Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಅನಂತಗಿರಿಯ ಮೇಲಿನ ಕಾಫೀ ತೋಟಗಳು

ಅನಂತಗಿರಿಯ ಮೇಲಿನ ಕಾಫೀ ತೋಟಗಳು, ಅರಕು ಕಣಿವೆ

1

ನೀವೇನಾದರು ಅರಕು ಕಣಿವೆ ಪ್ರಾಂತ್ಯದಲ್ಲಿದ್ದರೆ, ಅನಂತಗಿರಿಯ ಮೇಲಿನ ಕಾಫೀ ತೋಟಗಳು ನೀವು ತಪ್ಪದೆ ನೋಡಬೇಕಾದ ಪ್ರದೇಶಗಳಾಗಿವೆ. ನೀವು ಅರಕು ಕಣಿವೆಯನ್ನು ತಲುಪಿದ ಕೂಡಲೆ ಮೈಲುಗಟ್ಟಲೆ ಚಾಚಿಕೊಂಡಿರುವ ಕಾಫೀ ತೋಟಗಳು ನಿಮ್ಮನ್ನು ಸ್ವಾಗತಿಸಿ, ಮಂತ್ರಮುಗ್ಧಗೊಳಿಸುತ್ತವೆ. ಕಾಫೀ ಎಲೆಗಳ ಘಮಲು ಇಡೀ ಕಣಿವೆಯನ್ನೆ ಆವರಿಸಿದ್ದು, ನಿಮ್ಮ ಇಂದ್ರೀಯಗಳಿಗೆ ಒಂದು ಅಭೂತಪೂರ್ವ ಅನುಭವವನ್ನು ಒದಗಿಸುತ್ತವೆ.

ಈ ತೋಟಗಳು ಅರಕು ಕಣಿವೆಯ ಬುಡಕಟ್ಟು ಜನರ ಬದುಕಿನಲ್ಲಿ ಆಳವಾಗಿ ಬೇರು ಬಿಟ್ಟಿವೆ. ಈ ಕಾಫೀ ತೋಟಗಳು ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯುವಂತೆ ಮಾಡಿರುವುದಲ್ಲದೆ, ಅವರ ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಬೇಕಾಗುವ ಆರ್ಥಿಕ ಮೂಲವನ್ನು ಸಹ ಒದಗಿಸಿವೆ. ಇಲ್ಲಿ ಅನೇಕ ಬುಡಕಟ್ಟು ಜನರು ಕಾಫೀ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ನೀವು ಕಾಣಬಹುದು. ಅರಕು ಕಣಿವೆಯ ಬುಡಕಟ್ಟು ಜನರ ಶ್ರಮದ ಪ್ರತಿಫಲವಾಗಿ ದೇಶದ ಮೊಟ್ಟ ಮೊದಲ ಸಾವಯವ ಕಾಫೀ ಉತ್ಪಾದನೆಯಾಯಿತು. ಈ ಕಾಫೀಯು ಅರಕು ಎಮೆರಾಲ್ಡ್ ಎಂಬ ಹೆಸರಿನಿಂದ ಜಗದ್ವಿಖ್ಯಾತಿಯನ್ನು ಪಡೆದಿದೆ.

ಹಲವಾರು ಕಾಫೀ ತೋಟಗಳು ಪ್ರವಾಸಿಗರಿಗೆ ತಮ್ಮ ತೋಟಗಳಲ್ಲಿ ರಾತ್ರಿ ಸಹ ಉಳಿದುಕೊಳ್ಳುವ ಸೌಲಭ್ಯ ನೀಡುವ ಸಲುವಾಗಿ ಅತಿಥಿ ಗೃಹಗಳನ್ನು ಹೊಂದಿವೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City