Search
 • Follow NativePlanet
Share
ಮುಖಪುಟ » ಸ್ಥಳಗಳು » ಕಬೀರಧಾಮ್ » ಆಕರ್ಷಣೆಗಳು » ಭೋರಮ ದೇವ ದೇವಸ್ಥಾನ

ಭೋರಮ ದೇವ ದೇವಸ್ಥಾನ, ಕಬೀರಧಾಮ್

20

ಭೋರಮ ದೇವ ದೇವಸ್ಥಾನವು ಜಿಲ್ಲಾ ಮುಖ್ಯ ಕೇಂದ್ರದಿಂದ 17 ಕೀಲೊ ಮೀಟರ ದೂರದಲ್ಲಿದೆ. ಈ ದೇವಸ್ಥಾನವನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು, ನೋಡಲು ಅದ್ಭುತವಾಗಿದೆ. ಇದನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಶಿವನನ್ನು ಪೂಜಿಸಲಾಗುತ್ತದೆ.

ಈ ದೇವಸ್ಥಾನವು ತುಂಬಾ ಕಲಾತ್ಮಕವಾಗಿದ್ದು, ರಾಜ್ಯಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದನ್ನು ಕ್ರಿ.ಶ 1089 ರಲ್ಲಿ ರಾಜನಾದ ಫನಿನಾಗವಂಶ ಗೋಪಾಲ ದೇವನು ನಿರ್ಮಿಸಿದನು. ಇದು ಖುಜರಾಹೋ ದೇವಸ್ಥಾನದಂತೆ ಕಾಣುತ್ತದೆ. ಆದ್ದರಿಂದ ಈ ದೇವಸ್ಥಾನವನ್ನು ಛತ್ತೀಸಘರದ ಖುಜರಾಹೋ ಎಂದು ಕರೆಯುತ್ತಾರೆ.

ಈ ದೇವಾಲಯದ ವಾಸ್ತುಶಿಲ್ಪವು ವೈಭವದಿಂದ ಕೂಡಿದೆ. ಈ ದೇವಾಲಯದ ಎರಡು ಭಾಗಗಳನ್ನು ಶಿಲೆ ಮತ್ತು ಇಷ್ಟಿಕಗಳಿಂದ ಮಾಡಲಾಗಿದ್ದು, ಇದರ ಎದುರಿನಲ್ಲಿ ಒಂದು ಪ್ರಶಾಂತ ಸರೋವರ ಸದ್ದಿಲ್ಲದೇ ಶಾಂತವಾಗಿ ಹರಿಯುತ್ತಿದೆ.  ಈ ದೇವಾಲಯವನ್ನು ಮಂಡಪ, ಅಂತ್ರಾಳ ಮತ್ತು ಗರ್ಭಗೃಹ ಎಂದು ವಿಂಗಡಿಸಲಾಗಿದೆ.

ಈ ದೇವಾಲಯವನ್ನು ಪಶ್ಚಿಮ ದಿಕ್ಕನ್ನು ಹೊರತು ಪಡಿಸಿ ಎಲ್ಲ ದಿಕ್ಕಿನಿಂದಲೂ ಪ್ರವೇಶ ಮಾಡಬಹುದು. ಶಿವಲಿಂಗವು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ವಿಷ್ಣು, ಶಿವ ಮತ್ತು ಗಣೇಶನ ಮೂರ್ತಿಗಳನ್ನು ದೇವಾಲಯದ ಹೊರ ಗೋಡೆಯ ಮೇಲೆ ಕಾಣಬಹುದು. ಇಲ್ಲಿರುವ ಸಿಂಹ ಮತ್ತು ಆನೆಗಳ ಪ್ರತಿಮೆಗಳು ಈ ದೇವಾಲಯಕ್ಕೆ ಹೆಚ್ಚಿನ ಮೆರಗನ್ನು ನೀಡುತ್ತವೆ.

ಉಮಾ ಮಹೇಶ್ವರ, ನಟರಾಜ, ನರಸಿಂಹ, ಕೃಷ್ಣ, ನೃತ್ಯ ಗಣೇಶ, ಕಾರ್ತಿಕೇಯ, ಚಾಮುಂಡ, ಸಪ್ರ ಮಾತ್ರಿಕಾ, ಲಕ್ಷ್ಮಿ ನಾರಾಯಣ ಮತ್ತು ಇತರ ಸುಂದರ ದೇವರ ವಿಗ್ರಹಗಳನ್ನು ಸಹ ನೀವು ಈ ದೇವಾಲಯದಲ್ಲಿ ನೋಡಬಹುದು. ಈ ದೇವಸ್ಥಾನದ ಗೋಡೆಯ ಮೇಲೆ ಸೀತಾನ್ವೇಷಣದ ರಾಮ ಕಥಾ ಪ್ರಸಂಗವನ್ನು ಕೆತ್ತಲಾಗಿದೆ.

ಈ ದೇವಸ್ಥಾನದ ಗೋಡೆಯ ಮೇಲೆ ಇಂದ್ರಿಯ ಲೋಲುಪತೆ ಮತ್ತು ಕಾಮ ಪ್ರಚೋದಕ ಭಂಗಿಯ ಪ್ರತಿಮೆಗಳನ್ನು ನೋಡಬಹುದು. ಇದು ಜಗತ್ತಿನದಾದ್ಯಂತ ಪ್ರಸಿದ್ಧವಾಗಿದೆ. ಇಂದು ಅಂದಿನ ಕಾಲದ ಜನರ ಸಾಮಾಜಿಕ ಜೀವನದ ಕುರಿತು ವಿವರ ನೀಡುತ್ತದೆ. ಈ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ಮತ್ತು ಉತ್ಸವಗಳು ನಡೆಯುತ್ತವೆ. ಒಟ್ಟಿನಲ್ಲಿ ಈ ದೇವಾಲಯವು ನೋಡಲು ತುಂಬಾ ಆಕರ್ಷಕವಾಗಿದೆ.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Kabirdham
  34 OC
  92 OF
  UV Index: 9
  Sunny
 • Tomorrow
  Kabirdham
  27 OC
  81 OF
  UV Index: 9
  Sunny
 • Day After
  Kabirdham
  29 OC
  84 OF
  UV Index: 9
  Sunny