Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಬುಡಕಟ್ಟು ವಸ್ತು ಸಂಗ್ರಹಾಲಯ

ಬುಡಕಟ್ಟು ವಸ್ತು ಸಂಗ್ರಹಾಲಯ, ಅರಕು ಕಣಿವೆ

1

ಸಾರ್ವಜನಿಕರಿಗೆ ಈ ಪ್ರದೇಶದ ಸುತ್ತಮುತ್ತ ವಾಸಿಸುವ ಬುಡಕಟ್ಟು ಜನರ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ಬುಡಕಟ್ಟು ವಸ್ತು ಸಂಗ್ರಹಾಲಯವನ್ನು ( ಟ್ರೈಬಲ್ ಮ್ಯೂಸಿಯಂ) ಅರಕು ಕಣಿವೆಯಲ್ಲಿ ಸ್ಥಾಪಿಸಲಾಗಿದೆ. ಈ ಸಂಗ್ರಹಾಲಯವು ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಬುಡಕಟ್ಟು ಜನರ ದೈನಂದಿನ ಜೀವನ ಶೈಲಿಯನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಜೊತೆಗೆ, ಅವರ ಜೀವನದ ಕುರಿತಾಗಿ ಒಳ ನೋಟವನ್ನು ಸಹ ಒದಗಿಸುತ್ತದೆ. ಇಲ್ಲಿಗೆ ಭೇಟಿ ನೀಡುವವರು ಇಲ್ಲಿರುವ ಜೇಡಿ ಮಣ್ಣಿನ ಪ್ರತಿಕೃತಿಗಳನ್ನು ನೋಡಬಹುದು. ಈ ಪ್ರತಿಕೃತಿಗಳಲ್ಲಿ ಬುಡಕಟ್ಟು ಜನರು ದಿನಂಪ್ರತಿ ನಡೆಸುವ ಕೆಲಸ, ಕಾರ್ಯಗಳನ್ನು ನಾವು ಕಾಣಬಹುದು.

ಈ ಎಲ್ಲ ಪ್ರತಿಕೃತಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗಿದ್ದು, ಅವು ಈ ಜನರ ಆಚಾರ ವಿಚಾರಗಳ ಕುರಿತಾಗಿ ನಮಗೆ ಸ್ಪಷ್ಟವಾದ ತಿಳುವಳಿಕೆಯನ್ನು ಒದಗಿಸುವಂತೆ ನಿರ್ಮಾಣಗೊಂಡಿವೆ. ಇಲ್ಲಿ ಹಲವಾರು ಆಭರಣಗಳು, ಬೇಟೆ ಸಾಧನಗಳು, ಗೃಹೋಪಯೋಗಿ ವಸ್ತುಗಳು ಮತ್ತು ಅಡುಗೆ ಮನೆಯ ಸಾಮಾನುಗಳು ಹಾಗು ಇತ್ಯಾದಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ವಸ್ತು ಸಂಗ್ರಹಾಲಯವು ಐತಿಹಾಸಿಕ ವಸ್ತು ಸಂಗ್ರಹಾಲಯವಲ್ಲ, ಆದರು ಈ ವಸ್ತು ಸಂಗ್ರಹಾಲಯವು ಬುಡಕಟ್ಟು ಜನರು ಹೇಗೆ ಈ ಪಟ್ಟಣದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದರ ಕುರಿತು ಗಮನ ಸೆಳೆಯುತ್ತದೆ. 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City