Search
  • Follow NativePlanet
Share
ಮುಖಪುಟ » ಸ್ಥಳಗಳು» ಬಿಲಾಸಪುರ್

ಬಿಲಾಸಪುರ: ದೇವಾಲಯ ಮತ್ತು ನೈಸರ್ಗಿಕ ಪ್ರದೇಶದ ಸುತ್ತ ಪಯಣ

33

ಬಿಲಾಸಪುರ ಚತ್ತೀಸಗಡ ರಾಜ್ಯದ ಎರಡನೇ ಮತ್ತು ಮೂರನೇ ಅತಿ ಹೆಚ್ಚು ಜನಸಂಖ್ಯೆವಿರುವ ಜಿಲ್ಲೆ. ಇದು ಭಾರತದ ವಿದ್ಯುತ್ ಉತ್ಪಾದನೆ ಕೇಂದ್ರ. ಬಿಲಾಸಪುರ ರೈಲ್ವೆ ಮೂಲಕ ಹೆಚ್ಚಿನ ಆದಾಯಗಳಿಸುವ ನಗರದಲ್ಲೊಂದು. ಚತ್ತೀಸಗಡ ರಾಜ್ಯದ ಉಚ್ಚ ನ್ಯಾಯಾಲಯ ಇಲ್ಲಿದೆ. ಭಿಲೈ, ರಾಯಪುರ, ಕೋರ್ಬಾ ಮತ್ತು ರಾಯಗರ್ ನ ಹಾಗೆ ಇಲ್ಲಿ ಕೂಡಾ ಉಕ್ಕಿನ ಉತ್ಪಾದನೆಯಾಗುತ್ತದೆ.

ಕೈಗಾರಿಕಾ ಪ್ರದೇಶವಲ್ಲದೇ ಬಿಲಾಸಪುರ ಇತರ ಕೆಲ ಸಂಗತಿಗಳಿಗೂ ಆಶ್ರಯ ಸ್ಥಾನವಾಗಿದೆ. ಮಾವು, ಸಮೋಸ, ಕೋಸ ಸಿಲ್ಕ್ ಸೀರೆಗಳು, ಅರೋಮಾಟಿಕ್ ದೂಬ್ರಾಜ್ ಅಕ್ಕಿ ಮುಂತಾದವು. ಸೀರೆಗಳು  ವಿವಿಧ ಬೆಲೆಯಲ್ಲಿ ಮತ್ತು ಬಣ್ಣದಲ್ಲಿ ಲಭ್ಯವಿದೆ. ಕೈಮಗ್ಗದ ಸೀರೆಗಳು ಬಿಲಾಸಪುರದ ವರ್ಣರಂಜಿತ ಸಂಸ್ಕ್ರುತಿಯನ್ನು ಬಿಂಬಿಸುತ್ತದೆ.ಬಾಘೇಲಿ ಮತು ಭರಿಯಾ ಇಲ್ಲಿ ಚಲಾವಣೆಯಲ್ಲಿರುವ ಆಡು ಭಾಷೆಗಳು. ರಾವತ್ ನಾಚ್ ಮಹೋತ್ಸವ ಬಿಲಾಸಪುರ ಉತ್ಸವದ ಜಾನಪದ ನೃತ್ಯ. ರಾವತ್ ಪಂಗಡದವರು ಇದನ್ನು ನೃತ್ಯುಸುತ್ತಾರೆ.

ಬಿಲಾಸಪುರಕ್ಕೆ ಬಿಲಾಸಾ ಎನ್ನುವವರ ಮೂಲಕ ಬಂತು, ಇವರು ಹದಿನೇಳಲೇ ಶತಮಾನದ ಮೀನು ಹಿಡಿಯುವ ಹೆಂಗಸು. ಈ ಪ್ರದೇಶವು ಹಿಂದೊಮ್ಮೆ ಕೆಲ ಮೀನುಗಾರ ಏಕಾಂತದ ಸ್ಥಳವಾಗಿತ್ತು. ತದನಂತರ ಮರಾಠರ ಪ್ರಾಭಲ್ಯ ಮುಗಿದು ಈಸ್ಟ್ ಇಂಡಿಯಾ ಕಂಪೆನಿ ಈ ಸ್ಥಳದ ಹಿಡಿತ ಸಾಧಿಸಿತು.

ಬಿಲಾಸಪುರದ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಭೌಗೋಳಿಕ ಸ್ಥಳಗಳು, ದೇವಾಯಗಳು ಬಿಲಾಸಪುರಕ್ಕೆ ಪ್ರವಾಸಿಗರನ್ನು ವಿಶ್ವದ ಗಮನ ಸೆಳೆಯುತ್ತದೆ. ಅಚನ್ ಕುಮಾರ್ ವನ್ಯಜೀವಿಧಾಮ ಚತ್ತೀಸಗಢದ ಪ್ರತಿಧ್ವನಿಸುವ ಪ್ರವಾಸಿ ಸ್ಥಳ.   ಹಸದೇವ್ ಬಂಗೋ ಅಣೆಕಟ್ಟು ಬಿಲಾಸಪುರದಿಂದ 105 ಕಿಲೋಮೀಟರ್ ದೂರದಲ್ಲಿದೆ. ಮಲ್ಹರ್ ಮತ್ತು ರತ್ನಾಪುರ ಭೌಗೋಳಿಕವಾಗಿ ಕೇಂದ್ರದಲ್ಲಿದೆ. ಕೋಟೆಗಳು ಮತ್ತು ಪ್ರಾಚೀನ ದೇವಾಲಯಗಳು ಇಲ್ಲಿವೆ. ತಲಗ್ರಾಮ್ ದಿಯೋರಾಣಿ - ಜೇಥಾನಿ ದೇವಾಲಯಕ್ಕೆ ಹೆಸರುವಾಸಿ.

ನೀರುಗುಳ್ಳೆಯ ದ್ವೀಪ ಮತ್ತು ರಾಧಿಕಾ ವಾಟರ್ ಪಾರ್ಕ್ ಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬೇಲ್ಪಾನಿನಲ್ಲಿ ದೊಡ್ಡ ಕೊಳ ಮತ್ತು ಸಮಾಧಿಯಿದೆ. ಕುಹತಘಾಟ್ ಸುಂದರ ಸ್ಥಳವಾಗಿದ್ದು ನೈಸರ್ಗಿಕ ಪ್ರಿಯರು ಇಷ್ಟ ಪಡುತ್ತಾರೆ. ಕಾಡುಗಳು, ಅಣೆಕಟ್ಟುಗಳು ಮತ್ತು ಬೆಟ್ಟಗಳು ಕುಹತಘಾಟ್ ಪರಿಸರವನ್ನು ಹಸನಾಗಿಸುತ್ತದೆ. ಕಬೀರ್ ಚೋಬುತಾರ ಬಿಸ್ಲಾಪುರದಿಂದ 41 ಕಿಲೋಮೀಟರ್ ದೂರಲ್ಲಿದೆ, ಇದು ಮಹಾತ್ಮ ಮತ್ತು ಸಂತರ ಪ್ರಮುಖ ಸ್ಥಳ.

ಬಿಲಾಸಪುರ ಅಪ್ರಾ ಎನ್ನುವ ಪ್ರಮುಖ ನದಿಯ ತಟದಲ್ಲಿದೆ. ಲೀಲಾಘರ್ ಮತ್ತು ಮನಿಯಾರಿ ಎನ್ನುವ ಸಣ್ಣ ನದಿಗಳೂ ಈ ಜಿಲ್ಲೆಯಲ್ಲಿ ಹರಿಯುತ್ತದೆ. ಸೋನಮುದಾ ಎನ್ನುವುದು ಇಲ್ಲಿನ ಇನ್ನೊಂದು ಪ್ರವಾಸಿ ಸ್ಥಳ, ಈ ಸ್ಥಳದ ಮೂಲಕ ಕಣಿವೆ, ಬೆಟ್ಟ ಮತ್ತು ಅರಣ್ಯದ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

ಬಿಲಾಸಪುರದ ವಾತಾವರಣ

ಬಿಸ್ಲಾಪುರ ಯುರೋಪಿನ ಮತ್ತು ಮಳೆಗಾಲದ ವಾತಾವರಣವನ್ನು ಹೊಂದಿದೆ. ಬೇಸಿಗೆಯಲ್ಲಿ ಸೆಖೆ, ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಮಳೆ ಹೆಚ್ಚು ಬೀಳದೇ ನಿಯಮಿತವಾಗಿರುತ್ತದೆ. ಈ ರೀತಿಯ ವಾತಾವರಣ ವ್ಯವಸಾಯಕ್ಕೆ ಯೋಗ್ಯವಾಗಿದೆ. ಗೋಧಿ, ಅಕ್ಕಿ, ಕಬ್ಬು ಮತ್ತು ಹತ್ತಿ ಮುಂತಾದವು ಇಲ್ಲಿನ ಪ್ರಮುಖ ಬೆಳೆಯಾಗಿದೆ. ಕೈಗಾರಿಕಾ ಅಭಿವೃದ್ದಿ ಕೂಡಾ ಈ ವಾತಾವರಣಕ್ಕೆ ಹೊಂದಿ ಕೊಳ್ಳುತ್ತದೆ.

ಬಿಲಾಸಪುರ ತಲುಪುವುದು ಹೇಗೆ

ಬಿಲಾಸಪುರ ರೈಲು, ರಸ್ತೆ ಮತ್ತು ವಿಮಾನದ ಮೂಲಕ ಉತ್ತಮ ಸಂಪರ್ಕದಲ್ಲಿದೆ. ಆಗ್ನೇಯ ರೈಲ್ವೆಯ ಪ್ರಮುಖ ತಂಗುದಾಣ ಇದಾಗಿದ್ದು, ಬಿಲಾಸಪುರ ಉತ್ತಮ ರೈಲು ಸಂಪರ್ಕ ಕೊಂಡಿಯಲ್ಲಿದೆ. ಸ್ಥಳೀಯ ಆಟೋರಿಕ್ಷಾ, ಕುದುರೆ ಎಳೆಯುವ ಟಾಂಗಾ ಮತ್ತು ಸಿಟಿ ಬಸ್ಸುಗಳು ಇಲ್ಲಿ ಲಭ್ಯವಾಗುತ್ತದೆ.

ಬಿಲಾಸಪುರ್ ಪ್ರಸಿದ್ಧವಾಗಿದೆ

ಬಿಲಾಸಪುರ್ ಹವಾಮಾನ

ಉತ್ತಮ ಸಮಯ ಬಿಲಾಸಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಿಲಾಸಪುರ್

  • ರಸ್ತೆಯ ಮೂಲಕ
    ರಾಯಪುರದಿಂದ ರಾಯಗರ್ ರಾಷ್ಟೀಯ ಹೆದ್ದಾರಿ 200 ಬಿಲಾಸಪುರದ ಮೂಲಕ ಸಾಗುತ್ತದೆ. ಕೊಲ್ಕತ್ತಾ ಮತ್ತು ಮುಂಬೈ ರಾಷ್ಟೀಯ ಹೆದ್ದಾರಿ ಮೂಲಕ ಸಂಪರ್ಕದಲ್ಲಿದೆ. ಅಂಬಿಕಾಪುರ ಮತ್ತು ವಾರಣಾಸಿ ನಡುವಣ ಎನ್ ಎಚ್ 111. ಬಿಲಾಸಪುರ ಮೂಲಕ ರಾಜ್ಯ ಹೆದ್ದಾರಿ ಭಾರತದ ಇತರ ರಾಜ್ಯಗಳಿಗೆ ಸಂಪರ್ಕಿಸುತ್ತದೆ. ಬಸ್ ಮತ್ತು ಟ್ಯಾಕ್ಸಿ ಸ್ಥಳೀಯ ಪ್ರವಾಸಕ್ಕೆ ಲಭ್ಯವಿದೆ. ಮುಂದಾಲೋಚನೆ ಇಲ್ಲದ ರಸ್ತೆ ಯೋಜನೆಗಳಿಂದ ವಾಹನ ದಟ್ಟಣೆ ಇರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಆಗ್ನೇಯ ಕೇಂದ್ರ ರೈಲು ನಿಗಮದ ಪ್ರಾಂತೀಯ ಕಚೇರಿ ಬಿಲಾಸಪುರವಾಗಿದೆ. ಹಾಗಾಗಿ ಚತ್ತೀಸಘಡ ಬ್ಯೂಸಿ ರೈಲು ನಿಲ್ದಾಣವಾಗಿದ್ದು ಪ್ರಾಂತೀಯ ರೈಲು ನಿಗಮದ ಪ್ರಮುಖ ಕೇಂದ್ರವಾಗಿದೆ. ಇದು ಭಾರತದ ನಾಲ್ಕನೇ ಬ್ಯೂಸಿ ರೈಲು ನಿಲ್ದಾಣವಾಗಿದೆ. ಭೋಪಾಲ್ - ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್, ಭೋಪಾಲ್ - ಬಿಲಾಸಪುರ ಎಕ್ಸ್ ಪ್ರೆಸ್, ಬಿಲಾಸಪುರ ರಾಜಧಾನಿ, ಚತ್ತೀಸಘಡ ಎಕ್ಸ್ ಪ್ರೆಸ್ ಮತ್ತು ನರ್ಮಾದ ಎಕ್ಸ್ ಪ್ರೆಸ್ ಪ್ರಮುಖ ವೇಗದೂತ ರೈಲುಗಳು ಬಿಲಾಸಪುರದ ಮೂಲಕ ಸಂಚರಿಸುತ್ತದೆ. ಚಕರಭಾಟ, ದಾಧಾಪುರ ಮತ್ತು ಗಟೋರದಲ್ಲಿ ಸ್ಥಳೀಯ ಪ್ಯಾಸೆಂಜರ್ ರೈಲುಗಳು ಇಲ್ಲಿ ಸಂಚರಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚಕರ್ ಭಟ್ಟಾದಲ್ಲಿ ಬಿಲಾಸಪುರ ವಿಮಾನ ನಿಲ್ದಾಣವಿದ್ದು, ದೈನಂದಿನ ವಿಮಾನ ಸೌಲಭ್ಯ ಮಾತ್ರ ಇಲ್ಲ. ಇದು ಬಿಲಾಸಪುರದಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ರಾಯಪುರ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಇಲ್ಲಿಂದ 115 ಕಿಲೋಮಿಟರ್ ದೂರದಲ್ಲಿದೆ. ಇಲ್ಲಿಗೆ ದೈನಂದಿನ ವಿಮಾನಗಳ ಹಾರಾಟವಿದೆ. ಪ್ರಮುಖ ನಗರಗಳಿಗೆ ರಾಯಪುರದಿಂದ ವಿಮಾನ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat