ಮುಖಪುಟ » ಸ್ಥಳಗಳು » ಕೆಯೊಂಝಾರ » ಹವಾಮಾನ

ಕೆಯೊಂಝಾರ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Keonjhar, India 33 ℃ Partly cloudy
ಗಾಳಿ: 8 from the W ತೇವಾಂಶ: 23% ಒತ್ತಡ: 1010 mb ಮೋಡ ಮುಸುಕು: 19%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 18 Mar 24 ℃ 76 ℉ 33 ℃92 ℉
Monday 19 Mar 24 ℃ 74 ℉ 36 ℃97 ℉
Tuesday 20 Mar 26 ℃ 80 ℉ 37 ℃98 ℉
Wednesday 21 Mar 26 ℃ 78 ℉ 40 ℃103 ℉
Thursday 22 Mar 25 ℃ 77 ℉ 36 ℃97 ℉

ಹೆಚ್ಚಿನ ಪ್ರವಾಸಿಗರು ಹವಾಮಾನ ಸಾಧಾರಣವಾಗಿರುವ ನವಂಬರ್ ತಿಂಗಳಲ್ಲಿ ಕೆಯೊಂಜ್ಹಾರಗೆ ಭೇಟಿ ನೀಡಲು ಬಯಸುತ್ತಾರೆ. ಈ ಅವಧಿಯಲ್ಲಿ ದಿನದುದ್ದಕ್ಕೂ ಹವಾಮಾನ ತಂಪು ಹಾಗೂ ಹಿತಕರವಾಗಿರುತ್ತದೆ. ಪ್ರವಾಸಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ತಮ್ಮ ಪ್ರವಾಸವನ್ನು ಆನಂದಿಸಬಹುದು.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕವಿರುವ ಬೇಸಿಗೆ ಕಾಲ ಕೆಯೊಂಜ್ಹಾರನಲ್ಲಿ ತುಂಬಾ ಉಷ್ಣ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಈ ವೇಳೆ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ. ಆದರೆ ಸಂಜೆಯಾಗುತ್ತಿರುವಂತೆ ಇದು 25 ಡಿಗ್ರಿ ಸೆಲ್ಸಿಯಸ್ ಗಿಳಿಯುತ್ತದೆ. ಈ ವೇಳೆ ಕೆಯೊಂಜ್ಹಾರಗೆ ಪ್ರಯಾಣಿಸುವುದು ಯೋಗ್ಯವಲ್ಲ.

ಮಳೆಗಾಲ

ಮಾನ್ಸೂನ್ ನಲ್ಲಿ ಕೆಯೊಂಜ್ಹಾರ್ ನಲ್ಲಿ ಭಾರೀ ಮಳೆಯಾಗುತ್ತದೆ. ಜೂನ್ ನಲ್ಲಿ ಆರಂಭವಾಗುವ ಮಾನ್ಸೂನ್ ತಿಂಗಳು ಸಪ್ಟೆಂಬರ್ ನಲ್ಲಿ ಅಂತ್ಯವಾಗುತ್ತದೆ. ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಮಾನ್ಸೂನ್ ಇರುತ್ತದೆ ಮತ್ತು ಈ ಮಳೆಗಾಲದಲ್ಲಿ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ವರ್ಷದ ಈ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಯೋಗ್ಯವಲ್ಲ. ಕೆಲವೊಮ್ಮೆ ಮಾನ್ಸೂನ್ ಅಕ್ಟೋಬರ್ ತನಕವೂ ಮುಂದುವರಿಯುತ್ತದೆ.

ಚಳಿಗಾಲ

ಕೆಯೊಂಜ್ಹಾರನಲ್ಲಿ ಚಳಿಗಾಲ ತುಂಬಾ ಸಣ್ಣದಾಗಿರುತ್ತದೆ. ಆದರೆ ತುಂಬಾ ಹಿತಕರವಾಗಿರುತ್ತದೆ. ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳತನಕವಿರುತ್ತದೆ. ಕೆಲವೊಮ್ಮೆ ಹವಾಮಾನ ತುಂಬಾ ಚಳಿಯಿಂದ ಕೂಡಿರುತ್ತದೆ ಮತ್ತು ಈ ವೇಳೆ ಪ್ರವಾಸಿಗಳು ಉಣ್ಣೆ ಬಟ್ಟೆ ಜತೆಗಿಟ್ಟುಕೊಂಡು ಪ್ರಯಾಣಿಸಬೇಕು. ಕೆಲವೊಮ್ಮೆ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯುತ್ತದೆ.