ಕಂದಧಾರ ಜಲಪಾತ, ಕೆಯೊಂಝಾರ

ಕಂದಧಾರ ಜಲಪಾತ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯಲ್ಲಿರುವ ಅತ್ಯಂತ ಜನಪ್ರಿಯ ಜಲಪಾತ. ಜಲಪಾತವು ಭಾರತದ ಅಗ್ರ 12 ಜಲಪಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜಲಪಾತದ ಮೂಲವು ಕುದುರೆ ಬಾಲದ ಆಕಾರದಲ್ಲಿ ಕೆಳಗಿಳಿಯುವುದನ್ನು ನೋಡುವುದೇ ಒಂದು ಆಕರ್ಷಣೆ. ಇದು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣಗಳಲ್ಲಿ ಒಂದು ಮತ್ತು ವರ್ಷವಿಡೀ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಲಪಾತದಿಂದ 244 ಮೀಟರ್ ಎತ್ತರದಲ್ಲಿ ಕೋರಪಾನಿ ನಾಳ ಎನ್ನುವ ಹೊಳೆ ಹರಿಯುತ್ತದೆ ಮತ್ತು ಸ್ವಲ್ಪ ದೂರದಿಂದ ಇದನ್ನು ವೀಕ್ಷಿಸುವುದು ಕಣ್ಣಿಗೊಂದು ಹಬ್ಬ.

ಪುರಾಣಗಳು ಈ ಜಲಪಾತವನ್ನು ತೇಜೋಮಯಗೊಳಿಸಿರುವ ಕಾರಣ ಸ್ಥಳೀಯ ಬುಡಕಟ್ಟು ಜನಾಂಗದವರು ಇದನ್ನು ತುಂಬಾ ಪವಿತ್ರವೆಂದು ಪರಿಗಣಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಈ ಜಲಪಾತವನ್ನು ಬತ್ತದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಜಲಪಾತದ ವೈಭವವನ್ನು ಪುನಶ್ಚೇತನಗೊಳಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

Please Wait while comments are loading...