Search
 • Follow NativePlanet
Share
ಮುಖಪುಟ » ಸ್ಥಳಗಳು» ಸುರ್ಗುಜಾ

ಸುರ್ಗುಜಾ : ಪ್ರಾಚ್ಯವಸ್ತುಗಳ ಸ್ಥಳ ಮತ್ತು ಪುಣ್ಯ ಕ್ಷೇತ್ರಗಳಲ್ಲಿ ಸುತ್ತಾಡಿ

26

ಸುರ್ಗುಜಾವು ಚತ್ತೀಸ್‍ಗಢ್‍ನ ಉತ್ತರಭಾಗದಲ್ಲಿ ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯದ ಗಡಿ ಭಾಗದಲ್ಲಿ ನೆಲೆಗೊಂಡಿರುವ ಒಂದು ಊರಾಗಿದೆ. ಇದರ ಭೂಭಾಗದ ಶೇ.50 ರಷ್ಟು ಭಾಗದಲ್ಲಿರುವ ಕಾಡಿನಲ್ಲಿ ಬುಡಕಟ್ಟು ಜನರು ವಾಸವಾಗಿದ್ದಾರೆ. ಚತ್ತೀಸ್‍ಗಢ್ ಭಾರತದ ಚಹ ಉತ್ಪಾದನೆ ಮಾಡುವ ರಾಜ್ಯಗಳ ಪಟ್ಟಿಯಲ್ಲಿ 17ನೇ ಸ್ಥಾನವನ್ನು ಪಡೆದಿದೆ. ಸರ್ಗುಜಾ ಮತ್ತು ಜಶ್‍ಪುರಗಳಲ್ಲಿ ಚಹಾ ಉತ್ಪಾದನೆಗೆ ಅತ್ಯಾವಶ್ಯಕವಾಗಿರುವ ಎಲ್ಲಾ ಅಂಶಗಳು ಇವೆ.

ಪುರಾಣದ ಪ್ರಕಾರ ಈ ಸ್ಥಳಕ್ಕೆ ರಾಮನು ತನ್ನ ವನವಾಸದ ಸಂದರ್ಭದಲ್ಲಿ ಭೇಟಿ ನೀಡಿದ್ದನಂತೆ. ಈ ಸ್ಥಳಕ್ಕೆ ಶ್ರೀ ರಾಮ, ಸೀತಾದೇವಿ ಮತ್ತು ಲಕ್ಷ್ಮಣರ ಹೆಸರನ್ನು ಇಡಲಾಗಿದೆ. ರಾಮ್‍ಗಢ್, ಸೀತಾ- ಭೆಂಗ್ರ ಮತ್ತು ಲಕ್ಷ್ಮಣ್‍ಗಢ್ ಎಂಬವುಗಳು ಅವುಗಳಲ್ಲಿ ಒಂದಾಗಿದೆ.

ಚತ್ತೀಸ್‍ಗಢ್‍ನ ಇತರ ಸ್ಥಳಗಳಂತೆ ಸುರ್ಗುಜಾ ಸಹ ಹಲವಾರು ರಾಜರ ರಾಜ್ಯಭಾರವನ್ನು ಕಂಡಿದೆ. ನಂದರು ಮತ್ತು ಮೌರ್ಯರಿಂದ ಆರಂಭಿಸಿ, ರಕ್ಷಲ್ ಕ್ಲಾನ್‍ರವರಿಗೆ ಇಲ್ಲಿ ಹಲವಾರು ರಾಜರು ಆಳಿದ್ದಾರೆ. ಬ್ರಿಟೀಷರ ಆಡಳಿತಾವಧಿಯಲ್ಲಿ ಇದು ಅತ್ಯಂತ ರಾಜವೈಭವವನ್ನು ತನ್ನಲ್ಲಿ ಒಳಗೊಂಡ ಸಂಸ್ಥಾನವಾಗಿತ್ತು. ಹಸ್‍ದೇವ್ ನದಿ, ರಿಹಂಡ್ ನದಿ ಮತ್ತು ಕನ್‍ಹರ್ ನದಿಗಳು ಸುರ್ಗುಜಾದ ಮುಖಜ ಭೂಮಿಯಲ್ಲಿ ಹರಿಯುತ್ತವೆ. ಇದರ ಜೊತೆಗೆ ಸುರ್ಗುಜಾವು ಗ್ರೀನ್ ಆಸ್ಕರ್ ಅವಾರ್ಡ್ ವಿಜೇತ ಚಲನಚಿತ್ರ " ದಿ ಲಾಸ್ಟ್ ಮೈಗ್ರೇಷನ್" ನಿಂದಾಗಿ ಸಹ ಪ್ರಸಿದ್ಧಿಯನ್ನು ಪಡೆದಿದೆ. ಈ ಜನಪ್ರಿಯ ಚಿತ್ರವು ಈ ಪ್ರಾಂತ್ಯದ ಆನೆಗಳ ಕುರಿತಾಗಿದೆ.

ಸುರ್ಗುಜಾದ ಸುತ್ತ -ಮುತ್ತ ಇರುವ ಪ್ರವಾಸಿ ತಾಣಗಳು

ಸುರ್ಗುಜಾವು ತನ್ನ ಐತಿಹಾಸಿಕ ಹಿನ್ನಲೆ ಮತ್ತು ಬುಡಕಟ್ಟು ಜನರ ನಿವಾಸವೆನ್ನುವುದರ ಹೊರತಾಗಿ ಪ್ರವಾಸಿಗರನ್ನು ಸೆಳೆಯುವ ಪ್ರಾಚ್ಯ ವಸ್ತುಗಳು ಮತ್ತು ಕಲಾನೈಪುಣ್ಯತೆಯನ್ನು ಸಾರುವ ದೇವಾಲಯಗಳನ್ನು ಸಹಾ ಹೊಂದಿದೆ. ಚತ್ತೀಸ್‍ಗಢ್ ಅಸಂಖ್ಯಾತ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಸುರ್ಗುಜಾದಲ್ಲಿ ಅಂತಹ ಒಂದು ಜಲಪಾತವಿದೆ. ಇದನ್ನು ಟೈಗರ್ ಪಾಯಿಂಟ್ ಜಲಪಾತವೆಂದು ಕರೆಯುತ್ತಾರೆ. ಇದು ಮನಿಪಟ್‍ನಲ್ಲಿ ನೆಲೆಗೊಂಡಿದೆ.

ರಾಮ್‍ಗಢ್ ಮತ್ತು ಸೀತಾಬೆಂಗ್ರಾವು ತನ್ನಲ್ಲಿರುವ ಇತಿಹಾಸ ಪೂರ್ವಕಾಲದ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ. ನಂಬಿಕೆಗಳ ಪ್ರಕಾರ ರಾಮನು ತನ್ನ ವನವಾಸದ ಅವಧಿಯಲ್ಲಿ ಇಲ್ಲಿ ಕೆಲಕಾಲ ತಂಗಿದ್ದನಂತೆ. ಅಂಬಿಕಾಪುರ್ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿಯಷ್ಟೇ ಅಲ್ಲದೆ ಚತ್ತೀಸ್‍ಗಢ್‍ನ ತೀರ್ಥಕ್ಷೇತ್ರವೆಂಬ ಕೀರ್ತಿಗೆ ಸಹ ಪಾತ್ರವಾಗಿದೆ. ಟಾಟ್ ಪಾನಿಯೆಂಬ ಬಿಸಿನೀರಿನ ಬುಗ್ಗೆಯನ್ನು ನೋಡಲು ವರ್ಷಪೂರ್ತಿ ಜನರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಈ ಬಿಸಿನೀರಿನ ಬುಗ್ಗೆಯಲ್ಲಿ ಹಲವಾರು ಔಷಧೀಯ ಗುಣಗಳು ಇವೆಯೆಂದು ನಂಬಲಾಗುತ್ತದೆ. ದೀಪಡಿಹ್ ಎಂಬುದು ಪ್ರಾಚೀನ ದೇವಾಲಯಗಳ ಮತ್ತು ಕಲ್ಯಾಣಿಗಳ ಅವಶೇಷಗಳನ್ನು ಹೊಂದಿರುವ ಸ್ಥಳವಾಗಿದೆ. ಡಿಯೊಗಢ್ ಎಂಬುದು ಪ್ರಾಚ್ಯ ಶಾಸ್ತ್ರದ ಅವಶೇಷಕ್ಕೆ ಮತ್ತು ಕುದರ್ಗಢ್ ಎಂಬುದು ತೀರ್ಥಯಾತ್ರಾಸ್ಥಳವಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಇಲ್ಲಿನ ಜನ ಮತ್ತು ಸಂಸ್ಕೃತಿ

ಸುರ್ಗುಜಾದಲ್ಲಿನ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಬುಡಕಟ್ಟು ಜನರಾಗಿದ್ದಾರೆ. ಪಂಡೊ ಮತ್ತು ಕೊರ್ವ ಬುಡಕಟ್ಟು ಜನರು ಈ ಕಾಡುಗಳಲ್ಲಿ ವಾಸವಾಗಿದ್ದಾರೆ. ರೈತರನ್ನು ಇಲ್ಲಿ ಮಹಾಭಾರತದ ಪಾಂಡವರ ವಂಶಸ್ಥರೆಂದು ಕರೆಯುತ್ತಾರೆ. ಇನ್ನುಳಿದವರನ್ನು ಕೌರವ ವಂಶದ ಸದಸ್ಯರೆಂದು ನಂಬುತ್ತಾರೆ. ಸುರ್ಗುಜಾದ ರೈತರು ರೇಷ್ಮೆ ಬೆಳೆ ಬೆಳೆಯಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭರಿಯ ಭಾಷೆಯು ಇಲ್ಲಿರುವ ಭರಿಯ ಬುಡಕಟ್ಟು ಜನರು ಮಾತನಾಡುವ ಭಾಷೆಯಾಗಿದೆ. ಇಲ್ಲಿನ ಪ್ರತಿ ಆಚರಣೆಗಳಲ್ಲಿ ಬುಡಕಟ್ಟು ಜನರ ನೃತ್ಯವು ಆಚರಣೆಯ ಪ್ರಮುಖ ಅಂಗವಾಗಿರುತ್ತದೆ.

ಶೈಲ ನೃತ್ಯವು ಒಂದು ಬಗೆಯ ಸಮೂಹ ನೃತ್ಯವಾಗಿದ್ದು, ಇದರಲ್ಲಿ ಕೇವಲ ಪುರುಷರು ಮಾತ್ರ ಪ್ರತಿನಿಧಿಸುತ್ತಾರೆ. ಜನವರಿಯಲ್ಲಿ ಬೆಳೆ ಕುಯಿಲು ಮಾಡುವ ಸಂದರ್ಭದಲ್ಲಿ, ರಾಜಕೀಯ ರ‍್ಯಾಲಿಗಳ ಸಂದರ್ಭದಲ್ಲಿ, ಸಾರ್ವಜನಿಕ ಮತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಇವುಗಳನ್ನು ಆಚರಿಸಲಾಗುತ್ತದೆ. ಸುವಾ ನೃತ್ಯವು ಪ್ರೇಮ ನಿವೇದನೆಯನ್ನು ವ್ಯಕ್ತಪಡಿಸುವ ನೃತ್ಯವಾಗಿದೆ. ಇದರ ಮೂಲಕ ಮದುವೆಯ ಪ್ರಾಯಕ್ಕೆ ಬಂದ ಹುಡುಗಿಯರು ತಮ್ಮ ಇಚ್ಛೆಯನ್ನು ಸೂಕ್ತ ಹುಡುಗನಿಗೆ ಮನವರಿಕೆ ಮಾಡಿಕೊಡುತ್ತಾರೆ. ಜೊತೆಗೆ ಈ ನೃತ್ಯವನ್ನು ಸಂಪತ್ತಿನ ದೇವತೆಯನ್ನು ಸಂತೃಪ್ತಿಗೊಳಿಸಲು ಸಹ ಬಳಸಲಾಗುತ್ತದೆ. ಕರ್ಮ ನೃತ್ಯವನ್ನು ಗಂಡು ಮತ್ತು ಹೆಣ್ಣು ನೃತ್ಯಪಟುಗಳಿಬ್ಬರು ಕೂಡಿ ಕರಮ್ ಮರವನ್ನು ಹಾಡಿ ಹೊಗಳುತ್ತಾರೆ. ಇಲ್ಲಿ ಕರಮ್ ಮರವನ್ನು ಅತ್ಯಂತ ಭಕ್ತಿ ಮತ್ತು ಭಾವಗಳಿಂದ ಪೂಜಿಸಲಾಗುತ್ತದೆ.

ಸುರ್ಗುಜಾದ ಹವಾಮಾನ

ಬೇಸಿಗೆ ಕಾಲದಲ್ಲಿ ಇಲ್ಲಿನ ಉಷ್ಣಾಂಶವು ತೀರ ಹೆಚ್ಚಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಇಲ್ಲಿ ಕೊರೆಯುವ ಚಳಿಯಿಂದ ಕೂಡಿರುತ್ತದೆ.

ಸುರ್ಗುಜಾಗೆ ತಲುಪುವುದು ಹೇಗೆ

ಸುರ್ಗುಜಾಗೆ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ತಲುಪಬಹುದು. ಆದರೆ ವಿಮಾನಯಾನದ ಮೂಲಕ ಇಲ್ಲಿಗೆ ತಲುಪಲು ಸ್ವಲ್ಪ ಕಷ್ಟ.

ಸುರ್ಗುಜಾ ಪ್ರಸಿದ್ಧವಾಗಿದೆ

ಸುರ್ಗುಜಾ ಹವಾಮಾನ

ಸುರ್ಗುಜಾ
33oC / 91oF
 • Sunny
 • Wind: NW 13 km/h

ಉತ್ತಮ ಸಮಯ ಸುರ್ಗುಜಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸುರ್ಗುಜಾ

 • ರಸ್ತೆಯ ಮೂಲಕ
  ದುರ್ಗ್, ಬಿಲಾಸ್‍ಪುರ್ ಮತ್ತು ರೈಪುರಗಳಿಂದ ಬಸ್ಸುಗಳು ನಿರಂತರವಾಗಿ ಸುರ್ಗುಜಾಗೆ ಬಂದು ಹೋಗುತ್ತಿರುತ್ತವೆ. ಇವುಗಳ ಜೊತೆಗೆ ಖಾಸಗಿ ಟ್ಯಾಕ್ಸಿಗಳು ಅಥವಾ ಕಾರ್ ಸೇವೆಗಳು ಪ್ರವಾಸಿಗರಿಗೆ ಸುರ್ಗುಜಾವನ್ನು ಸುತ್ತಿ ನೋಡಲು ಅನುಕೂಲ ಮಾಡಿಕೊಡುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸುರ್ಗುಜಾ ಜಿಲ್ಲೆಯ ದುರ್ಗ್ ಮತ್ತು ಅಂಬಿಕಾಪುರಗಳ ಮಧ್ಯೆ ರಾತ್ರಿ ರೈಲುಗಳು ಸಂಚರಿಸುತ್ತಿರುತ್ತವೆ. ಇದು ಬಿಲಾಸ್‍ಪುರದಿಂದ 230 ಕಿ.ಮೀ ಮತ್ತು ರೈಪುರದಿಂದ 336 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸುರ್ಗುಜಾವು ರೈಪುರದಿಂದ 350 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ರೈಪುರವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವನ್ನು ಹೊಂದಿದೆ. ದೇಶದ ಪ್ರಮುಖ ನಗರಗಳಿಂದ ರೈಪುರಕ್ಕೆ ವಿಮಾನಗಳು ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Oct,Sun
Return On
21 Oct,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Oct,Sun
Check Out
21 Oct,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Oct,Sun
Return On
21 Oct,Mon
 • Today
  Surguja
  33 OC
  91 OF
  UV Index: 8
  Sunny
 • Tomorrow
  Surguja
  28 OC
  82 OF
  UV Index: 9
  Sunny
 • Day After
  Surguja
  29 OC
  84 OF
  UV Index: 9
  Sunny