ಮುರ್ಗಮಹದೇವ್ ಮಂದಿರ, ಕೆಯೊಂಝಾರ

ಮುಖಪುಟ » ಸ್ಥಳಗಳು » ಕೆಯೊಂಝಾರ » ಆಕರ್ಷಣೆಗಳು » ಮುರ್ಗಮಹದೇವ್ ಮಂದಿರ

ಮುರ್ಗಮಹದೇವ್ ಮಂದಿರ ಈ ಪ್ರದೇಶದ ಪ್ರಸಿದ್ಧ ಮಂದಿರವಾಗಿದೆ. ದೇವಸ್ಥಾನ ತನ್ನದೇ ಆದ ಪರಂಪರಾಗತ ಸ್ಥಾನವನ್ನು ಹೊಂದಿದೆ. ಶಿವ ದೇವರಿಂದ ಆಶೀರ್ವಾದವನ್ನು ಪಡೆಯಲು ಪ್ರತೀ ತಿಂಗಳು ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿರುವ ಎಲ್ಲಾ ಬುಡಕಟ್ಟು ಜನಾಂಗದವರು ಶಿವ ದೇವರನ್ನು ತುಂಬಾ ಶಕ್ತಿಶಾಲಿಯೆಂದು ಪರಿಗಣಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವವರು ಇಚ್ಛೆಗಳು ಪೂರ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಶಿವ ದೇವರು ಯಾರನ್ನೂ ಬರಿಗೈಯಲ್ಲಿ ಹಿಂತಿರುಗಲು ಬಿಡಲ್ಲ.

ಮಂದಿರವು ಒಂದು ತೊರೆಯ ಬದಿಯಲ್ಲಿ ನೆಲೆಗೊಂಡಿದೆ. ಮಂದಿರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಕೆಯೊಂಜ್ಹಾರದ ಜಿಲ್ಲಾ ಕಚೇರಿಯಿಂದ 65 ಕಿ.ಮೀ. ದೂರದಲ್ಲಿರುವ ಠಾಕೂರಾಣಿ ಬೆಟ್ಟದಲ್ಲಿ ಮಂದಿರವಿದೆ. ಮಂದಿರವು ಚಾಂಪುಯಾ ಉಪಕೇಂದ್ರದಲ್ಲಿದೆ ಮತ್ತು ಮಂದಿರದ ಸುತ್ತಮುತ್ತ ಸ್ಥಳೀಯಾಡಳಿತ ಭಾರೀ ಭದ್ರತಾ ವ್ಯವಸ್ಥೆಯನ್ನು ಮಾಡಿದೆ.

Please Wait while comments are loading...