Search
  • Follow NativePlanet
Share
ಮುಖಪುಟ » ಸ್ಥಳಗಳು » ಸಮಸ್ತಿಪುರ್ » ಹವಾಮಾನ

ಸಮಸ್ತಿಪುರ್ ಹವಾಮಾನ

ಸಮಸ್ತಿಪುರವನ್ನು ಸಂದರ್ಶಿಸಲು ಅತ್ಯುತ್ತಮ ಕಾಲಾವಧಿಯು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯಾಗಿದ್ದು, ಈ ಅವಧಿಯಲ್ಲಿ ಹವಾಮಾನವು ಅಷ್ಟೊಂದು ತ್ರಾಸದಾಯಕವಾಗಿರುವುದಿಲ್ಲ.

ಬೇಸಿಗೆಗಾಲ

ಸಮಸ್ತಿ ಪುರದಲ್ಲಿ ಬೇಸಿಗೆಯು ಸಹಿಸಲಸಾಧ್ಯವಾಗಿರುತ್ತದೆ.   ಬೇಸಿಗೆಯು ನಿಜಕ್ಕೂ ಅತೀ ಬಿಸಿಯಾಗಿದ್ದು, ಉಷ್ಣತೆಯು 45 ಡಿಗ್ರಿ ಸೆಲ್ಷಿಯಸ್ ನವರೆಗೆ ತಲುಪಬಹುದು.  ಅದರಲ್ಲೂ ಮೇ ತಿಂಗಳಂತೂ ಇಲ್ಲಿ ಅತ್ಯಂತ ಬಿಸಿಯಾಗಿರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ತಿಂಗಳುಗಳವರೆಗೆ ಇಲ್ಲಿ ಮಳೆಗಾಲವಿರುತ್ತದೆ.  ಈ ಕಿರು ಅವಧಿಯಲ್ಲಿ, ಈ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತದೆ.  ಮಳೆಗಾಲದ ನಂತರದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ಹವಾಮಾನವು ಮಿತಿಯಲ್ಲಿದ್ದು, ಉಷ್ಣತೆಯು ಸಾಕಷ್ಟು ಕಡಿಮೆಯಾಗಿರುತ್ತದೆ.  ಹೀಗಾಗಿ, ಈ ಅವಧಿಯು ಹೆಚ್ಚಿನ ಪ್ರವಾಸಿಗರಿಗೆ, ಈ ಸ್ಥಳವನ್ನು ಸಂದರ್ಶಿಸಲು ಯುಕ್ತವೆನಿಸುತ್ತದೆ.

ಚಳಿಗಾಲ

ಚಳಿಗಾಲವು ಡಿಸೆಂಬರ್ ತಿಂಗಳಲ್ಲಿ ಆರಂಭಗೊಂಡು ಫೆಬ್ರವರಿಯ ಕೊನೆಯವರೆಗೆ ಮುಂದುವರೆಯುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು ಸುಮಾರು 6 ಡಿಗ್ರಿ ಸೆಲ್ಷಿಯಸ್ ನಷ್ಟು ಕೆಳಕ್ಕಿಳಿಯುವ ಸಾಧ್ಯತೆಯಿದೆ.  ಸಾಮಾನ್ಯವಾಗಿ ಚಳಿಗಾಲವು ಒಣಹವೆಯಿಂದ ಕೂಡಿರುತ್ತದೆ.