Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಹವಾಮಾನ

ಧೆಂಕನಲ್ ಹವಾಮಾನ

ಧೆಂಕನಲ್  ಗೆ  ಭೇಟಿ ನೀಡಲು ಅತ್ಯುತ್ತಮ ಋತುವೆಂದರೆ ಅಕ್ಟೋಬರ್ , ನವೆಂಬರ್ , ಡಿಸೆಂಬರ್ , ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವಿನ ಚಳಿಗಾಲದ ಅವಧಿ. ಈ ತಿಂಗಳುಗಳಲ್ಲಿ ಹವಾಮಾನ ಹಿತಕರವಾಗಿರುತ್ತದೆ ಮತ್ತು ಪ್ರಕೃತಿ ವೀಕ್ಷಣೆ ಹಾಗೂ ಇತರ ಪ್ರವಾಸಿ ಚಟುವಟಿಕೆಗಳಿಗೆ ಒಂದು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತದೆ. ಈ ಸ್ಥಳದಲ್ಲಿ ಹಿಂದೂ ಉತ್ಸವಗಳಲ್ಲಿ ಎಲ್ಲಾ ಆಚರಣೆಗಳನ್ನು ನಡೇಸಲಾಗುತ್ತಿದ್ದು ಈ ಉತ್ಸವಗಳಲ್ಲಿ ಪಾಲ್ಗೋಳ್ಳಬಹುದು.

ಬೇಸಿಗೆಗಾಲ

ಧೆಂಕನಲ್  ನಲ್ಲಿ ಬೇಸಿಗೆಯು ಅತ್ಯಂತ ಬಿಸಿ ಮತ್ತು ಆರ್ದ್ರ ಬೇಸಿಗೆ ಋತುವನ್ನು ಅನುಭವಿಸುವುದರಿಂದ ಈ ಸಮಯದಲ್ಲಿ ಧೆಂಕನಲ್  ಗೆ ಭೇಟಿ ನೀಡದಿರುವುದೇ ಉತ್ತಮ. ಬೇಸಿಗೆಯು ಮಾರ್ಚ್ ನಲ್ಲಿ ಆರಂಭವಾಗಿ ಮೇ ತಿಂಗಳ ತನಕ ಮುಂದುವರಿಯುತ್ತದೆ. ಬೇಸಿಗೆಯಲ್ಲಿ ತಾಪಮಾನ 42 ಡಿ.ಸೆ ನಷ್ಟು ಹೆಚ್ಚಬಹುದು. ಈ ದೃಷ್ಟಿಯಿಂದ ಬೇಸಿಗೆ ಖಂಡಿತವಾಗಿಯೂ ಧೆಂಕನಲ್  ಭೇಟಿಗೆ ಉತ್ತಮವಾದ ಸಮಯವಲ್ಲ.

ಮಳೆಗಾಲ

ಮಳೆಗಾಲವು ಜೂನ್ ತಿಂಗಳಲ್ಲಿ ಧೆಂಕನಲ್  ನಲ್ಲಿ ಆರಂಭವಾಗುತ್ತದೆ. ಮತ್ತು ಸೆಪ್ಟೆಂಬರ್ ತಿಂಗಳ ತನಕ ಮುಂದುವರೆಯುತ್ತದೆ . ಈ ಋತುವಿನ ಬೇಸಿಗೆಯ ಬಿಸಿಯಿಂದ ತತ್ತರಿಸಿದ್ದವರಿಗೆ ಸಮಾಧಾನ ಒದಗಿಸುತ್ತದೆ. ತಾಪಮಾನವು ಕಡಿಮೆಯಾಗುತ್ತದೆ ಮತ್ತು ಹವಾಮಾನ ಸಹನೀಯವಾಗಿರುತ್ತದೆ.

ಚಳಿಗಾಲ

ಧೆಂಕನಲ್  ನಲ್ಲಿ ಚಳಿಗಾಲ ಆಹ್ಲಾದಕರವಾಗಿರುತ್ತದೆ. ಚಳಿಗಾಲವು ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಳ್ಳುತ್ತದೆ.  ತಾಪಮಾನವು ಈ ಸಂದರ್ಭದಲ್ಲಿ 10 ಡಿ. ಸೆ ನಿಂದ 25 ಡಿ.ಸೆ ನಡುವೆ ದಾಖಲಾಗುತ್ತದೆ.  ಚಳಿಗಾಲದ ಹವಾಮಾನ ತಂಪಾದ ಮತ್ತು ಆಹ್ಲಾದಕರವಾಗಿರುತ್ತದೆ. ಆದ್ದರಿಂದ ಈ ಅವಧಿಯು ಧೆಂಕನಲ್  ಪ್ರಯಾಣಕ್ಕೆ ಅತ್ಯಂತ ಸೂಕ್ತ ಸಮಯ.