Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಬಲ್ಪುರ » ಆಕರ್ಷಣೆಗಳು
  • 01ಹಿರಾಕುಡ್ ಅಣೆಕಟ್ಟು

    ಮಹಾನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟಿನ ಪ್ರದೇಶ ಸುಂದರವಾಗಿದ್ದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಅಣೆಕಟ್ಟು ಸಂಬಾಲ್ಪುರದಿಂದ 15 ಕಿಮೀ ದೂರದಲ್ಲಿದೆ. 1957ರಲ್ಲಿ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಪ್ರಪಂಚದ ಅತಿ ದೊಡ್ಡ ಅಣೆಕಟ್ಟು ಎಂದೇ ಹೆಸರುವಾಸಿಯಾಗಿದೆ. ಈ ಅಣೆಕಟ್ಟು 26 ಕಿಮೀ ಉದ್ದವಾಗಿದೆ....

    + ಹೆಚ್ಚಿಗೆ ಓದಿ
  • 02ವಿಕ್ರಂಖೋಲ್

    ಇದು ಕ್ರಿಪೂ 3000 ಮತ್ತು 4000 ಅಂದರೆ ಮಧ್ಯ ಶಿಲಾಯುಗಕ್ಕೆ ಸೇರಿದ ಒಂದು ಗವಿ. ಈ ಗವಿಯ ಗೋಡೆಗಳ ಮೇಲೆ ಕೆಲವು ಶಾಸನಗಳು ಅಥವ ಚಿತ್ರಗಳು ಕೆತ್ತಲ್ಪಟ್ಟಿವೆ. ಇದು ಸಂಬಾಲ್ಪುರದಿಂದ 81 ಕಿಮೀ ದೂರದಲ್ಲಿದೆ. ಈ ಗವಿಯಲ್ಲಿನ ಶಾಸನಗಳನ್ನು ಬೆಳಕಿಗೆ ತಂದವರು ಕೆ.ಪಿ.ಜೈಸ್ವಾಲ್.

    ಅವರನ್ನು 1933ರಲ್ಲಿ ಸಂನ್ಯಾಸಿ ಸಿರಿಕಾ ಈ...

    + ಹೆಚ್ಚಿಗೆ ಓದಿ
  • 03ಹುಮಾದ ಬಾಗಿದ ದೇವಾಲಯ

    ಪ್ರಪಂಚದ ಏಕೈಕ ಬಾಗಿದ ದೇವಾಲಯವಿದು. ಇದು ಸಂಬಲ್ಪುರದ ದಕ್ಷಿಣಕ್ಕೆ 23 ಕಿಮೀ ದೂರದಲ್ಲಿ ಮಹಾನದಿಯ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಇದನ್ನು ನಿರ್ಮಿಸಿದಾತ ಒಬ್ಬ ಹಾಲುಮಾರುವಾತ. ಈತ ಪ್ರತಿದಿನ ಮಹಾನದಿಯನ್ನು ದಾಟಿ ಬರುತ್ತಿದ್ದನಂತೆ. ಹೀಗೆ ನದಿಯನ್ನು ದಾಟಿ ಬಂದು ಶಿವನನ್ನು ಪೂಜಿಸಿ ಹಾಲನ್ನು ನಿವೇದಿಸುತ್ತಿದ್ದನಂತೆ. ಈ...

    + ಹೆಚ್ಚಿಗೆ ಓದಿ
  • 04ಸಮಲೇಶ್ವರಿ ದೇವಾಲಯ

    16ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಮುಖವಾದದ್ದು. ಇದು ಶ್ರೀ ಸಮಲೇಶ್ವರಿ ದೇವಿಯ ದೇವಾಲಯ. ಭಕ್ತಾದಿಗಳು ದೇವಿಯನ್ನು ಭಕ್ತಿ ಮತ್ತು ಪ್ರೀತಿಪೂರ್ವಕವಾಗಿ “ಅಮ್ಮ” ಎಂದು ಕರೆಯುತ್ತಾರೆ. ಈ ದೇವಿಯನ್ನು ಸಂಬಾಲ್ಪುರದಲ್ಲಿ ಮಾತ್ರವಲ್ಲ ಒಡಿಸ್ಸಾ ಮತ್ತು...

    + ಹೆಚ್ಚಿಗೆ ಓದಿ
  • 05ಚಿಪಿಲಿಮಾ ಜಲವಿದ್ಯುತ್ ಯೋಜನೆ

    ಚಿಪಿಲಿಮಾ ಜಲವಿದ್ಯುತ್ ಯೋಜನೆ

    ಮಹಾನದಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕವೇ ಚಿಪಿಲಿಮಾ ಜಲವಿದ್ಯುತ್ ಯೋಜನೆ. ಇದು ಸಂಬಾಲ್ಪುರದಿಂದ 32 ಕಿಮೀ ದೂರದಲ್ಲಿದೆ. ಇದು ನಗರದ ಶಬ್ದ ಮತ್ತು ವಾಯುಮಾಲಿನ್ಯದಿಂದ ದೂರದಲ್ಲಿದೆ. 25 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಪಾತದ ಸುತ್ತಲ ವಾತಾವರಣವು ನೋಡಲು...

    + ಹೆಚ್ಚಿಗೆ ಓದಿ
  • 06ಘಂಟೇಶ್ವರಿ ದೇವಾಲಯ

    ಘಂಟೇಶ್ವರಿ ದೇವಾಲಯ

    ಘಂಟೇಶ್ವರಿ ದೇವಾಲಯವು ಧಾರ್ಮಿಕ ಮಹತ್ವಕ್ಕಿಂತ ಐತಿಹಾಸಿಕ ಮಹತ್ವವನ್ನು ಪಡೆದಿದೆ. ದೇವಾಲಯದಲ್ಲಿರುವ ಅಸಂಖ್ಯಾತ ಘಂಟೆಗಳಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಆವರಣದಲ್ಲಿನ ಕಟೆಕಟೆಗಳಲ್ಲಿನ ಮತ್ತು ಮೆಟ್ಟಿಲುಗಳ ಬದಿಯಲ್ಲಿರುವ ಸಣ್ಣ ಘಂಟೆಗಳು ಸುಮ್ಮನೆ ಮುಟ್ಟಿದರೆ ಸಾಕು ನಾದ ಅನುರಣಿಸುತ್ತದೆ.

    ಭಕ್ತಾದಿಗಳು...

    + ಹೆಚ್ಚಿಗೆ ಓದಿ
  • 07ದೆಬಿಗರ್ ವನ್ಯಜೀವಿಧಾಮ

    ದೆಬಿಗರ್ ವನ್ಯಜೀವಿಧಾಮವು ಭಾರತದಲ್ಲಿನ ಅತಿಹೆಚ್ಚು ವನ್ಯಜೀವಿಗಳನ್ನು ಹೊಂದಿರುವ ವನ್ಯಜೀವಿಧಾಮಗಳಲ್ಲೊಂದು. ಇಲ್ಲಿ ಸಸ್ಯ ಮತ್ತು ಜೀವಿ ವೈವಿಧ್ಯತೆಗೆ ಕಾರಣ ಹಿರಾಕುಡ್ ಅಣೆಕಟ್ಟು. ಅಣೆಕಟ್ಟು ಹತ್ತಿರದಲ್ಲಿರುವುದರಿಂದ ವನ್ಯಜೀವಿಗಳಿಗೆ ನೀರಿನಾಸರೆಯನ್ನು ಒದಗಿಸುತ್ತದೆ. ವನ್ಯಜೀವಿಗಳಲ್ಲದೆ ಚಳಿಗಾಲದಲ್ಲಿ ಇಲ್ಲಿಗೆ ವಲಸೆ...

    + ಹೆಚ್ಚಿಗೆ ಓದಿ
  • 08ಜಾನುವಾರು ದ್ವೀಪ

    ಜಾನುವಾರು ದ್ವೀಪ

    ಹಿರಾಕುಡ್ ಹಿನ್ನೀರಿನಲ್ಲಿ ಈ ದ್ವೀಪವಿದೆ. ಹಿರಾಕುಡ್ ಅಣೆಕಟ್ಟು ಕಟ್ಟುವ ಮುಂಚೆ ಈ ದ್ವೀಪವು ಒಂದು ಹಳ್ಳಿಯಾಗಿತ್ತು. ಅಣೆಕಟ್ಟು ನಿರ್ಮಾಣ ಪೂರ್ಣಗೊಂಡ ಬಳಿಕ ಈ ಹಳ್ಳಿಯ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಹೀಗೆ ಹಳ್ಳಿಯನ್ನು ಬಿಟ್ಟು ಹೊರಡುವಾಗ ಕೆಲ ಹಳ್ಳಿಯ ಜನ ತಮ್ಮ ಬದುಕಿನ ಭಾಗವಾಗಿದ್ದ ಜಾನುವಾರುಗಳನ್ನು ಅಲ್ಲಿಯೇ...

    + ಹೆಚ್ಚಿಗೆ ಓದಿ
  • 09ಉಷಾಕೋಟಿ

    ಉಷಾಕೋಟಿ

    ಉಷಾಕೋಟಿಯು ವನ್ಯಜೀವಿಧಾಮವಾಗಿದ್ದು 1962ರಲ್ಲಿ ಸ್ಥಾಪಿತವಾಯಿತು. ಇದು 300 ಚದರ ಕಿಮೀ ವಿಸ್ತೀರ್ಣದಲ್ಲಿನ ಕಾಡಾಗಿದ್ದು ಸಸ್ಯ ಮತ್ತು ಜೀವ ವೈವಿಧ್ಯದಿಂದ ಕೂಡಿದೆ. ದೆಬಿಗರ್ ವನ್ಯಜೀವಿ ಧಾಮದಂತೆಯೇ ಇದು  ಹಿರಾಕುಡ್ ಅಣೆಕಟ್ಟಿನಿಂದಾಗಿ ಮಹಾನದಿಯ ನೀರಿನ ಸೌಲಭ್ಯವನ್ನು ಪಡೆದಿದೆ.

    ಇಲ್ಲಿ ಗಂಧದ ಮರ, ಬೇವಿನ ಮರ,...

    + ಹೆಚ್ಚಿಗೆ ಓದಿ
  • 10ಕಂದಹಾರ

    ಕಂದಹಾರ

    ಸಂತ ಕವಿ ಭೀಮ ಭೋಯಿಯ ಅನುಯಾಯಿಗಳಿಗೆ ಧಾರ್ಮಿಕ ಸ್ಥಳವಾಗಿದೆ. ಇದು ಸಂಬಲ್ಪುರದಿಂದ 78 ಕಿಮೀ ದೂರದಲ್ಲಿದೆ. ಈ ಹಳ್ಳಿಯು ವಾಣಿಜ್ಯ ಪ್ರವಾಸೋದ್ಯಮ ಸಂಸ್ಕೃತಿಯಿಂದ ದೂರವಾಗಿದೆ. ಈ ಹಳ್ಳಿಯು ಸಂತ ಭೀಮ ಭೋಯಿಯ ಜನ್ಮಸ್ಥಳವಾಗಿದ್ದು ವೇಗದ ಪ್ರಪಂಚದಿಂದ ದೂರವಾಗಿ ಪ್ರಶಾಂತವಾಗಿದೆ. ಸಂತ ಭೀಮ ಭೋಯಿಯು ಅಲೇಖ ಧರ್ಮ ಅಥವ ಮಹಿಮಾ ಧರ್ಮದ...

    + ಹೆಚ್ಚಿಗೆ ಓದಿ
  • 11ಹತಿಬರಿ

    ಹತಿಬರಿ

    ಸಂಬಲ್ಪುರದಿಂದ 24 ಕಿಮೀ ದೂರದಲ್ಲಿ ಹತಿಬರಿಯಿದೆ. ಇಲ್ಲಿ ಪದ್ಮಶ್ರೀ ಡಾ. ಐಸಾಕ್ ಸನ್ತ್ರಾ ಅವರು ಸ್ಥಾಪಿಸಿರುವ ಕುಷ್ಠರೋಗಿಗಳ ಶುಶ್ರುಷಾ ಕೇಂದ್ರವಿದೆ. 1892ರಲ್ಲಿ ಡಾ. ಐಸಾಕ್ ಸನ್ತ್ರಾರವರು ಸಂಬಲ್ಪುರದಲ್ಲಿ ಜನಿಸಿದರು. ಕ್ರಿಶ್ಚಿಯನ್ರಾಗಿದ್ದ ಅವರನ್ನು ಅವರ ಮನೆಯವರು ಬಲಾಂಗಿರ್ನಲ್ಲಿನ ಮಿಷಿನರಿ ಸೇರುವಂತೆ...

    + ಹೆಚ್ಚಿಗೆ ಓದಿ
  • 12ಮಹಾನದಿ

    ಮಹಾನದಿ

    ಮಹಾನದಿಯೆಂದರೆ “ದೊಡ್ಡ ನದಿ” ಎಂದರ್ಥ. ಈ ನದಿಯ ಒಟ್ಟು ವಿಸ್ತೀರ್ಣ 858 ಕಿಮೀ. ಇದು ನಿಜಕ್ಕೂ ದೊಡ್ಡ ನದಿಯೇ. ಛತ್ತೀಸಗಢ ಮತ್ತು ಒಡಿಸ್ಸಾ ರಾಜ್ಯಗಳು ತಮ್ಮ ದೈನಂದಿನ ಬದುಕಿಗೆ ಈ ನದಿಯನ್ನೇ ಅವಲಂಭಿಸಿದೆ. ಈ ನದಿಯಲ್ಲಿ ಹಲವು ಅಣೆಕಟ್ಟುಗಳು ನಿರ್ಮಾಣವಾಗುತ್ತಿರುವುದರಿಂದ ನದಿಯ ಎಲ್ಲ ಭಾಗಗಳು ದೋಣಿ ವಿಹಾರಕ್ಕೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu