Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು
  • 01ಹನುಮಾನ್ ವಾಟಿಕ

    ಹನುಮಾನ್ ವಾಟಿಕ

    ಹನುಮಾನ್ ವಾಟಿಕಾ ಎಂಬುದು ಹನುಮಾನ್‍ಗೋಸ್ಕರ ನಿರ್ಮಾಣಗೊಂಡಿರುವ ಸುಂದರವಾದ ಉದ್ಯಾನವನವನ್ನು ಹೊಂದಿರುವ ದೇವಾಲಯವಾಗಿದೆ. ಈ ಉದ್ಯಾನವನವು ಸುಮಾರು 13 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿನ ವೈಶಿಷ್ಟ್ಯತೆಯೇನೆಂದರೆ ಇಲ್ಲಿನ ವಿಗ್ರಹವು ಏಶಿಯಾದ ಅತ್ಯಂತ ಎತ್ತರವಾದ ಹನುಮಾನ್ ವಿಗ್ರಹವೆಂಬ ಕೀರ್ತಿಗೆ ಪಾತ್ರವಾಗಿದೆ....

    + ಹೆಚ್ಚಿಗೆ ಓದಿ
  • 02ವೇದವ್ಯಾಸ್

    ವೇದವ್ಯಾಸ್

    ವೇದವ್ಯಾಸ್ ಎಂಬ ಸ್ಥಳವು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ. ಈ ನಯನ ಮನೋಹರವಾದ ಸ್ಥಳವು ತೀರ್ಥವೆಂದು ಪರಿಗಣಿಸಲ್ಪಟ್ಟಿದೆ. ಇದು ನೆಲೆಗೊಂಡಿರುವ ಪ್ರದೇಶವು ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಕೋಯೆಲ್, ಶಂಖ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ನೆಲೆಗೊಂಡಿದೆ....

    + ಹೆಚ್ಚಿಗೆ ಓದಿ
  • 03ಮಂದಿರ ಜಲಾಶಯ

    ಮಂದಿರ ಜಲಾಶಯ

    ಮಂದಿರ ಜಲಾಶಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲಿ ಒಂದಾಗಿದೆ. ಈ ಜಲಾಶಯವನ್ನು 1957 ರಿಂದ 1959ರ ನಡುವಿನ ಅವಧಿಯಲ್ಲಿ ಹಿರಾಕುಡ್ ಯೋಜನಾ ಪ್ರಾಧಿಕಾರದವರು ನಿರ್ಮಿಸಿದರು. ಈ ಜಲಾಶಯದ ಸ್ಥಳವು ಅತ್ಯಂತ ಸುಂದರವಾದ ಪ್ರದೇಶದಲ್ಲಿದೆ. ಶಂಖ ನದಿಯು ಒಂದು ಪ್ರಪಾತಕ್ಕೆ ಪ್ರವೇಶಿಸುವ ಸ್ಥಳದಲ್ಲಿ ಈ ಜಲಾಶಯವು...

    + ಹೆಚ್ಚಿಗೆ ಓದಿ
  • 04ರಾಣಿ ಸತಿ ದೇವಾಲಯ

    ರಾಣಿ ಸತಿ ದೇವಾಲಯ

    ರಾಣಿ ಸತಿ ದೇವಾಲಯವು ಬರ್ಮಿತ್‍ಪುರ್ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ರೌರ್ಕೆಲಾದಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಭಾರತದ ಎರಡನೆ  ಜುನ್-ಜುನ್ ಧಾಮ್ ಎಂದು ಖ್ಯಾತಿ ಪಡೆದಿದೆ. ಎರಡು ಎಕರೆಯಷ್ಟು ವಿಶಾಲವಾಗಿರುವ ಈ ದೇವಾಲಯವನ್ನು 1967ರಲ್ಲಿ ನಿರ್ಮಾಣ ಮಾಡಲಾಯಿತು. ಈ ದೇವಾಲಯದ...

    + ಹೆಚ್ಚಿಗೆ ಓದಿ
  • 05ಪಿತಾಮಹಲ್ ಜಲಾಶಯ

    ಪಿತಾಮಹಲ್ ಜಲಾಶಯ

    ಪಿತಾಮಹಲ್ ಜಲಾಶಯವು ರೌರ್ಕೆಲಾ ನಗರದಿಂದ 22.3 ಕಿ.ಮೀ ದೂರದಲ್ಲಿರುವ ಬಲಂದ ಎಂಬ ಹಳ್ಳಿಯ ಬಳಿ ನೆಲೆಗೊಂಡಿದೆ. ಈ ಜಲಾಶಯವನ್ನು 1978ರಲ್ಲಿ ಕಾರ್ಯಾರಂಭ ಮಾಡಲಾಯಿತು. ಇದನ್ನು ಪಿತಾಮಹಲ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಈ ಜಲಾಶಯವು ಸುಮಾರು 660.20 ಮೀಟರ್ ಉದ್ದವಿದೆ. ಇದರ ಗರಿಷ್ಠ ಎತ್ತರವು 25.96 ಮೀಟರ್ ಇದೆ....

    + ಹೆಚ್ಚಿಗೆ ಓದಿ
  • 06ಮಾ ವೈಷ್ಣೋ ದೇವಿ ದೇವಾಲಯ

    ಮಾ ವೈಷ್ಣೋ ದೇವಿ ದೇವಾಲಯ

    ಮಾ ವೈಷ್ಣೋ ದೇವಿ ದೇವಾಲಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಒಂದು ಸುಂದರವಾದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಕಾಳಿ, ಸರಸ್ವತಿ ಮತ್ತು ಲಕ್ಷ್ಮೀ ದೇವಿಯರಿಗಾಗಿ ನಿರ್ಮಿಸಲಾಗಿದೆ. ಈ ವಿಗ್ರಹಗಳು ಈ ಬೆಟ್ಟದ ಮೇಲೆ ಸುಮಾರು 2000ನೆ ಇಸವಿಯಲ್ಲಿ ಕಾಣಿಸಿಕೊಂಡವು. ಈ ದೇವಾಲಯದ...

    + ಹೆಚ್ಚಿಗೆ ಓದಿ
  • 07ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣ

    ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣ

    ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣವು ಸೆಕ್ಟರ್ 5 ಮತ್ತು 6ರ ನಡುವೆ ನೆಲೆಗೊಂಡಿದೆ. ಈ ಕ್ರೀಡಾಂಗಣವನ್ನು ಆಟಗಾರರಿಗೆ ಅನುಕೂಲವಾಗುವಂತಹ ಆಧುನಿಕ ಸೌಲಭ್ಯಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಇದು ದೇಶದಲ್ಲಿರುವ ಅತ್ಯುತ್ತಮ ಹಾಕಿ ಕ್ರೀಡಾಂಗಣಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಬೃಹದಾಕಾರದಲ್ಲಿರುವ ಈ...

    + ಹೆಚ್ಚಿಗೆ ಓದಿ
  • 08ಘೋಘಡ್ ದೇವಾಲಯ

    ಘೋಘಡ್ ದೇವಾಲಯ

    ಘೋಘಡ್ ದೇವಾಲಯವು ರೌರ್ಕೆಲಾ ನಗರದಿಂದ 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಪ್ರಸಿದ್ಧ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. ಹಚ್ಚ ಹಸಿರಾದ ಗಿಡ ಮರಗಳಿಂದ ಕೂಡಿದ ಪರಿಸರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಹಿಂದೂ ಭಕ್ತಾಧಿಗಳ ಪಾಲಿಗೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಶ್ರಾವಣ ಮಾಸದಲ್ಲಿ ಇಲ್ಲಿನ ಶಿವಲಿಂಗಕ್ಕೆ...

    + ಹೆಚ್ಚಿಗೆ ಓದಿ
  • 09ಕಂದಧಾರ್ ಜಲಪಾತ

    ಕಂದಧಾರ್ ಜಲಪಾತ

    ಕಂದಧಾರ್ ಜಲಪಾತವು ರೌರ್ಕೆಲಾ ದಿಂದ 104 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸುಂದರ್ ಘಡ್ ಅರಣ್ಯಪ್ರದೇಶದಲ್ಲಿ ಈ ನಯನ ಮನೋಹರವಾದ ಜಲಪಾತವು ನೆಲೆಗೊಂಡಿದೆ. ಈ ಜಲಪಾತವು 244 ಮೀಟರ್ ಎತ್ತರವನ್ನು ಹೊಂದಿದೆ. ಇದು ಒಡಿಶಾದ ಎತ್ತರವಾದ ಜಲಪಾತವೆಂಬ ಅಭಿದಾನಕ್ಕೆ ಪಾತ್ರವಾಗಿದೆ. ಮೇಲಿನಿಂದ ಧುಮ್ಮಿಕ್ಕುವ ನೀರು ನೋಡುಗರನ್ನು...

    + ಹೆಚ್ಚಿಗೆ ಓದಿ
  • 10ಲಕ್ಷ್ಮೀ ನಾರಾಯಣ್ ಮಂದಿರ್

    ಲಕ್ಷ್ಮೀ ನಾರಾಯಣ್ ಮಂದಿರ್

    ಲಕ್ಷ್ಮೀ ನಾರಾಯಣ್ ಮಂದಿರ್ ರೌರ್ಕೆಲಾದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ಈ ನಗರದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು ವಿಷ್ಣು ಮತ್ತು ಮಹಾಲಕ್ಷ್ಮೀಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಅತ್ಯಂತ ಸುಂದರವಾದ ಕಟ್ಟಡವನ್ನು ಹೊಂದಿದೆ. ಇದನ್ನು ಒಂದು ಸಣ್ಣ ಬೆಟ್ಟದ ಮೇಲೆ...

    + ಹೆಚ್ಚಿಗೆ ಓದಿ
  • 11ಅಹಿರಬಂಧ್ ಜಗನ್ನಾಥ್ ದೇವಾಲಯ

    ಅಹಿರಬಂಧ್ ಜಗನ್ನಾಥ್ ದೇವಾಲಯ

    ಅಹಿರಬಂಧ್ ಜಗನ್ನಾಥ್ ದೇವಾಲಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದು. ಹೆಸರೇ ಸೂಚಿಸುವಂತೆ ಇದು ಜಗನ್ನಾಥ್ ಸ್ವಾಮಿಯ ದೇವಾಲಯ. ಇಲ್ಲಿ ಜಗನ್ನಾಥ ಸ್ವಾಮಿಯ ಜೊತೆಗೆ ಬಲ ಭದ್ರ ಮತ್ತು ಸುಭದ್ರಾದೇವಿಯರನ್ನು ಸಹ ಪೂಜಿಸಲಾಗುತ್ತದೆ. ಈ ದೇವಾಲಯವು ರೌರ್ಕೆಲಾ ನಗರದ ಕೇಂದ್ರ ಭಾಗದಿಂದ 1 ಕಿ.ಮೀ ದೂರದಲ್ಲಿರುವ...

    + ಹೆಚ್ಚಿಗೆ ಓದಿ
  • 12ಗಾಯತ್ರಿ ದೇವಾಲಯ

    ಗಾಯತ್ರಿ ದೇವಾಲಯ

    ಗಾಯತ್ರಿ ದೇವಾಲಯವು ದುರ್ಗಾಪುರ್ ಬೆಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಹಲವಾರು ವಿಚಾರಗಳಿಗಾಗಿ ಖ್ಯಾತಿಯನ್ನು ಗಳಿಸಿದೆ. ಇದನ್ನು ಸದ್ಗುರು ಶ್ರೀ ರಾಮ್ ದೇವ್‍ಜಿ ಶರ್ಮಾರವರು 1981ರಲ್ಲಿ ನಿರ್ಮಿಸಿದರು. ಈ ಸುಂದರವಾದ ದೇವಾಲಯದ ಸುತ್ತ- ಮುತ್ತ ಹಲವಾರು ಗಿಡ-ಮರಗಳಲ್ಲಿ ಹೂವುಗಳು ಅರಳಿ ನಿಂತಿರುವುದನ್ನು...

    + ಹೆಚ್ಚಿಗೆ ಓದಿ
  • 13ಮಾ ಭಗವತಿ ದೇವಾಲಯ

    ಮಾ ಭಗವತಿ ದೇವಾಲಯ

    ಮಾ ಭಗವತಿ ದೇವಾಲಯವು ರೌರ್ಕೆಲಾ ನಗರದ ಕೇಂದ್ರ ಭಾಗದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಈ ನಗರದ ಅತ್ಯಂತ ಶ್ರದ್ಧಾಭಕ್ತಿಗಳಿಂದ ಪೂಜಿಸಲ್ಪಡುವ ದೇವಾಲಯವಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು 1993ರಲ್ಲಿ ನಿರ್ಮಿಸಲಾಯಿತು. ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯದ ಹಿನ್ನಲೆಯಲ್ಲಿ ಈ ಭವ್ಯವಾದ ದೇವಾಲಯವು ಎದ್ದು ನಿಂತಿದೆ....

    + ಹೆಚ್ಚಿಗೆ ಓದಿ
  • 14ಡರ್ಜಿನ್

    ಡರ್ಜಿನ್

    ಡರ್ಜಿನ್ ರೌರ್ಕೆಲಾ ದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಬ್ರಾಹ್ಮಣಿ ನದಿಯ ಸುಂದರವಾದ ತೀರ ಪ್ರದೇಶದಲ್ಲಿ ನೆಲೆಗೊಂಡಿದೆ. ನದಿಯ ಈ ಭಾಗದಲ್ಲಿ ತೀರವು ಹೊಂಬಣ್ಣದ ಮರಳಿನಿಂದ ಕೂಡಿದ್ದು, ಅತ್ಯಂತ ಆಕರ್ಷಣೀಯವಾಗಿದೆ. ಈ ಸ್ಥಳವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ವಲಯದಲ್ಲಿ ವಿಹಾರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat