Search
 • Follow NativePlanet
Share
ಮುಖಪುಟ » ಸ್ಥಳಗಳು» ಗೋಪಾಲ್ಪುರ

ಗೋಪಾಲ್ ಪುರ್ ಪ್ರವಾಸೋದ್ಯಮ : ಸೌಂದರ್ಯದ ರಸಮಯ ತಾಣ

14

ಒಡಿಶಾದ ದಕ್ಷಿಣ ಭಾಗದಲ್ಲಿ ಸಮುದ್ರ ತಟದ ನಗರ ಗೋಪಾಲ್ ಪುರ. ಇದು ಬಂಗಾಳ ಕೊಲ್ಲಿಯ ಸಮೀಪ ಇರುವ ನಗರವಾಗಿದ್ದು ಇಡಿಯ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರತಿ ತಿಂಗಳು ಅಸಂಖ್ಯ ಪ್ರವಾಸಿಗಳು ಬಂದು ನಿಸರ್ಗದ ಸೌಂದರ್ಯವನ್ನು ಸವಿದು ಮರಳುತ್ತಾರೆ. ಇದು ಬೆರಹಮ್ ಪುರ(ಬ್ರಹ್ಮಪುರ)ದಿಂದ 15 ಕಿ.ಮೀ ದೂರದಲ್ಲಿದೆ ಹಾಗೂ ಈಗ ಅಲ್ಲಿ ರಾಜ್ಯ ಸರ್ಕಾರದ ವತಿಯಿಂದ ಬಂದರಿನ ನಿರ್ಮಾಣ ಸಾಗುತ್ತಿದೆ. ಹಿಂದೆ ಗೋಪಾಲ್ ಪುರ್ ಮೀನುಗಾರಿಕೆ ಮಾಡುವ ಸಣ್ಣ ಗ್ರಾಮವಾಗಿತ್ತು ಆದರೆ ಬ್ರಿಟಿಷರ ಆಗಮನದೊಂದಿಗೆ ಇದರ ಲಕ್ಷಣವೇ ಬದಲಾಗಿ ಹೋಯಿತು. ಇದನ್ನು ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಮುಖ ವ್ಯಾಪಾರಿ ತಾಣವನ್ನಾಗಿಸಿತು. ಇದು ಆಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ನಗರವಾಗಿದೆ ಇದೇ ಕಾರಣದಿಂದ ಇದು ಹಲವು ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡಿದೆ. ಒಡಿಶಾ ಕ್ಕೆ ದಕ್ಷಿಣದ ಇತರೆ ರಾಜ್ಯಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಲು ಇದು ಸರಿಯಾದ ತಾಣವಾಗಿದೆ. ಗೋಪಾಲ್ ಪುರ್ ಸುತ್ತಮುತ್ತಲ ಪ್ರವಾಸಿ ಆಕರ್ಷಣೆಗಳು    

ಗೋಪಾಲ್ ಪುರ ಪ್ರವಾಸೋದ್ಯಮ ಹತ್ತು ಹಲವು ತಾಣಗಳನ್ನು ಪ್ರವಾಸಿಗಳಿಗೆ ಒದಗಿಸುತ್ತದೆ. ಮಾ ತಾರಾ ತಾರಿಣಿ ದೇವಸ್ಥಾನ, ಬಾಲ ಕುಮಾರಿ ದೇವಸ್ಥಾನ ಮತ್ತು ಶ್ರೀ ಶ್ರೀ ಶ್ರೀ ಸಿದ್ಧಿಬಿನಾಯಕ ಪೀಠ ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಸೋನೇಪುರ್ ಕಡಲ ಕಿನಾರೆ, ಆರ್ಯಪಲ್ಲಿ ಬೀಚ್ ಮತ್ತು ಗೋಪಾಲ್ ಪುರ ಕಡಲ ಕಿನಾರೆ ಪ್ರತಿ ದಿನ ಸಾವಿರಾರು ಜನರು ಭೇಟಿ ನೀಡುವ ಕಡಲ ಕಿನಾರೆಗಳಾಗಿವೆ. ಗೋಪಾಲ್ ಪುರದ ಹಳೆಯ ಕಥೆಗಳನ್ನೆಲ್ಲಾ ಇಲ್ಲಿನ ಪೊತಾಗಡ್ ಗೆ ಭೇಟಿ ನೀಡಿದರೆ ತಿಳಿದು ಬಿಡುತ್ತವೆ. ಪಂಚಮ ಮತ್ತು ಬಲ್ಲಿಪಾದರ್ ಗೋಪಾಲ್ ಪುರದ ಪಕ್ಕದ ಹಳ್ಳಿಗಳಾಗಿದ್ದು ಇಲ್ಲಿನ ಸಾಂಪ್ರದಾಯಿಕ ಜನಜೀವನ ಮತ್ತು ಉತ್ಸವಗಳ ಆಚರಣೆ ಬಹಳ ಆಕರ್ಷಕವಾಗಿರುತ್ತದೆ. ಸತಪಾದ ಡಾಲ್ಫಿನ್ ಧಾಮ ಮತ್ತು ಬಂಕೇಶ್ವರಿ ಗೋಪಾಲ್ ಪುರದ ಇನ್ನಿತರ ಪ್ರವಾಸಿ ಆಕರ್ಷಣೆ ಇರುವ ಸ್ಥಳಗಳಾಗಿವೆ.

ಗೋಪಾಲ್ ಪುರದಲ್ಲಿ ಶಾಪಿಂಗ್

ಇಲ್ಲಿನ ಸಿಟಿ ಮಾರ್ಕೆಟ್ ವ್ಯವಹಾರ ಸ್ಥಳವು ನಿಮ್ಮ ಎಲ್ಲಾ ಶಾಪಿಂಗ್ ಪ್ರಶ್ನೆಗಳಿಗೆ ಒಂದೇ ಉತ್ತರವಾಗಿದೆ. ಈ ಸ್ಥಳವು ಸಮುದ್ರ ಚಿಪ್ಪುಗಳಿಂದ ಮಾಡಿದ ಕರಕುಶಲ ವಸ್ತುಗಳಿಗೆ ಮತ್ತು ರೇಷ್ಮೆ ಸೀರೆಗಳಿಗೆ ಬಹಳ ಪ್ರಸಿದ್ಧವಾಗಿದೆ. ಅತ್ಯುತ್ತಮವಾದ ಕರಕುಶಲ ವಸ್ತುಗಳು ಅದರಲ್ಲೂ ಮುಖ್ಯವಾಗಿ ಸಮುದ್ರ ಚಿಪ್ಪುಗಳಿಂದ ಮಾಡಿದ ವಸ್ತುಗಳು ಲಭ್ಯವಿವೆ. ಬ್ರಾಸ್ ಲೆಟ್ಸ್, ನೆಕ್ಲೆಸ್ ಮತ್ತು ಚಿಪ್ಪುಗಳಿಂದ ಮಾಡಿದ ಇತರ ವಸ್ತುಗಳು ಇಲ್ಲಿನ ಭೇಟಿಯ ನೆನಪಿಗಾಗಿ ನೀವು ಸಂಗ್ರಹಿಸಿಡಬಹುದಾದಷ್ಟು ಉತ್ತಮವಾಗಿದೆ. ಗೋಪಾಲ್ ಪುರವನ್ನು ತಲುಪುವುದು ಹೇಗೆ

ಬುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋಪಾಲ್ ಪುರವನ್ನು ತಲುಪಬಹುದಾಗಿದೆ. ಇದನ್ನು ಬೆರಹಮ್ ಪುರ್ ರೈಲ್ವೆ ನಿಲ್ದಾಣದ ಮೂಲಕವೂ ತಲುಪಬಹುದಾಗಿದೆ, ಇದು ಇಲ್ಲಿ ತಲುಪಲು ಇರುವ ಅತ್ಯಂತ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಟಾಕ್ಸಿ ಅಥವಾ ಬಸ್ಸಿನ ಮೂಲಕ ಗೋಪಾಲ್ ಪುರವನ್ನು ತಲುಪಬಹುದಾಗಿದೆ. ಇದು ಉತ್ತಮ ರಸ್ತೆ ಸಂಪರ್ಕದ ಮೂಲಕ ಇಡಿ ರಾಜ್ಯವನ್ನು ಸಂಪರ್ಕಿಸುತ್ತದೆ.

ಗೋಪಾಲ್ ಪುರದ ಭೇಟಿಗೆ ಅತ್ಯಂತ ಸೂಕ್ತವಾದ ಸಮಯ

ಗೋಪಾಲ್ ಪುರ ವರ್ಷಪೂರ್ತಿ ಉತ್ತಮ ಹವಾಮಾನದ ಲಾಭ ಪಡೆಯುತ್ತದೆ. ಅದರಲ್ಲೂ ಅಕ್ಟೋಬರ್ ನಿಂದ ಎಪ್ರಿಲ್ ತನಕ ಅವಧಿಯ ಇಲ್ಲಿನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ.

ಗೋಪಾಲ್ಪುರ ಪ್ರಸಿದ್ಧವಾಗಿದೆ

ಗೋಪಾಲ್ಪುರ ಹವಾಮಾನ

ಉತ್ತಮ ಸಮಯ ಗೋಪಾಲ್ಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗೋಪಾಲ್ಪುರ

 • ರಸ್ತೆಯ ಮೂಲಕ
  ಗೋಪಾಲಪುರ, ಸುಲಭವಾಗಿ ಖಾಸಗಿ ಕಾರುಗಳು ಮತ್ತು ಬಸ್ ಮೂಲಕ ತಲುಪಬಹುದಾದ ಒಂದು ಉತ್ತಮ ಸಂಪರ್ಕ ಕರಾವಳಿ ಪಟ್ಟಣವಾಗಿದೆ. ಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರಿಗೆ ಸಾಕಷ್ಟು ಒಳ್ಳೆಯ ಸೇವೆಯನ್ನು ಒದಗಿಸುವಂತಹ ಅನೇಕ ಖಾಸಗಿ ಕಾರು ಸೇವೆಗಳ ವ್ಯವಸ್ಥೆ ಇವೆ. ಈ ಸ್ಥಳವು ರಾಜ್ಯದ ಇತರ ಭಾಗಗಳಿಂದ ಕೂಡ ಉತ್ತಮ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋಪಾಲಪುರಕ್ಕೆ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಬೇರ್ಹಂಪುರ್ ರೈಲ್ವೆ ನಿಲ್ದಾಣ. ರೈಲ್ವೆ ನಿಲ್ದಾಣವು ಕಡಲತೀರದ ಪಟ್ಟಣದಿಂದ 16 ಕಿ. ಮೀ ದೂರದಲ್ಲಿದೆ. ಬೇರ್ಹಂಪುರ್ ರೈಲ್ವೆ ನಿಲ್ದಾಣಕ್ಕೆ ಗೋಪಾಲಪುರದಿಂದ ಟ್ಯಾಕ್ಸಿ ಮೂಲಕ ತಲುಪಬಹುದು. ಈ ನಿಲ್ದಾಣವು ಓರಿಸ್ಸಾ ರಾಜ್ಯದಿಂದ ಹಾದು ಹೋಗುವ ಎಲ್ಲಾ ಪ್ರಮುಖ ರೈಲುಗಳ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭುವನೇಶ್ವರದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣ, ಗೋಪಾಲಪುರ ತಲುಪಲು ಹತ್ತಿರದ ವಿಮಾನ ನಿಲ್ದಾಣವಾಗಿದೆ. ರಾಜ್ಯದ ರಾಜಧಾನಿಯಿಂದ 180 ಕಿ. ಮೀ ದೂರದಲ್ಲಿದ್ದು, ವಿಮಾನ ನಿಲ್ದಾಣದಿಂದ ಖಾಸಗಿ ಕಾರು ನೇಮಕ ಮಾಡಿಕೊಂಡು ಗೋಪಾಲಪುರವನ್ನು ತಲುಪಬಹುದು. ಬಿಜು ಪಟ್ನಾಯಕ್ ವಿಮಾನ ನಿಲ್ದಾಣ ಭಾರತದ ಇತರ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 May,Thu
Return On
20 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 May,Thu
Check Out
20 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 May,Thu
Return On
20 May,Fri