Search
 • Follow NativePlanet
Share
ಮುಖಪುಟ » ಸ್ಥಳಗಳು» ಬ್ರಹ್ಮಪುರ

ಬೆರ್ಹಾಮ್‍ಪೂರ್ (ಬ್ರಹ್ಮಪುರ) ಪ್ರವಾಸೋದ್ಯಮ : ಬ್ರಹ್ಮದೇವನ ನೆಲೆ

32

ಬ್ರಿಟಿಷ್ ವಸಾಹತುಶಾಹಿಗಳು ಈಗಿನ ಬ್ರಹ್ಮಪುರಕ್ಕೆ ಇಟ್ಟಿದ್ದ ಹೆಸರು ಬೆರ್ಹಾಮ್‍ಪೂರ್.  ಬ್ರಿಟಿಷರಿಗೆ ನಮ್ಮ ದೇಶದ ಅನೇಕ ಪಟ್ಟಣಗಳ ಹೆಸರುಗಳನ್ನು ಉಚ್ಚರಿಸಲು ಬರುತ್ತಿರಲಿಲ್ಲ, ಬಂದರೂ ಅವರದೇ ಶೈಲಿಯಲ್ಲಿ ಒಂದು ಹೆಸರನ್ನು ಇಟ್ಟುಬಿಡುತ್ತಿದ್ದರು.  ಅದರಂತೆಯೇ ಬ್ರಹ್ಮಪುರಕ್ಕೆ ಬೆರ್ಹಾಮ್‍ಪೂರ್ ಎಂದುಬಿಟ್ಟರು. ಇದಕ್ಕೆ ಬೇಕಾದಷ್ಟು ನಿದರ್ಶನಗಳಿವೆ.  ಬ್ರಿಟಿಷರು ನಮ್ಮ ದೇಶ ಬಿಟ್ಟುಹೋದಮೇಲೆ, ಕ್ರಮೇಣ ಎಷ್ಟೋ ಪಟ್ಟಣಗಳ ಹೆಸರುಗಳನ್ನು ಪುನಃ ಮೊದಲು ಹೇಗೆ ಕರೆಯುತ್ತಿದ್ದರೋ ಹಾಗೆ ಈ ಊರಿಗೆ ಮತ್ತೆ ಬ್ರಹ್ಮಪುರವೆಂದು ಕರೆಯಲಾಯಿತು.  ಈ ಹಳೆಯ ಹೆಸರನ್ನು ಮತ್ತೆ ಇಡುವುದಕ್ಕೆ ಮತ್ತೊಂದು ಕಾರಣವೆಂದರೆ ಮೂಲ ಹೆಸರಿನಲ್ಲಿದ್ದ ಸಂಸ್ಕೃತಭಾಷೆಯ ಪ್ರಭಾವದಿಂದ.

ಮೊದಲ ಭಾರತೀಯ ಹೆಸರನ್ನು ಬಹಳ ಪ್ರಯತ್ನಗಳ ನಂತರ ಇಟ್ಟರೂ ಸಹ, ಹಳೆಯ ಅಭ್ಯಾಸಬಲದಿಂದ ಈಗಲೂ ಜನರು ಈ ಸ್ಥಳಕ್ಕೆ ಬೆರ್ಹಾಮ್‍ಪೂರ್ ಎಂದೇ ಅಳವರಿಯಲಾಗದ ಕಾರಣಗಳಿಂದ ಕರೆಯುತ್ತಾರೆ.  ಹೆಸರೇ ಹೇಳುವಂತೆ ಇದು ಬ್ರಹ್ಮದೇವನ ವಾಸಸ್ಥಾನವೆಂದು ಭಾಷಾಂತರಿಸಬಹುದು. ಈಗಲೂ ಸಹ ಅನೇಕ ದೇವಾಲಯಗಳ ಸುಂಖ್ಯೆಯಿಂದಲೂ ಮತ್ತು ಇಲ್ಲಿನ ಸ್ಥಳೀಯರ ಧಾರ್ಮಿಕ ಒಲವಿನಿಂದಾಗಿಯೂ ಇದರ ನಾಮಕರಣ ಸಮರ್ಥವಾಗಿದೆ. ಈ ಪಟ್ಟಣದ ಧಾರ್ಮಿಕ ಪ್ರವಾಸೋದ್ಯಮವು ರಾಜ್ಯದ ಆರ್ಥಿಕತೆಗೆ ಮುಖ್ಯ ಕಾರಣವಾಗಿದೆ.

ಬೆರ್ಹಾಮ್‍ಪೂರ್ - ಸಿಲ್ಕ್ ಸಿಟಿ‍: ಸಿಲ್ಕಿಗೆ ಪ್ರಸಿದ್ಧವಾದ ಪಟ್ಟಣ

ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ಬೆರ್ಹಾಮ್‍ಪೂರ್  ಸಿಲ್ಕ್ ಸಿಟಿ‍ಯೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಬೆರ್ಹಾಮ್‍ಪೂರ್  ಒಡಿಶಾದ ಅತ್ಯಂತ ದೊಡ್ಡ ಹಾಗೂ ಹಳೆಯನಗರಗಳಲ್ಲಿ ಒಂದು. ಇಲ್ಲಿ ಬಹಳ ಹಿಂದಿನಿಂದ ಬಂದಿರುವ ಸಾಂಸ್ಕೃತಿಕ ಹಿನ್ನೆಲೆಯಿಂದ ವಿಶಿಷ್ಟವಾದ ಅನುಭವವಾಗುತ್ತದೆ.  ಇಲ್ಲಿ ನೇಯುವ ಬೆರ್ಹಾಮ್‍ಪೂರ್ ಪತ್ತ ಎಂಬ ಜಟಿಲ ರೇಷ್ಮೆ ಸೀರೆ ಈ ನಗರಕ್ಕೆ ವಿಶಿಷ್ಟವಾದ ಪ್ರಭಾವ ಬೀರಿದೆ. ಈ ಸೀರೆಯು ಈ ನಗರದ  ಒಂದು ನೆನಪಿನ ಕಾಣಿಕೆಯೆಂದೇ ಹೇಳಬಹುದು.  ಇಲ್ಲಿರುವ ಕೈಮಗ್ಗ ಮತ್ತು ಆಭರಣಗಳ ಪ್ರದರ್ಶನ ಮಳಿಗೆಗಳು ನಗರದ ಆಕರ್ಷಣೆಯ ನೋಟವಾಗಿದೆ.

ಬೆರ್ಹಾಮ್‍ಪೂರ್ ಬೇರೆಲ್ಲೂ ಇರದ ಪ್ರಖ್ಯಾತ ಕಡಲತೀರದ ಆಶ್ರಯಧಾಮ(ಬೀಚ್ ರಿಸಾರ್ಟ್)

ಬೆರ್ಹಾಮ್‍ಪೂರಿನ ಕಡಲತೀರದ ಪ್ರೇಮಿಗಳಿಗೆ ಬೇರೆಡೆ ಎಲ್ಲೂ ಇಲ್ಲದಂತಹ ಒಂದು ಆಶ್ರಯಧಾಮವಾಗಿದೆ.  ಅದೇ ಹಳೆಯ ಸೂರ್ಯ, ಮರಳು ಮತ್ತು ಸಮುದ್ರದ ತೆರೆನೊರೆಯಾಗಿದ್ದರೂ ಅಲ್ಲಿನ ದೃಶ್ಯಗಳು ಮತ್ತು ಶಬ್ದಗಳು ಇನ್ನಷ್ಟು ಪುಷ್ಟಿದಾಯಕವಾಗಿರುತ್ತವೆ.  ದೇವಾಲಯಗಳು, ಸಂಸ್ಕೃತಿ, ತಿನಿಸಿನ ಪಾಕಪದ್ಧತಿ ಮತ್ತು ಕಲಾರಂಗಭೂಮಿ ಇವೆಲ್ಲವೂ ಬೆರ್ಹಾಮ್‍ಪೂರಿಗೆ ವಿಶಿಷ್ಟವಾಗಿದ್ದು  ವಿಹಾರಕ್ಕೆ ಇಲ್ಲಿನ ಕಡಲತೀರದಲ್ಲಿ ಕೆಲವುದಿನಗಳು ಕಾಲವನ್ನೇ ಮರೆತು ಕಳೆಯಬಹುದು. ಬೆರ್ಹಾಮ್‍ಪೂರ್ ನಲ್ಲಿ ಪ್ರವಾಸ ಒಂದು ಬಹುಮುಖ ಘಟಕವಾಗಿದೆ ಮತ್ತು ಪ್ರತಿಯೊಬ್ಬನೂ ಸ್ವಲ್ಪಕಾಲ ಎಲ್ಲವನ್ನೂ ಮರೆತು ಕನಸಿನಂತೆ ಈ ತಾಣದಲ್ಲಿ ಸಮಯವನ್ನು ಕಳೆಯಬಹುದು.

ಬೆರ್ಹಾಮ್‍ಪೂರಿನ ಸುತ್ತಮುತ್ತ ಇರುವ  ಪ್ರವಾಸಿ ಸ್ಥಳಗಳು

ಬೆರ್ಹಾಮ್‍ಪೂರಿನಲ್ಲಿ  ಪ್ರಕೃತಿಯ ಶಬ್ದಗಳು ಮತ್ತು ವಿಶಾಲ ದೃಶ್ಯಗಳು ಇರುವುದರಿಂದ ಪ್ರವಾಸೋದ್ಯಮವು ಉಚ್ಛಾಯ ಸ್ಥಿತಿಯಲ್ಲಿದೆ.  ಸುತ್ತಮುತ್ತ ಇರುವ ದೇವಾಲಯಗಳ ಸಾಂದ್ರತೆಯಿಂದ ಬೆರ್ಹಾಮ್‍ಪೂರನ್ನು ಒಂದು ನೈಜ ದೇವಾಲಯಗಳ ಪಟ್ಟಣವಾಗಿದೆ. ಇಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳೆಂದರೆ ಬಂಕೇಶ್ವರಿ, ಕುಲಾದ, ನಾರಾಯಣಿ. ಮಹೇಂದ್ರಗಿರಿ, ಮಾ ಬುಧಿ, ಥಾಕುರಾಣಿ, ತಾರಾತರಿಣಿ, ಬುಗುಡದಲ್ಲಿರುವ ಬಿರಾಂಚಿನಾರಾಯಣ, ಬಾಲ್ಕುಮಾರಿ ಮತ್ತು ಮಂತ್ರಿದಿಯಲ್ಲಿರುವ ಸಿದ್ಧ ಭೈರವಿ ದೇವಾಲಯಗಳು.

ತಪ್ತಪಾನಿಯೆಂಬ ಬಿಸಿನೀರಿನ ಚಿಲುಮೆಯಲ್ಲಿ ಪ್ರವಾಸಿಗರು ಮಿಂದರೆ ಭೂಮಿಯಮೂಲದಿಂದ ಹೊರಹೊಮ್ಮುವ ಶಾಖವನ್ನು ಅನುಭವಿಸಬಹುದು. ಬೆರ್ಹಾಮ್‍ಪುರದ ಹೊರವಲಯದಲ್ಲಿ 30 ಕಿ.ಮೀ. ದೂರದಲ್ಲಿ ಆರ್ಯಪಲ್ಲಿ ಕಡಲತೀರವು ಅಧುನಿಕತೆಯಿಂದಕೂಡಿದ ಪ್ರಾಚೀನ ತಾಣ.  ಇಲ್ಲಿ ಸಮುದ್ರದ ಎಗರುವ ತುಂತುರು ನೀರಿನಿಂದ ಅಪರೂಪದ ಅನುಭವವಾಗುತ್ತದೆ ಮತ್ತು ಅಂತ್ಯವಿಲ್ಲದ ಕಾಲ ಬೆಚ್ಚಗಿನ ತಂಗಾಳಿಯು ಬೀಸುತ್ತಿರುತ್ತದೆ.

ಬೆರ್ಹಾಮ್‍ಪೂರನ್ನು ಭೇಟಿಮಾಡಲು ಅತ್ಯುತ್ತಮ ಸಮಯ

ಅಕ್ಟೋಬರ್ ಮತ್ತು ಜೂನ್ ನಡುವೆ ಹವಾಮಾನವು ಹಿತಕರವಾಗಿರುವುದರಿಂದ ಬೆರ್ಹಾಮ್‍ಪುರವನ್ನು ಭೇಟಿಮಾಡಲು ಅತ್ಯುತ್ತಮ ಸಮಯ.

ಬೆರ್ಹಾಮ್‍ಪೂರನ್ನು ತಲಪುವುದು ಹೇಗೆ?

ಬೆರ್ಹಾಮ್‍ಪುರವು ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಿಂದ ವಾಯು ಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮೂಲಕ ಸಂಪರ್ಕಗಳಿವೆ.  ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ ಭುವನೇಶ್ವರದಲ್ಲಿದೆ ಹಾಗೂ ಅದು ರೈಲು ಮತ್ತು ರಸ್ತೆ ಮೂಲಕ ಸಂಪರ್ಕವಿದೆ.

ಬ್ರಹ್ಮಪುರ ಪ್ರಸಿದ್ಧವಾಗಿದೆ

ಬ್ರಹ್ಮಪುರ ಹವಾಮಾನ

ಬ್ರಹ್ಮಪುರ
33oC / 91oF
 • Partly cloudy
 • Wind: S 6 km/h

ಉತ್ತಮ ಸಮಯ ಬ್ರಹ್ಮಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬ್ರಹ್ಮಪುರ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ ನೆಟ್‍ವರ್ಕ್ ಭಾರತದ ಎಲ್ಲಾ ದೊಡ್ಡ ನಗರಗಳಿಗೆ ಉತ್ತಮವಾಗಿ ನಿರ್ವಹಿಸಲ್ಪಟ್ಟ ರಸ್ತೆಗಳ ಮೂಲಕ ಸಂಪರ್ಕಗಳನ್ನು ಕಲ್ಪಿಸಿದೆ. ಭುಬನೇಶ್ವರಕ್ಕೆ ವಿಮಾನದಲ್ಲಿ ಪ್ರಯಾಣಮಾಡಿ ನಂತರ ರಸ್ತೆ ಅಥವಾ ರೈಲು ಮಾರ್ಗದಲ್ಲಿ ಬೆರ್ಹಾಮ್‍ಪೂರನ್ನು ಸೇರುವುದು ಒಳ್ಳೆಯ ಆಯ್ಕೆ. ರಸ್ತೆಯಮೂಲಕ ಭುಬನೇಶ್ವರದಿಂದ ಬೆರ್ಹಾಮ್‍ಪೂರ್ ಸೇರಲು ಎರಡೂವರೆ ಗಂಟೆ ಪ್ರಯಾಣಮಾಡಬೇಕು. ಪೂರಿ ನಗರದಿಂದಲೂ ಸಹ ಮೂರು ಗಂಟೆ ಪ್ರಯಾಣ ಬೆಳಸಿದರೆ ಬೆರ್ಹಾಮ್‍ಪೂರ್ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬೆರ್ಹಾಮ್‍ಪೂರ್ ಈಸ್ಟ್ ಕೋಸ್ಟಿನ ರೈಲು ನೆಟ್‍ವರ್ಕಿನ ಭಾಗವಾಗಿದ್ದು ರೈಲ್ವೆ ವ್ಯವಸ್ಥೆಮೂಲಕ ಭಾರತದ ಇತರ ಭಾಗಗಳಿಗೆ ಒಳ್ಳೆಯ ಸಂಪರ್ಕಹೊಂದಿದೆ. ಕೋಲ್ಕಟ್ಟ ಮತ್ತು ಚೆನ್ನೈ ನಡುವಿನ ರೈಲಿಗೆ ಬೆರ್ಹಾಮ್‍ಪೂರ್ ಒಂದು ಪ್ರಮುಖ ನಿಲುಗಡೆಯ ಸ್ಥಳವಾಗಿದೆ. ರೈಲ್ವೇ ನೆಟ್‍ವರ್ಕ್ ಮೂಲಕ ಒಡಿಸ್ಸಾ ಪ್ರದೇಶದ ಅನೇಕ ಭಾಗಗಳನ್ನು ರಜ ಮೂಲಕ ಭೇಟಿಮಾಡಲು ಅತ್ಯುತ್ತಮ ವಿಧಾನವಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವಾಯುಮಾರ್ಗವಾಗಿ ಬೆರ್ಹಾಮ್‍ಪೂರಿಗೆ ಹೋಗುವ ಮುನ್ನ ಭುಬನೇಶ್ವರಕ್ಕೆ ಹೋಗುವುದು ಅತ್ಯಂತ ಸುಲಭವಾಗಿದೆ. ಭುಬನೇಶ್ವರದ ವಿಮಾನನಿಲ್ದಾಣವು ಭಾರತದ ಎಲ್ಲಾ ಪ್ರಮುಖನಗರಗಳಿಂದ ವಿಮಾನ ಸಂಪರ್ಕ ಹೊಂದಿದೆ. ಪ್ರಮುಖ ಸಂಸ್ಥೆಗಳನ್ನೊಳಗೊಂಡ ಇಂಡಿಯನ್ ಏರ್‌ಲೈನ್ಸ್ ಮತ್ತು ಇಂಡಿಗೋ ಏರ್‌ಲೈನ್ಸ್ ನಿಯಮಿತವಾಗಿ ದಕ್ಷಿಣದಲ್ಲಿರುವ ನಗರಗಳು ಮತ್ತು ಭುಬನೇಶ್ವರದ ನಡುವೆ ವಿಮಾನಗಳು ಸಂಚರಿಸುತ್ತವೆ. ರೈಲು ಮತ್ತು ರಸ್ತೆ ಸಂಪರ್ಕಗಳು ಸಹ ಬೆರ್ಹಾಮ್‍ಪೂರ್ ಮತ್ತು ಭುಬನೇಶ್ವರ್ ಸಡುವೆ ಉತ್ತಮವಾಗಿ ಸ್ಥಾಪಿತವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Aug,Wed
Return On
13 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Aug,Wed
Check Out
13 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Aug,Wed
Return On
13 Aug,Thu
 • Today
  Berhampur
  33 OC
  91 OF
  UV Index: 8
  Partly cloudy
 • Tomorrow
  Berhampur
  29 OC
  83 OF
  UV Index: 8
  Sunny
 • Day After
  Berhampur
  29 OC
  84 OF
  UV Index: 8
  Sunny