ಶೇರಗಡ್ ಕೋಟೆಯು ಸಸಾರಾಮ್ನಿಂದ 10 ಕಿಮೀ ದೂರದ ಚೆನಾರಿ ಪ್ರದೇಶದಲ್ಲಿದೆ. ಈ ಕೋಟೆಯನ್ನು ರೊಹ್ತಾಸ್ ಅನ್ನು ಶೇರ್ ಷಾ ಸೂರಿಯು ಆಕ್ರಮಿಸಿದ ಸಂದರ್ಭದಲ್ಲಿ ಕಟ್ಟಿಸಿದನಂತೆ. ಈ ಕೋಟೆಯನ್ನು ಸುರಕ್ಷತೆಗಾಗಿ ಕಟ್ಟಲಾಗಿದೆ. ಹಸನ್ ಖಾನ್ ಸು ಶೇರ್ ಷಾ ಸುರ್ನ ತಂದೆ ತನ್ನ ಜಾಗೀರು ಕೋಟೆ ಕಟ್ಟುವ ಮೂಲಕ ಸಂರಕ್ಷಿಸಿದ್ದನು. ಈ ಕೋಟೆಯು ಮುಂಚೆ ನವಾಬ್ಗಡ್ ಎಂದು ಕರೆಯಲ್ಪಡುತ್ತಿತ್ತು. ಇದು ಈಗ ಶೇರಗಡ್ ಕೋಟೆಯೆಂದು ಕರೆಯಾಲ್ಪಡುತ್ತದೆ ಮತ್ತು ಇದು ಶೇರ್ ಷಾನ ಗುಮ್ಮಟದಿಂದ ಅನತಿ ದೂರದಲ್ಲಿದೆ. ಈ ಪ್ರವಾಸಿ ತಾಣವು ಇದು ಹಸನ್ ಖಾನ್ ಸುರ್ನ ಮನೆಯೆಂದು ಪ್ರಸಿದ್ಧವಾಗಿದೆ. ಶೇರ್ ಷಾ ಸುರ್ ತನ್ನ ಬಾಲ್ಯವನ್ನು ಇಲ್ಲಿಯೇ ಕಳೆದಿದ್ದ. ಈ ಕೋಟೆಯು ಮೂರು ಅಂತಸ್ತಿನ ಕಟ್ಟಡ. ಇದರಲ್ಲಿ ಹಲವು ಕೋಣೆಗಳಿದ್ದು ಸುಂದರವಾದ ದ್ವಾರವನ್ನು ಹೊಂದಿದೆ. ಮೊಗಲ ದೊರೆಗಳು ಇಲ್ಲಿದ್ದರಿಂದ ಇದಕ್ಕೆ ಐತಿಹಾಸಿಕ ಮಹತ್ವವಿದೆ.