದ 14 ನೇ ಶತಮಾನದವರೆಗೆ ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ನಂತರ ಇದು ಹೈಹವವಂಶಿ ರಾಜರ ಕೈ ಗೆ ವರ್ಗಾವಣೆ ಆಯಿತು. ಇವರು ನಿರ್ಮಿಸಿದ ಪ್ರಾಚೀನವಾದ ಕೋಟೆಯ ಅವಶೇಷವನ್ನು ಈಗಲೂ ಸಹ ಇಲ್ಲಿ ನೋಡಬಹುದು.

ಚೌರಾ ಮತ್ತು ಛಾಪ್ರಿ ಕಬೀರಧಾಮದ ಇತರ ಆಸಕ್ತಿಕರ ಸ್ಥಳಗಳಾಗಿವೆ. ಮಾಧ್ವ ಮಹಲ ಕಬೀರಧಾಮದಲ್ಲಿರುವ ಇನ್ನೊಂದು ಅಂದವಾದ ಐತಿಹಾಸಿಕ ಸ್ಮಾರಕವಾಗಿದೆ. ಇದು ಭೋರಮ ದೇವ ದೇವಸ್ಥಾನದಿಂದ ಕೇವಲ ಒಂದು ಕೀಲೊ ಮೀಟರ ದೂರದಲ್ಲಿದೆ. ಇಲ್ಲಿಯೇ ನಾಗವಂಶಿ ರಾಜ ಮತ್ತು ಹೈಹವವಂಶಿಯ ರಾಣಿಯ ವಿವಾಹ ಮಹೋತ್ಸವವು ಜರುಗಿತು.

ಸ್ಥಳೀಯ ಭಾಷೆಯಲ್ಲಿ “ಮಾದ್ವ” ಎಂದರೆ ಮದುವೆಯ ಮಂಟಪ ಎಂದರ್ಥ. ಇದು ಶಿವನ ದೇವಸ್ಥಾನವಾದರೂ ಸಹ, ಮದುವೆ ಮಂಟಪದಂತೆ ಇರುವ ಕಾರಣದಿಂದಾಗಿ ಇದಕ್ಕೆ “ ಮಾದ್ವ ಮಹಲ “ ಎಂದು ಹೆಸರು ಬಂದಿದೆ. ದುಲ್ಲಹದೇವೊ ಈ ದೇವಾಲಯಕ್ಕೆ ಇರುವ ಮತ್ತೊಂದು ಹೆಸರು. ಇದನ್ನು ಕ್ರಿ.ಶ 1349 ರಲ್ಲಿ  ಫನಿನಾಗವಂಶದ 25 ನೇ ದೊರೆಯಾದ ರಾಮಚಂದ್ರ ದೇವನು ನಿರ್ಮಿಸಿದನು.

ಚೇರಕಿ ಮಹಲ್, ಪಾಚರಾಹಿ ಮತ್ತು ಜೈನ ಬುಡ ಮಹಾದೇವ – ಇತರ ಸ್ಥಳಗಳು ಕಬೀರಧಾಮದ ಆಕರ್ಷಣೆಗಳಾಗಿವೆ.

ಕಬೀರಧಾಮ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ

ಕಬೀರಧಾಮದಲ್ಲಿ ವರ್ಷಪೂರ್ತಿ ಪ್ರಬಲವಾದ ಸಮಶೀತೊಷ್ಣ ಹವಾಗುಣವಿರುತ್ತದೆ.

ಕಬೀರಧಾಮವನ್ನು ತಲುಪುವುದು ಹೇಗೆ?

ಕಬೀರಧಾಮವನ್ನು ತಲುಪಲು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯಿದೆ. ಉತ್ತಮ ವ್ಯವಸ್ಥಿತವಾದ ರಸ್ತೆಗಿಳಿವೆ.

ಕಬೀರಧಾಮ್ ಪ್ರಸಿದ್ಧವಾಗಿದೆ

ಕಬೀರಧಾಮ್ ಹವಾಮಾನ

ಕಬೀರಧಾಮ್
34oC / 92oF
 • Sunny
 • Wind: NNW 6 km/h

ಉತ್ತಮ ಸಮಯ ಕಬೀರಧಾಮ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಬೀರಧಾಮ್

 • ರಸ್ತೆಯ ಮೂಲಕ
  ಕಬೀರಧಾಮ ನಗರಕ್ಕೆ ಹತ್ತಿರದ ನಗರಗಳಿಂದ ಬಸ್ಸು ಸೌಲಭ್ಯ ವ್ಯವಸ್ಥೆ ಇದೆ. ಇದು ರಾಯಪುರ್ ನಗರದಿಂದ 116 ಕೀಲೊ ಮೀಟರ, ರಾಜಾನಂದಗಾವ ನಗರದಿಂದ 133 ಕೀಲೊ ಮೀಟರ ಮತ್ತು ಜಬಲಪುರದಿಂದ 220 ಕೀಲೊ ಮೀಟರ ದೂರದಲ್ಲಿದೆ. ಖಾವರ್ಧಾದಿಂದ ಬರುವ ಖಾಸಗಿ ಟ್ಯಾಕ್ಸಿಗಳು ಪ್ರವಾಸಿಗರನ್ನು ಭೋರಮ ದೇವ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಾಯಪುರ್ ರೇಲ್ವೆ ನಿಲ್ದಾಣವು ಕಬೀರಧಾಮ ನಗರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಇದು ಮುಂಬಯಿ - ಹೌರಾ ಮುಖ್ಯ ಲೈನ್ ಅಲ್ಲಿ ಬರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಾಯಪುರ್ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವು ಕಬೀರಧಾಮ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Kabirdham
  34 OC
  92 OF
  UV Index: 9
  Sunny
 • Tomorrow
  Kabirdham
  27 OC
  81 OF
  UV Index: 9
  Sunny
 • Day After
  Kabirdham
  29 OC
  84 OF
  UV Index: 9
  Sunny