ಘಂಟೇಶ್ವರಿ ದೇವಾಲಯವು ಧಾರ್ಮಿಕ ಮಹತ್ವಕ್ಕಿಂತ ಐತಿಹಾಸಿಕ ಮಹತ್ವವನ್ನು ಪಡೆದಿದೆ. ದೇವಾಲಯದಲ್ಲಿರುವ ಅಸಂಖ್ಯಾತ ಘಂಟೆಗಳಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಆವರಣದಲ್ಲಿನ ಕಟೆಕಟೆಗಳಲ್ಲಿನ ಮತ್ತು ಮೆಟ್ಟಿಲುಗಳ ಬದಿಯಲ್ಲಿರುವ ಸಣ್ಣ ಘಂಟೆಗಳು ಸುಮ್ಮನೆ ಮುಟ್ಟಿದರೆ ಸಾಕು ನಾದ ಅನುರಣಿಸುತ್ತದೆ.
ಭಕ್ತಾದಿಗಳು ಇಲ್ಲಿ ತಮ್ಮ ಇಷ್ಟಾರ್ಥಗಳ ಪೂರೈಕೆಗಾಗಿ ಸಾವಿರಾರು ಘಂಟೆಗಳನ್ನು ಕಟ್ಟಿದ್ದಾರೆ. ಗರ್ಭಗುಡಿಯೊಳಗೆ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ಘಂಟೆಗಳನ್ನು ಕಟ್ಟಿದ್ದಾರೆ. ಗರ್ಭಗುಡಿಯ ಬಾಗಿಲುಗಳಿಗೆ ಘಂಟೆಗಳ ಗೊಂಚಲನ್ನೇ ಕಟ್ಟಿದ್ದಾರೆ. ಈ ಘಂಟೆಗಳು ಪ್ರತಿಕೂಲ ಹವಾಮಾನದಲ್ಲಿ ದೋಣಿಕಾರರಿಗೆ ದೂರದ ತೀರ ಕಾಣಿಸದಾದಾಗ ಸ್ಥಳವನ್ನು ಗುರುತಿಸಲು ನೆರವು ನೀಡಿವೆ. ಇದು ಲೈಟ್ಹೌಸ್ನಂತೆ ಕಾರ್ಯನಿರ್ವಹಿಸುತ್ತದೆ.