ಧೆಂಕನಲ್  ಪ್ರವಾಸೋದ್ಯಮ : ಸೂರ್ಯ ಮುತ್ತಿಕ್ಕುವ ಹಳ್ಳಿ

ಪೌರಾಣಿಕ ಕಥೆಗಳ ಮೂಲಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಧೆಂಕನಲ್ ಸದಾ ಪ್ರವಾಸಿಗರಿಂದ ಮುತ್ತಿರುವ ಸ್ಥಳ. ಸಾಮಾನ್ಯವಾಗಿ ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅತ್ಯಂತ ಹೆಚ್ಚಾಗಿ ಮೆಚ್ಚುತ್ತಾರೆ.

ಭುವನೇಶ್ವರ ರಾಜಧಾನಿ ನಗರದಿಂದ 99 ಕಿ. ಮೀ ದೂರದಲ್ಲಿ ನೆಲೆಸಿರುವ  ಧೆಂಕನಲ್  ಒಂದು ಸುಂದರ ಸ್ಥಳವಾಗಿದೆ . ಪ್ರಕೃತಿಯು, ಹೇರಳವಾಗಿ ನೈಸರ್ಗಿಕ ಸೌಂದರ್ಯವನ್ನು ಧೆಂಕನಲ್  ಗೆ ಅನುಗ್ರಹಿಸುವಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಿದೆ . ಧೆಂಕನಲ್ ಭೂಮಿಯು, ಸಸ್ಯ ಮತ್ತು ಪ್ರಾಣಿಗಳ ನೈಸರ್ಗಿಕ ಸಂಪತ್ತನ್ನು ಹೇರಳವಾಗಿ ಹೊಂದಿದ್ದು ಸೂರ್ಯನು ಮುತ್ತಿಕ್ಕುವಂತೆ ಭಾಸವಾಗುವ ಒಂದು ಮನೋಹರ ತಾಣವಾಗಿದೆ. ಈ ಸ್ಥಳದಲ್ಲಿರುವ  ಬೆಟ್ಟಗಳು , ಕಣಿವೆಗಳು ಮತ್ತು ನದಿಗಳು ವಾಸ್ತವವಾಗಿ ಇಲ್ಲಿನ ಸೌಂದರ್ಯಕ್ಕೆ ಕಾರಣವಾಗಿದೆ.

ಧೆಂಕನಲ್,  ಮುಖ್ಯವಾಗಿ ಹುಲಿಗಳು ಮತ್ತು ಆನೆಗಳಂತಹ ದೊಡ್ಡ ಕಾಡು ಪ್ರಾಣಿಗಳು ಮತ್ತು ದಟ್ಟವಾದ ಹಸಿರು ಕಾಡುಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ಪ್ರಕೃತಿಗಿಂತ ಉತ್ತಮವಾದ ವಾಸ್ತುಶಿಲ್ಪವಿಲ್ಲ ಎಂಬುದಕ್ಕೆ ಇದೇ ಉದಾಹರಣೆ . ಧೆಂಕನಲ್ ತನ್ನ ನೈಸರ್ಗಿಕ ಸೌಂದರ್ಯದ ಜೊತೆಯಲ್ಲೆ ಮಾನವ ನಿರ್ಮಿತ ವಾಸ್ತುಶಿಲ್ಪವೂ ಇಲ್ಲಿ ಸಾಕಷ್ಟಿದೆ.

ಧೆಂಕನಲ್ ನ ಮತ್ತು ಸುತ್ತಲಿನ ಪ್ರವಾಸಿ ತಾಣಗಳು

ಧೆಂಕನಲ್ ಪ್ರವಾಸೋದ್ಯಮ, ಇಲ್ಲಿಗೆ ಭೇಟಿ ನೀಡುವವರಿಗೆ ಅನೇಕ ಸಂಪತ್ತುಗಳ ಔತಣ ಒದಗಿಸುತ್ತದೆ. ಧೆಂಕನಲ್ ತನ್ನ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಅಪಾರವಾದ ಗೌರವ ವಾಹಕವಾದ ಸ್ಥಳವಾಗಿದೆ. ಆದ್ದರಿಂದ ಧೆಂಕನಲ್ ಜಿಲ್ಲೆಯ ಆಸುಪಾಸಿನಲ್ಲಿ ಹಲವು ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ಸ್ಥಳದಲ್ಲಿ ವಿವಿಧ ಹಿಂದೂ ದೇವರುಗಳನ್ನು ಪೂಜಿಸಲ್ಪಡುವ ಹಲವಾರು ಸುಂದರ ದೇವಾಲಯಗಳಿವೆ. ಅವುಗಳಲ್ಲಿ, ಬಲಭದ್ರ ದೇವನನ್ನು ಪೂಜಿಸುವ ಬಲಭದ್ರ  ದೇವಸ್ಥಾನ, ಪೂಜಾ ಪ್ರಸಿದ್ಧ ಸ್ಥಳವಾಗಿದೆ . ಈ ದೇವಾಲಯವನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಸಂಭುಗೋಪಾಲ/ ಶಂಭುಗೋಪಾಲ ದೇವಸ್ಥಾನ ಹಿಂದೂ ಭಕ್ತರು ಆಗಾಗ್ಗೆ ಭೇಟಿ ನೀಡುವ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ . ಹಿಂದೂ ದೇವತೆ, ಭಗವಾನ್  ರಾಮನನ್ನು ಪೂಜಿಸಲು ನಿರ್ಮಿಸಿದ ರಘುನಾಥ ದೇವಾಲಯ, ತನ್ನ ಅಪರೂಪದ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ . ಕುಂಜಕಾಂತ ಕೃಷ್ಣ ದೇವಾಲಯ ಹಳೆಯ ದೇವಸ್ಥಾನವಾಗಿದ್ದು ಇಂದಿಗೂ ದೂರದ ಸ್ಥಳಗಳಿಂದಲೂ  ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಶಿವನ ಪ್ರಮುಖ ನೆಲೆಯಾದ  ಕಪಿಲಾಶ, (ಕೈಲಾಸ) ಮಹಿಮಾ ಧರ್ಮದ ಧಾರ್ಮಿಕ  ಪ್ರಮುಖ ಸ್ಥಳ ಜೊರಂಡಾ; ಹಲವಾರು ಹಿಂದೂ ದೇವರಿಗೆ ಮೀಸಲಾದ  ವಿವಿಧ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಕುಲೊ ಇತ್ಯಾದಿ ಸ್ಥಳಗಳು ಧೆಂಕನಲ್ ನ ಪ್ರವಾಸೋದ್ಯಮದ ಇತರೆ ಆಕರ್ಷಣೆಗಳು.

ಧೆಂಕನಲ್ ನಿಂದ ಕೆಲವು ಕಿಲೋಮೀಟರ್ ಅಂತರದಲ್ಲಿರುವ ರಾಮನ ದೇವಸ್ಥಾನ ಸ್ಥಾಪಿತವಾಗಿರುವ ಒಂದು ಸುಂದರವಾದ ಸ್ಥಳ ಸಪ್ತಸಜಯಾವನ್ನು ಕಾಣಬಹುದು. ಲಡಗಡಾ, ಧೆಂಕನಲ್ ಪ್ರವಾಸೋದ್ಯಮ ಮತ್ತೊಂದು ಆಕರ್ಷಣೆಯಾಗಿದೆ . ಇದು ಸಿದ್ಧೇಶ್ವರ ಆರಾಧನೆಗೆ ಮೀಸಲಾಗಿರುವ ತಾಣವಾಗಿದೆ. ಸಾರಂಗ, ಅನಂತ ಸರ್ಪ ರಾಜನ ಹೆಡೆಗಳ  ಅಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಗವಾನ್ ವಿಷ್ಣುವಿನ ಪ್ರಶಂಸನೀಯ ಚಿತ್ರವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಾರೆ. ದಂಡಾಧರ, ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳವಾಗಿದೆ.

ಧೆಂಕನಲ್  ಭೇಟಿಗೆ ಉತ್ತಮವಾದ ಸಮಯ

ಧೆಂಕನಲ್ ಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅಕ್ಟೋಬರ್ ನಿಂದ ಡಿಸೆಂಬರ್ ಚಳಿಗಾಲದ ಅವಧಿ ಹಾಗೂ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳೂ ಕೂಡ ಭೇಟಿಗೆ ಅತ್ಯುತ್ತಮ ಸಮಯ.

ಧೆಂಕನಲ್ ತಲುಪುವುದು ಹೇಗೆ?

ಧೆಂಕನಲ್ ಪಟ್ಟಣ ವಿಮಾನ, ರೈಲ್ವೆ ಹಾಗೂ ರಸ್ತೆ ಈ ಮೂರು ಸಾರಿಗೆ ಮಾರ್ಗಗಳ ಸಂಪರ್ಕವನ್ನು ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರ ವಿಮಾನ ನಿಲ್ದಾಣ. ಕಟಕ್ ರೈಲ್ವೆ ನಿಲ್ದಾಣ ಧೆಂಕನಲ್ ಗೆ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ . ಧೆಂಕನಲ್ ನ ಹತ್ತಿರದ ಮತ್ತು ದೂರದ ಪ್ರಯಾಣಕ್ಕೆ ಟ್ಯಾಕ್ಸಿಗಳು ಲಭ್ಯವಿರುವ ಸ್ಥಳವಾಗಿದೆ.

Please Wait while comments are loading...