ರೌರ್ಕೆಲಾ  : ಉಕ್ಕಿನ ನಗರಿ

ರೌರ್ಕೆಲಾ ಎಂಬ ನಗರವು ಸುತ್ತಲು ಬೆಟ್ಟ ಗುಡ್ಡಗಳಿಂದ ಮತ್ತು ನದಿಗಳಿಂದ ಕೂಡಿರುವ ಅತ್ಯಂತ ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ನಡುವೆ ನೆಲೆಗೊಂಡಿದೆ. ಈ ಅದ್ಭುತವಾದ ನಗರವು ಸುಂದರಘಡ್ ಜಿಲ್ಲೆ ಎಂದು ಕರೆಯಲ್ಪಡುವ ಒಂದು ಬುಡಕಟ್ಟು ಜನರು ವಾಸಿಸುವ ಪ್ರದೇಶದ ಒಂದು ಭಾಗವಾಗಿದೆ. ರಾಜಧಾನಿ ಭುವನೇಶ್ವರ್ ನಗರದಿಂದ 325 ಕಿ.ಮೀ ದೂರದಲ್ಲಿರುವ ರೌರ್ಕೆಲಾ ನಗರವು ಬುಡಕಟ್ಟು ಜನರ ಸಹಬಾಳ್ವೆಯನ್ನು ಮತ್ತು ಆಧುನಿಕ ನಗರೀಕರಣದ ವೈಭವ ಎರಡನ್ನು ಸಮ ಪ್ರಮಾಣದಲ್ಲಿ ಹೊಂದಿದೆ. ಒಡಿಶಾದ ವಾಣಿಜ್ಯ ರಾಜಧಾನಿ ಎಂದೇ ಕರೆಯಲ್ಪಡುವ ರೌರ್ಕೆಲಾವು ತನ್ನ ಕೈಗಾರಿಕಾ ಪ್ರದೇಶದ ಜೊತೆಗೆ ಪ್ರಾಕೃತಿಕ ಸೌಂದರ್ಯದಿಂದಲು ಸಹ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಸ್ಥಳವು ಹಲವಾರು ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಆಕರ್ಷಣೆಗಳನ್ನು ಹೊಂದಿದೆ. ಈ ನಗರವು ರೌರ್ಕೆಲಾ ಉಕ್ಕು ಘಟಕ ( ರೌರ್ಕೆಲಾ ಸ್ಟೀಲ್ ಪ್ಲಾಂಟ್ )ಆರಂಭವಾದ ನಂತರ ಎಲ್ಲರ ಗಮನಕ್ಕೆ ಬಂದಿತು. 1984ರಲ್ಲಿ ಪ್ರಾರಂಭವಾದ ಈ ಘಟಕದಲ್ಲಿ ಏಶಿಯಾದ ಮೊಟ್ಟ ಮೊದಲ ಸಿಸಿ ಟಿವಿ ಭದ್ರತೆಯನ್ನು ಪರಿಚಯಿಸಲಾಯಿತು.

ರೌರ್ಕೆಲಾ ಸುತ್ತ ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು

ರೌರ್ಕೆಲಾವು ಬೆಟ್ಟಗಳಿಂದ, ಕೆರೆಗಳಿಂದ, ನದಿಗಳಿಂದ, ಉದ್ಯಾನವನಗಳಿಂದ, ವಸ್ತು ಸಂಗ್ರಹಾಲಯಗಳಿಂದ ಮತ್ತು ಇತ್ಯಾದಿ ಆಕರ್ಷಣೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಇಲ್ಲಿ ನೋಡಿ ನಲಿಯಲು ಅನುಪಮವಾದ ಪ್ರವಾಸಿ ತಾಣಗಳು ಇವೆ. ಇವುಗಳಲ್ಲಿ ಎದ್ದು ಕಾಣುವಂತಹ ಪ್ರವಾಸಿ ಆಕರ್ಷಣೆಯೆಂದರೆ ಹನುಮಾನ್ ವಾಟಿಕ ಎಂಬ ಬೃಹತ್ ದೇವಾಲಯ ಒಂದು ಅದ್ಭುತವಾದ ತಾಣವಾಗಿದೆ. ಇದು ಏಶಿಯಾದಲ್ಲಿಯೆ ಅತ್ಯಂತ ಎತ್ತರವಾದ ಹನುಮಾನ್ ವಿಗ್ರಹವನ್ನು ಹೊಂದಿದೆ.

ವೇದವ್ಯಾಸ್‍ನಲ್ಲಿ  ಸುಂದರವಾದ ಪ್ರಶಾಂತವಾದ ಪರಿಸರವನ್ನು ಆಸ್ವಾದಿಸಬಹುದು. ಮಂದಿರಾ ಜಲಾಶಯ ಮತ್ತು ಪಿತಾಮಹಲ್ ಜಲಾಶಯಗಳ ನಯನ ಮನೋಹರ ಸೌಂದರ್ಯವು ಪ್ರವಾಸಿಗರನ್ನು ವರ್ಷಪೂರ್ತಿ ಕೈ ಬೀಸಿ ಕರೆಯುತ್ತಿರುತ್ತದೆ. ರೌರ್ಕೆಲಾ ದಲ್ಲಿ ಘೋಘರ್ ದೇವಾಲಯ, ಮಾ ವೈಷ್ಣೋ ದೇವಿ ದೇವಾಲಯ, ಲಕ್ಷ್ಮೀ  ನಾರಾಯಣ್ ಮಂದಿರ್, ಜಗನ್ನಾಥ್ ದೇವಾಲಯ, ಮಾ ಭಗವತಿ ದೇವಾಲಯ, ಗಾಯತ್ರಿ ದೇವಾಲಯ, ಅಹಿರಬಂಧ್ ದೇವಾಲಯ, ರಾಣಿ ಸತಿ ದೇವಾಲಯ ಇತ್ಯಾದಿ ಪ್ರವಾಸಿ ಆಕರ್ಷಣೆಗಳು ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

ಈ ಪ್ರತಿಯೊಂದು ದೇವಾಲಯಗಳು ತಮ್ಮ ಅದ್ಭುತವಾದ ವಾಸ್ತುಶಿಲ್ಪದಿಂದಾಗಿ ಭಕ್ತಾಧಿಗಳ ಮನದಲ್ಲಿ ಭಕ್ತಿ ಪರವಶತೆಯನ್ನು ಹೊಮ್ಮಿಸುತ್ತವೆ. ಖಂದಧರ್ ಜಲಪಾತ ತನ್ನ ಅದ್ಭುತವಾದ ಸೌಂದರ್ಯದಿಂದಾಗಿ ಗಮನ ಸೆಳೆಯುತ್ತಿದೆ. ರೌರ್ಕೆಲಾ ದ ಸುತ್ತ- ಮುತ್ತ ಹಲವಾರು ವಿಹಾರ ತಾಣಗಳು ನೆಲೆಗೊಂಡಿವೆ. ಅಂತಹ ಸ್ಥಳಗಳಲ್ಲಿ ಡರ್ಜಿನ್ ಎಂಬ ಸ್ಥಳವು ಸಹ ಒಂದು. ಇದು ತನ್ನ ಪ್ರಾಕೃತಿಕ ಸೊಬಗಿನಿಂದ ಗಮನ ಸೆಳೆಯುತ್ತಿದೆ. ರೌರ್ಕೆಲಾದಲ್ಲಿ ಕೇವಲ ಪ್ರಾಕೃತಿಕ ಸೌಂದರ್ಯದ ತಾಣಗಳು ಮತ್ತು ದೇವಾಲಯಗಳಿಂದಾಗಿ ಮಾತ್ರವಲ್ಲದೆ, ಕ್ರೀಡೆಗಳಿಗಾಗಿಯು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ನೆಲೆಗೊಂಡಿರುವ ಬಿಜು ಪಟ್ನಾಯಕ್ ಹಾಕಿ ಸ್ಟೇಡಿಯಂ ಇಲ್ಲಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರೌರ್ಕೆಲಾ ಗೆ ತಲುಪುವುದು ಹೇಗೆ

ರೌರ್ಕೆಲಾ ಗೆ ರಸ್ತೆ, ರೈಲು ಮತ್ತು ವಿಮಾನ ಯಾನಗಳ ಸಂಪರ್ಕವಿದೆ.

ರೌರ್ಕೆಲಾ  ಭೇಟಿ ನೀಡಲು ಅತ್ಯುತ್ತಮ ಸಮಯ

ರೌರ್ಕೆಲಾ ಗೆ ಭೇಟಿ ನೀಡಲು ನವೆಂಬರ್ ನಿಂದ ಡಿಸೆಂಬರ್ ತಿಂಗಳಿನ ನಡುವಿನ ಅವಧಿ ಉತ್ತಮವಾಗಿರುತ್ತದೆ.

Please Wait while comments are loading...