Search
 • Follow NativePlanet
Share
ಮುಖಪುಟ » ಸ್ಥಳಗಳು» ಅರಕು ಕಣಿವೆ

ಅರಕು ಕಣಿವೆ - ಆಂಧ್ರ ಪ್ರದೇಶದ ಒಂದು ಗಿರಿಧಾಮ

18

ಅರಕು ಕಣಿವೆಯು ದಕ್ಷಿಣ ಭಾರತದಲ್ಲಿರುವ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಈ ಪಟ್ಟಣವು ಪೂರ್ವ ಘಟ್ಟದ ಪ್ರಶಾಂತವಾದ ಹಾಗು ಸುಂದರವಾದ ಪ್ರದೇಶದಲ್ಲಿ ನೆಲೆಗೊಂಡಿದ್ದು  ತನ್ನ ಸಾಂಸ್ಕೃತಿಕ ಮತ್ತು  ಐತಿಹಾಸಿಕ ಶ್ರೀಮಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಿರಿಧಾಮವು ಯಾವುದೇ ರೀತಿಯಲ್ಲಿ ಕಲುಷಿತಗೊಳ್ಳದಿರುವುದರಿಂದಾಗಿ ಪ್ರವಾಸಿಗರ ವಲಯದಲ್ಲಿ ದಕ್ಷಿಣ ಭಾರತದ ಖ್ಯಾತ ಗಿರಿಧಾಮವಾಗಿ ಖ್ಯಾತಿಯನ್ನು ಪಡೆದಿದೆ. ಈ ಗಿರಿಧಾಮದ ಸೌಂದರ್ಯವನ್ನು ತೆಲುಗು ಚಲನಚಿತ್ರಗಳು ಬಳಸಿಕೊಂಡಿವೆ. ಹ್ಯಾಪಿ ಡೇಸ್, ಡಾರ್ಲಿಂಗ್ ಮತ್ತು ಕಥಾ ಚಲನಚಿತ್ರಗಳು ಭಾಗಶಃ ಇದೇ ಸ್ಥಳದಲ್ಲಿ ಚಿತ್ರೀಕರಣಗೊಂಡಿವೆ.  

ಅರಕು ಕಣಿವೆಯು ವೈಜಾಗ್‍ನಿಂದ 114 ಕಿ.ಮೀ ದೂರದಲ್ಲಿದ್ದು, ಒರಿಸ್ಸಾ ಗಡಿಗೆ ಅತ್ಯಂತ ಸನಿಹದಲ್ಲಿದೆ. ಈ ಕಣಿವೆಯು ಜೀವ ವೈವಿಧ್ಯಕ್ಕೆ ಖ್ಯಾತಿ ಪಡೆದಿರುವ ಅನಂತಗಿರಿ ಮತ್ತು ಸುಂಕರಿಮೆಟ್ಟ ಸಂರಕ್ಷಿತ ಅರಣ್ಯಗಳಿಂದ ಕೂಡಿದೆ. ಈ ಕಣಿವೆಯು ರಕ್ತಕೊಂಡ, ಚಿತಮೊಗೊಂಡಿ, ಗಾಲಿಕೊಂಡ ಮತ್ತು ಸುಂಕರಿಮೆಟ್ಟ ಎಂಬ ಬೆಟ್ಟಗಳಿಂದ ಸುತ್ತುವರೆದಿದೆ. ಇವುಗಳಲ್ಲಿ ಗಾಲಿಕೊಂಡ ಬೆಟ್ಟವು ಆಂಧ್ರ ಪ್ರದೇಶ ರಾಜ್ಯದ ಅತ್ಯಂತ ಎತ್ತರದ ಬೆಟ್ಟವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅರಕು ಗಿರಿಧಾಮಕ್ಕಷ್ಟೇ ಅಲ್ಲದೆ ಇಲ್ಲಿನ ಕಾಫಿ ತೋಟಗಳಿಗು ಸಹ ಪ್ರಸಿದ್ದಿಯನ್ನು ಪಡೆದಿದೆ. ಅರಕುವಿನಲ್ಲಿ ನೀವು ಎಲ್ಲೆ ಸುಳಿದಾಡಿದರು ಕಾಫಿ ಬೀಜಗಳ ಸುವಾಸನೆಯನ್ನು ಆಸ್ವಾದಿಸಬಹುದು. ಕಾಫಿ ತೋಟಗಳ ವಿಸ್ತಾರವು ಅರಕು ಕಣಿವೆಯ ಸುತ್ತ ಮುತ್ತ ನೆಲೆಸಿರುವ ಬುಡಕಟ್ಟು ಜನರಿಗೆ ಆಶ್ರಯವನ್ನು ಒದಗಿಸಿವೆ. 2007 ರಲ್ಲಿ ಇಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯದ ಕಾಫಿ ಬೆಳೆಗಾರರು ದೇಶದ ಮೊಟ್ಟ ಮೊದಲ ಸಾವಯವ ಕಾಫಿ ಬ್ರಾಂಡ್‍ ಅನ್ನು ಪರಿಚಯಿಸಿದರು. ಈ ಬ್ರಾಂಡ್‍ಗೆ ’ಅರಕು ಎಮೆರಾಲ್ಡ್’ ಎಂಬ ಹೆಸರು ನೀಡಿದ್ದಾರೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧಿಯನ್ನು ಗಳಿಸಿದೆ. ಪ್ರಸ್ತುತ ಸಾವಿರಾರು ಬುಡಕಟ್ಟು ಜನರು ಈ ತೋಟಗಳಲ್ಲಿ ಸಹಾಯಕರಾಗಿ ಮತ್ತು ಪಾಲುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಕರ್ಷಣೀಯ ಸ್ಥಳಗಳು

ಅರಕು ಕಣಿವೆಯು ಹಲವಾರು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ, ಟೈಡಾ, ಬೊರ್ರಾ ಗುಹೆಗಳು, ಸಂಗ್ಡಾ ಜಲಪಾತ ಮತ್ತು ಪದ್ಮಾಪುರಂ ಬೊಟಾನಿಕಲ್ ಗಾರ್ಡನ್‍ಗಳನ್ನು ತಪ್ಪದೇ ನೋಡ ಬೇಕಾದ ಸ್ಥಳಗಳಾಗಿವೆ. ಇದರ ಜೊತೆಗೆ ಪರಿಸರದೊಂದಿಗೆ ಅದರ ನೈಜ ವಾತಾವರಣದ ಸವಿಯನ್ನು ಸವಿಯಲು ಬಯಸುವವರು ಕಾಫೀ ತೋಟಗಳಲ್ಲಿ ಸುತ್ತಾಡುತ್ತ ಕಾಲ ಕಳೆಯಬಹುದು. ಕೆಲವು ಮಂದಿ ಇಲ್ಲಿ ಸುತ್ತಾಡುವ ಬದಲಿಗೆ ಇಲ್ಲಿನ ಪ್ರಶಾಂತವಾದ ವಾತಾವರಣದ ನಡುವೆ ಕಾಲ ಕಳೆಯಲೆಂದೆ ಆಗಮಿಸುತ್ತಾರೆ. ಅವುಗಳೆಲ್ಲದರ ಜೊತೆಗೆ ಅರಕು ಕಣಿವೆಯಲ್ಲಿರುವ ಯಾವುದೇ ಪ್ರದೇಶವು ನೋಡದೆ ಹೋದರು ಪರವಾಗಿಲ್ಲ ಎನ್ನುವಂತಿಲ್ಲ. ಏಕೆಂದರೆ ಇಲ್ಲಿರುವ ಪ್ರತಿಯೊಂದು ಸ್ಥಳವು ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಕುರಿತಾಗಿ ಪ್ರವಾಸಿಗರಿಗೆ ಹೆಚ್ಚಿನ ತಿಳುವಳಿಕೆಯನ್ನು ಒದಗಿಸುತ್ತವೆ.

ಅರಕು ಕಣಿವೆಗೆ  ತಲುಪಲು ಅತ್ಯುತ್ತಮ ಮಾರ್ಗ

ಈ ಗಿರಿಧಾಮವು ದೇಶದ ಇನ್ನಿತರ ಭಾಗದೊಂದಿಗೆ ಉತ್ತಮವಾದ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿ ಎರಡು ರೈಲು ನಿಲ್ದಾಣಗಳಿವೆ. ಒಂದು ಅರಕುವಿನಲ್ಲಿದ್ದರೆ, ಇನ್ನೊಂದು ಅರಕು ಕಣಿವೆಯಲ್ಲಿ ಇದೆ. ಈ ಎರಡು ರೈಲು ನಿಲ್ದಾಣಗಳು ವೈಜಾಗ್ ರೈಲು ನಿಲ್ದಾಣದೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿವೆ. ಪೂರ್ವ ಕರಾವಳಿ ರೈಲ್ವೇಯಲ್ಲಿ ಬರುವ ಕೊತ್ತವಲಸ - ಕಿರಂಡುಲ್ ರೈಲು ನಿಲ್ದಾಣವು ವಿಶಾಖ ಪಟ್ಟಣಂ ವಿಭಾಗದ ಅಡಿಯಲ್ಲಿ ಬರುತ್ತದೆ. ಶಿಮಿಲಿಗುಡ ರೈಲು ನಿಲ್ದಾಣವು ಇಡೀ ದೇಶದಲ್ಲಿಯೆ ಅತ್ಯಂತ ಎತ್ತರದಲ್ಲಿರುವ ಬ್ರಾಡ್ ಗೇಜ್ ಮಾರ್ಗವಾಗಿದೆ. ಈ ನಿಲ್ದಾಣವು ಸಮುದ್ರ ಮಟ್ಟದಿಂದ 996 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಗಿರಿಧಾಮಕ್ಕೆ ವಿಮಾನ ನಿಲ್ದಾಣವಿಲ್ಲ. ಆದರು ಇಲ್ಲಿಗೆ ತಲುಪುವ ರಸ್ತೆ ಮಾರ್ಗಗಳು ಉತ್ತಮ ಸ್ಥಿತಿಯಲ್ಲಿವೆ. ಪ್ರವಾಸಿಗರು ಆಂಧ್ರ ಪ್ರದೇಶದ ಯಾವುದೇ ನಗರದಿಂದ ಅರಕು ಕಣಿವೆಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಅರಕು ಕಣಿವೆಗೆ ತಲುಪಬಹುದು. ಪ್ರತಿದಿನ ಹಲವಾರು ಖಾಸಗಿ ಬಸ್ ಏಜೆನ್ಸಿಗಳ ಬಸ್ಸುಗಳು ಅರಕುಗೆ ಹೋಗಿ ಬರುತ್ತಿರುತ್ತವೆ. ಡೀಲಕ್ಸ್ ಮತ್ತು ವೋಲ್ವೋ ಬಸ್ಸುಗಳು ಹೈದರಬಾದ್ ಮತ್ತು ವೈಜಾಗ್‍ಗಳಿಂದ ಅರಕು ಕಣಿವೆಗೆ ಹೋಗಲು ದೊರೆಯುತ್ತವೆ. ಬಸ್ಸುಗಳ ದರವು ಖಾಸಗಿ ಟ್ಯಾಕ್ಸಿಗಳಿಗಿಂತ ಅಗ್ಗವಾಗಿದೆ, ಆದರೆ ಡೀಲಕ್ಸ್ ಮತ್ತು ವೋಲ್ವೋ ಬಸ್ಸುಗಳ ದರವು ಸಾಮಾನ್ಯ ಬಸ್ಸುಗಳಿಗಿಂತ ಹೆಚ್ಚಾಗಿರುತ್ತದೆ.

ಅತ್ಯುತ್ತಮವಾದ ಹವಾಮಾನ

ಅರಕು ಕಣಿವೆಯು ವರ್ಷಪೂರ್ತಿ ಹಿತಮಿತವಾದ ಹವಾಗುಣವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಹವಾಮಾನವು ಬಯಲು ಸೀಮೆಯಂತೆ ಸುಡುವ ಬಿಸಿಲನ್ನು ಹೊಂದಿರುವುದಿಲ್ಲ. ಅಲ್ಲದೆ ಇಲ್ಲಿ ಚಳಿಗಾಲದಲ್ಲಿ ಉಷ್ಣಾಂಶವು ಕುಸಿಯುವ ಭೀತಿ ಇಲ್ಲ. ಕೊರೆಯುವ ಚಳಿಯಿಲ್ಲದೆ ತಂಪಾದ ಹಾಗು ಅತ್ಯಂತ ಹಿತವಾದ ವಾತಾವರಣ ಇಲ್ಲಿರುತ್ತದೆ. ಬಯಲು ಸೀಮೆಯಲ್ಲಿ ಬೇಸಿಗೆಯ ಧಗೆ ಹೆಚ್ಚಾದಾಗ ನಗರ ಪ್ರಾಂತ್ಯದ ಜನರು ಬಿಸಿಲಿನಿಂದ ವಿಶ್ರಾಂತಿ ಪಡೆಯಲು ಇಲ್ಲಿಗೆ ಧಾವಿಸುತ್ತಾರೆ. ಆದರು ಇಲ್ಲಿ ಕಾಲ ಕಳೆಯಲು ಅತ್ಯುತ್ತಮ ಸಮಯ ಚಳಿಗಾಲ. ಈ ಸಮಯದಲ್ಲಿ ಇಲ್ಲಿ ಚಾರಣ, ವೇಗದ ನಡಿಗೆ ಮತ್ತು ಪರ್ವತಾರೋಹಣದಂತಹ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು.

ಅರಕು ಕಣಿವೆ ಪ್ರಸಿದ್ಧವಾಗಿದೆ

ಅರಕು ಕಣಿವೆ ಹವಾಮಾನ

ಅರಕು ಕಣಿವೆ
29oC / 83oF
 • Partly cloudy
 • Wind: NW 9 km/h

ಉತ್ತಮ ಸಮಯ ಅರಕು ಕಣಿವೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅರಕು ಕಣಿವೆ

 • ರಸ್ತೆಯ ಮೂಲಕ
  ರಸ್ತೆ ಮೂಲಕ ಅರಕು ಕಣಿವೆಗೆ ಹೋಗುವುದು ಒಂದು ಅಭೂತಪೂರ್ವ ಅನುಭವವನ್ನು ಪಡೆದಂತಾಗುತ್ತದೆ. ರಸ್ತೆಯ ಅಕ್ಕ ಪಕ್ಕದ ನಿಸರ್ಗದ ರಮಣೀಯ ದೃಶ್ಯಗಳನ್ನು ಸವಿಯುತ್ತ ಅರಕುಗೆ ಸಾಗಬಹುದು. ಹಲವಾರು ಬಸ್ಸುಗಳು ವಿಶಾಖ ಪಟ್ಟಣಂನಿಂದ ಅರಕು ಕಣಿವೆಗೆ ಬಂದು ಹೋಗುತ್ತಿರುತ್ತವೆ. ಈ ಗಿರಿಧಾಮಕ್ಕೆ ಖಾಸಗಿ ಬಸ್ ಏಜೆನ್ಸಿಗಳವರು ಡೀಲಕ್ಸ್ ಮತ್ತು ವೋಲ್ವೋ ಬಸ್ಸುಗಳ ಸೇವೆಯನ್ನು ನೀಡುತ್ತಾರೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅರಕು ಕಣಿವೆಯಲ್ಲಿ ಒಂದು ರೈಲು ನಿಲ್ದಾಣವಿದೆ. ಒಂದು ಪ್ರಯಾಣಿಕರ ರೈಲು ಪ್ರತಿದಿನ ವಿಶಾಖಪಟ್ಟಣ ನಿಲ್ದಾಣದಿಂದ ಅರಕು ಕಣಿವೆಗೆ ಬರುತ್ತದೆ. ಇಲ್ಲಿಗೆ ತಲುಪಲು ಏಳು ಗಂಟೆಗಳ ಪ್ರಯಾಣ ತಗುಲುತ್ತದೆ. ಅರಕುವಿನ ನಿಲ್ದಾಣ ತಲುಪಿದ ಮೇಲೆ ನೀವು ಕ್ಯಾಬ್, ಬಸ್ಸು ಅಥವಾ ಇನ್ನಿತರ ಸಾರಿಗೆ ವ್ಯವಸ್ಥೆಯ ಮೂಲಕ ನೀವು ಅರಕು ಕಣಿವೆಯಲ್ಲಿ ಸುತ್ತಾಡಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅರಕು ಕಣಿವೆಯು ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ವಿಶಾಖ ಪಟ್ಟಣಂನಲ್ಲಿರುವ ವಿಮಾನ ನಿಲ್ದಾಣವು ಇಲ್ಲಿಂದ 112 ಕಿ.ಮೀ ದೂರದಲ್ಲಿದ್ದು, ಅರಕು ಕಣಿವೆಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಎರಡು ಟರ್ಮಿನಲ್‍ಗಳನ್ನು ಹೊಂದಿದ್ದು, ಕೇವಲ ದೇಶಿಯ ವಿಮಾನಗಳ ಸಂಚಾರವನ್ನು ಹೊಂದಿದೆ. ಹೈದರಬಾದ್‍ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರು ಈ ವಿಮಾನ ನಿಲ್ದಾಣದಲ್ಲಿ ದೊರೆಯುವ ಪೂರ್ವ ಪಾವತಿ ಟ್ಯಾಕ್ಸಿಗಳ ಮೂಲಕ ಅರಕು ಕಣಿವೆಯನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Oct,Wed
Return On
17 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Oct,Wed
Check Out
17 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Oct,Wed
Return On
17 Oct,Thu
 • Today
  Araku Valley
  29 OC
  83 OF
  UV Index: 8
  Partly cloudy
 • Tomorrow
  Araku Valley
  23 OC
  74 OF
  UV Index: 8
  Sunny
 • Day After
  Araku Valley
  24 OC
  75 OF
  UV Index: 8
  Partly cloudy