Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಆಕರ್ಷಣೆಗಳು » ಅಂಬಿಕಾಪುರ್

ಅಂಬಿಕಾಪುರ್, ಸುರ್ಗುಜಾ

2

ಅಂಬಿಕಾಪುರ್ ಎಂಬುದು ಸುರ್ಗುಜಾ ಜಿಲ್ಲೆಯ ಜಿಲ್ಲಾಕೇಂದ್ರವಾಗಿದೆ. ಇದು ಬ್ರಿಟೀಷರ ಆಡಳಿತಾವಧಿಯಲ್ಲಿ ಗುಜರಾತ್ ರಾಜ್ಯದ ಸಂಸ್ಥಾನವಾಗಿತ್ತು. ಈ ದೇವಾಲಯಕ್ಕೆ ಅಂಬಿಕಾ ದೇವಿ ಅಥವಾ ಮಹಮಾಯಾ ದೇವಿಯವರ ಹೆಸರನ್ನು ಇಡಲಾಗಿದೆ. ಇದು ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು ಒಂದು ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ.

ಈ ಬೆಟ್ಟವು ಈ ದೇವಾಲಯದ ಮೆರಗನ್ನು ಹೆಚ್ಚಿಸಿದೆ. ಮನಿಪಟ್ ಎಂಬ ನಯನ ಮನೋಹರವಾದ ಗಿರಿಧಾಮವು ಚತ್ತೀಸ್‍ಗಢ್‍ನ ಶಿಮ್ಲಾ ಎಂಬ ಖ್ಯಾತಿಯನ್ನು ಗಳಿಸಿದೆ. ಇದು ಅಂಬಿಕಾಪುರದಿಂದ 45 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಒಂದು ಗಂಟೆಯ ಪ್ರಯಾಣಾವಧಿಯಲ್ಲಿ ಇಲ್ಲಿಗೆ ತಲುಪಬಹುದು.

ಟೈಗರ್ ಪಾಯಿಂಟ್ ಜಲಪಾತವು ಮನಿಪಟ್‍ನಲ್ಲಿ ನೆಲೆಗೊಂಡಿರುವ ನಯನ ಮನೋಹರವಾದ ಜಲಪಾತವಾಗಿದೆ. ಇಲ್ಲಿ ಟಿಬೇಟಿಯನ್ನರ ಧಾರ್ಮಿಕ ಸ್ಥಳವಾಗಿರುವ ಬುದ್ಧನ ದೇವಾಲಯವನ್ನು ನೋಡಬಹುದು. ಇವರು ಇಲ್ಲಿ ಕಾರ್ಪೆಟ್ ಮತ್ತು ಉಣ್ಣೆಯ ಬಟ್ಟೆಗಳ ಸಣ್ಣ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಈ ಟಿಬೇಟಿಯನ್ನರು ದಲಾಯಿ ಲಾಮಾರವರ ಅನುಯಾಯಿಗಳು. ಇವರು ಮನಿಪಟ್‍ನ ವಾತಾವರಣವನ್ನು ಅತ್ಯಂತ ಸುಂದರವಾಗಿ ವ್ಯವಸ್ಥಿತಗೊಳಿಸಿದ್ದಾರೆ.  ಡಿಯೊಗಢ್ ಎಂಬುದು ಅಂಬಿಕಾಪುರ್ ತಾಲ್ಲೂಕಿನ ಮತ್ತೊಂದು ಪುಣ್ಯ ಕ್ಷೇತ್ರವಾಗಿದೆ.

ಅಂಬಿಕಾಪುರದಲ್ಲಿ ಶಿವ್‍ಪುರ್ ಶಿವ್ ದೇವಾಲಯದಂತಹ ಹಲವಾರು ದೇವಾಲಯಗಳನ್ನು ಕಾಣಬಹುದು. ಇದು ಅಂಬಿಕಾಪುರದಿಂದ 49 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮಹಾ ಶಿವರಾತ್ರಿ ಮತ್ತು ಬಸಂತ್ ಪಂಚಮಿ ಹಬ್ಬಗಳಲ್ಲಿ ಇಲ್ಲಿ ಜನಗಳ ಜಾತ್ರೆಯೇ ನಡೆಯುತ್ತದೆ. ಕೈಲಾಷ್ ಗುಹೆಗಳು ಇಲ್ಲಿಂದ 60 ಕಿ.ಮೀ ದೂರದಲ್ಲಿ ನೆಲೆಗೊಂಡಿವೆ. ಸಂತ ರಾಮೇಶ್ವರ್ ಗಹಿರ ಗುರುಜಿಯವರು ಈ ಗುಹೆಗಳನ್ನು ನಿರ್ಮಿಸಿದರು. ಇಲ್ಲಿ ಶಿವ - ಪಾರ್ವತಿಯರನ್ನು ಹೊಂದಿರುವ ದೇವಾಲಯವೊಂದಿದೆ.

ಇದರ ಜೊತೆಗೆ ಇಲ್ಲಿ ಯಜ್ಞ ಮಂಡಪ, ಸಂಸ್ಕೃತ ಶಾಲೆ, ಗಹಿರ ಗುರು ಆಶ್ರಮಗಳು ಕೈಲಾಷ್ ಗುಹೆಗಳಲ್ಲಿರುವ ಪ್ರಮುಖ ಆಕರ್ಷಣೆಗಳಾಗಿವೆ. ಬೆಟ್ಟದ ತುದಿಯ ಮೇಲೆ ರಾಮ್‍ಗಢ್ ನೆಲೆಗೊಂಡಿದೆ. ಈ ಬೆಟ್ಟವು ಅಲ್ಲಹಾಬಾದ್ ಮತ್ತು ರಾಮೇಶ್ವರದ ನಡುವೆ ಓಡುತ್ತದೆ ಎಂದು ನಂಬಲಾಗುತ್ತದೆ. ಗುಜರಾತಿನ ಜಿಲ್ಲೆಯಾಗಿರುವ ರಾಮ್‍ಪುರ್ ಟಪ್ಪದ ಮೇಲೆ ಇದು ಶುರುವಾಗುತ್ತದೆ.

ಅಂಬಿಕಾಪುರ್ ಬಾಕ್ಸೈಟ್ ಮತ್ತು ಧಾನ್ಯದ ಬೆಳೆಯ ಕಣಜವೆಂದೆ ಕರೆಯಲ್ಪಡುತ್ತದೆ. ಇದರ ಜೊತೆಗೆ ಇಲ್ಲಿ ಹಲವಾರು ಕಾಡಿನ ಉತ್ಪನ್ನಗಳು ಸಹ ದೊರೆಯುತ್ತವೆ. ರಾಜ್ಯದ ಇತರೆ ಭಾಗಗಳಿಂದ ಇಲ್ಲಿಗೆ ರೈಲು ಮತ್ತು ರಸ್ತೆಯ ಮೂಲಕ ಬರಬಹುದು. ಬಿಲಾಸ್‍ಪುರದಿಂದ ಒಂದರ ಹಿಂದೆ ಒಂದು ಬಸ್ಸುಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಅಂಬಿಕಾಪುರದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಇಲ್ಲಿಂದ 12 ಕಿ.ಮೀ ದೂರದಲ್ಲಿರುವ ಡರಿಮ ಏರ್ ಸ್ಟ್ರಿಪ್ ಅನ್ನು ಇಲ್ಲಿಗೆ ಬರುವವರು ಬಳಸಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri