Search
  • Follow NativePlanet
Share
ಮುಖಪುಟ » ಸ್ಥಳಗಳು» ಜಾಂಜಗೀರ್-ಚಂಪಾ

ಜಾಂಜಗೀರ್-ಚಂಪಾ : ಭವ್ಯ, ಸಿರಿವಂತ ಪರಂಪರೆ

13

ಇಸವಿ 1998 ರ ಮೇ ತಿಂಗಳಿನ 25 ನೆಯ ತಾರೀಖಿನಂದು ಜಿಲ್ಲೆಯೆಂದು ಘೋಷಿಸಲ್ಪಟ್ಟ ಜಾಂಜಗೀರ್-ಚಂಪಾ ಜಿಲ್ಲೆಯು ಛತ್ತೀಸ್ ಗಡ್ ನ ಕೇಂದ್ರ  ಭಾಗದಲ್ಲಿ  ಇರುವುದರಿಂದ, ಈ ಜಿಲ್ಲೆಗೆ "ಛತ್ತೀಸ್ ಗಡ್ ನ ಹೃದಯ" ಎಂಬ ಜನಪ್ರಿಯ ಪದ ಪ್ರಯೋಗವೂ ಇದೆ.  ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಈ ಜಿಲ್ಲೆಯು ಬಹು ಪ್ರಧಾನವಾದ ಪಾತ್ರವನ್ನು ವಹಿಸಿರುವುದರಿಂದ, ಈ ಜಿಲ್ಲೆಯು ರಾಜ್ಯದ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳ ಪೈಕಿ ಒಂದಾಗಿದೆ.  

ಜಾಂಜಗೀರ್-ಚಂಪಾವು ಕಲಚೂರಿ ಸಾಮ್ರಾಜ್ಯಕ್ಕೆ ಸೇರಿರುವ ಮಹಾರಾಜನಾದ ಜಜ್ವಲ್ಯನ ನಗರಕ್ಕೆ ಸೇರಿರುವುದಾಗಿದೆ. ಈ ಜಿಲ್ಲೆಯಲ್ಲಿ ವಾಸವಿರುವ ಬಹುಸಂಖ್ಯೆಯ ಸ್ಥಳೀಯರು, ನೆರೆಹೊರೆಯ ಗ್ರಾಮಗಳಿಂದ ಇಲ್ಲಿಗೆ ವಲಸೆ ಬಂದವರಾಗಿರುತ್ತಾರೆ.  ಜಾಂಜಗೀರ್-ಚಂಪಾ ಜಿಲ್ಲೆಗೆ ಸೇರಿರುವ ಸ್ಥಳಗಳ ಹೆಸರುಗಳು ಇಲ್ಲಿನ ಸ್ಥಳೀಯ ಜನಾಂಗಗಳಾದ ಕಹ್ರಾ ಪರ (Kahra para), ಖಾಲೆ ಪರ (Khale para), ಭಾತಾ ಪರ (Bhata para) ಮತ್ತಿತರ ಅನೇಕ ಜನಾಂಗಗಳ ಹೆಸರುಗಳೊಂದಿಗೆ ತಳುಕು ಹಾಕಿಕೊಂಡಿವೆ.

ಈ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಹಸ್ದೇವ್-ಬಂಗೊ ಯೋಜನೆಯು, ಜಿಲ್ಲೆಯ ಗ್ರಾಮಗಳಿಗೆ ಬಹಳ ಉಪಕಾರಿಯಾದದ್ದಾಗಿದೆ.  ಯಾಕೆಂದರೆ, ಈ ಯೋಜನೆಯ ಸಹಾಯದಿಂದಲೇ,  ಜಾಂಜಗೀರ್-ಚಂಪಾ ಜಿಲ್ಲೆಯ ಮುಕ್ಕಾಲು ಭಾಗವು ನೀರಾವರಿಯ ಪ್ರಯೋಜನವನ್ನು ಪಡೆಯುತ್ತದೆ.  ಈ ಜಿಲ್ಲೆಯು ಒಂದು ಪ್ರಮುಖವಾದ ಕೃಷಿ ಕೇಂದ್ರವಾಗಿದ್ದು, ತಾಜಾ ತೋಟಗಾರಿಕಾ ಕಚ್ಚಾ ವಸ್ತುಗಳ ಉತ್ಪನ್ನಗಳ ಒದಗಣೆಗೆ ಮತ್ತು ಲೈಮ್ ಶಿಲೆಗಳಿಗೆ ಪ್ರಸಿದ್ಧವಾಗಿದೆ.

ಪ್ರಾಚೀನತೆಯ ಸ್ಪರ್ಶದೊಂದಿಗಿನ ಸಂಸ್ಕೃತಿಗೆ ಪ್ರಸಿದ್ಧವಾಗಿರುವ  ಜಾಂಜಗೀರ್-ಚಂಪಾ ಜಿಲ್ಲೆಯು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಇದು ಜಿಲ್ಲೆಯ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಈ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿಯಾದ ಸಂಗತಿಯೇನೆಂದರೆ, ಕ್ರೈಸ್ತ ಮಿಶಿನರಿಗೆ ಸೇರಿದ ಆನ್ನಿ ಫಂಕ್ ಳ ತವರು ಜಿಲ್ಲೆಯು ಇದಾಗಿದ್ದು, ಇವಳು ಟೈಟಾನಿಕ್ ಹಡಗಿನ ದುರಂತದಲ್ಲಿ ಮೃತಪಟ್ಟಳು.

ಜಾಂಜಗೀರ್-ಚಂಪಾ ಜಿಲ್ಲೆಯಲ್ಲಿನ ಮತ್ತು ಸುತ್ತಮುತ್ತಲ ಪ್ರವಾಸೀ ತಾಣಗಳು

ಆನ್ನಿ ಫಂಕ್ ಳ ನಿವಾಸದ ಅವಶೇಷಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಇಂದಿಗೂ ಅವಕಾಶವಿದೆ.  ಜಾಂಜಗೀರ್-ಚಂಪಾ ಜಿಲ್ಲೆಯಲ್ಲಿ ಅನೇಕ ಪ್ರಮುಖವಾದ ಯಾತ್ರಾಸ್ಥಳಗಳಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಿಷ್ಣು ಮಂದಿರ್, ಲಕ್ಷ್ಮಣೇಶ್ವರ್ ದೇವಸ್ಥಾನ, ಅದ್ಭಾರ್, ನಹರಿಯ ಬಾಬಾ ದೇವಸ್ಥಾನ, ದುರ್ಗಾ ದೇವಿ ಮಂದಿರ್, ಶಿವಾರಿನಾರಾಯಣ್ ದೇವಸ್ಥಾನ, ಚಂದ್ರಹಾಸಿನಿ ದೇವಸ್ಥಾನ ಇತ್ಯಾದಿ.  

ಇತರೆ ಪ್ರವಾಸೀ ತಾಣಗಳೆಂದರೆ, ಮದನ್ಪುರಗಡ್, ಕನ್ಹಾರ, ಪಿಥಂಪುರ್, ದೇವರ್ ಘಟ, ದಮುಧಾರಾ ಮತ್ತಿನ್ನೂ ಹತ್ತು ಹಲವು.  ಮೇಲಿನ ಎಲ್ಲಾ ತಾಣಗಳ ಪೈಕಿ, ವಿಷ್ಣು ದೇವಸ್ಥಾನವು ಅತ್ಯಂತ ಪ್ರಸಿದ್ಧವಾಗಿದೆ.  ಇದಕ್ಕೆ ಕಾರಣವೇನೆಂದರೆ, ಜಾಂಜಗೀರ್-ಚಂಪಾ ಜಿಲ್ಲೆಯ ಪುರಾತನ ವೈಷ್ಣವ ಸಮುದಾಯದ, ಕಲಾತ್ಮಕವಾದ ಪ್ರಾಚೀನ ಸಂಸ್ಕೃತಿಯ ವಾಹಕದಂತೆ ಈ ದೇವಳವು ಕಂಡುಬರುತ್ತದೆ.

ಜಾಂಜಗೀರ್-ಚಂಪಾದ ಹವಾಮಾನ

ಛತ್ತೀಸ್ ಗಡ್ ನ ಇತರ ಭಾಗಗಳಂತೆ, ಜಾಂಜಗೀರ್-ಚಂಪಾವೂ ಕೂಡ ಉಷ್ಣವಲಯದ ಹವಾಮಾನವನ್ನು ಹೊಂದಿದೆ.  ಬೇಸಿಗೆಗಳು ಸಾಮಾನ್ಯವಾಗಿ ಏಪ್ರಿಲ್ ನಿಂದ ಜೂನ್ ವರೆಗೆ ಇರುತ್ತದೆ.  ಬೇಸಿಗೆಗಳಲ್ಲಿ ಉಷ್ಣತೆಯು ಬಿಸಿಯೇರುತ್ತದೆ ಮತ್ತು ವಾತಾವರಣವು ತೇವವಾಗಿರುತ್ತದೆ.  ಆದರೆ, ಚಳಿಗಾಲದಲ್ಲಿ ಇದು ಬಹಳಷ್ಟು ಕೆಳಮಟ್ಟಕ್ಕೆ ತಲುಪುತ್ತದೆ.

ಜಾಂಜಗೀರ್-ಚಂಪಾ ಪ್ರಸಿದ್ಧವಾಗಿದೆ

ಜಾಂಜಗೀರ್-ಚಂಪಾ ಹವಾಮಾನ

ಉತ್ತಮ ಸಮಯ ಜಾಂಜಗೀರ್-ಚಂಪಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಾಂಜಗೀರ್-ಚಂಪಾ

  • ರಸ್ತೆಯ ಮೂಲಕ
    ಜಾಂಜಗೀರ್-ಚಂಪಾ ಜಿಲ್ಲೆಯು ಜಾಂಜಗೀರ್ ನಲ್ಲಿದ್ದು, ಇಲ್ಲಿಗೆ ರಸ್ತೆ ಮಾರ್ಗದ ಮೂಲಕ ಬೇರೆ ಬೇರೆ ಸಾರಿಗೆ ಮಾಧ್ಯಮಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು. ಯಾಕೆಂದರೆ, ಇದು ಬಿಲಾಸ್ಪುರ್ ನಿಂದ 65 ಕಿ. ಮೀ. ದೂರದಲ್ಲಿ ಮತ್ತು ರಾಯ್ ಪುರ್ ನಿಂದ 175 ಕಿ.ಮೀ. ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಾಂಜಗೀರ್-ಚಂಪಾವು ಹೌರಾ-ಮುಂಬೈ ನ ಮುಖ್ಯ ಮಾರ್ಗದಲ್ಲಿರುವುದರಿಂದ, ಇದು ಆಗ್ನೇಯ-ಕೇಂದ್ರೀಯ ರೈಲ್ವೆ ಯೊಂದಿಗೆ ಸಂಪರ್ಕ ಹೊಂದಿದೆ. ನೈಲ ಮತ್ತು ಚಂಪಾ ಈ ಜಿಲ್ಲೆಯ ಎರಡು ರೈಲ್ವೆ ನಿಲ್ದಾಣಗಳಾಗಿವೆ. ರಾಜಧಾನಿ ನಗರವಾದ ರಾಯ್ ಪುರ್ ಜಾಂಜಗೀರ್-ಚಂಪಾ ಜಿಲ್ಲೆಯಿಂದ 152 ಕಿ. ಮೀ. ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜಾಂಜಗೀರ್-ಚಂಪಾಗೆ ರಾಯ್ ಪುರ ವಿಮಾನನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಇದು ಇತರ ಪ್ರಮುಖ ಸ್ಥಳಗಳಿಗೆ ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri