Search
 • Follow NativePlanet
Share
ಮುಖಪುಟ » ಸ್ಥಳಗಳು» ಅಂಬಾಜಿ

ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ

18

ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.  ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ ಸಮರ್ಪಿತವಾಗಿವೆ.  ಅಂಬಾಜಿ ಮಠದ ಪೀಠವು ಗಬ್ಬಾರ್ ಬೆಟ್ಟಗಳ ತುದಿಯಲ್ಲಿದ್ದು, ಬನಸ್ಕಂಥ (Banaskantha) ಜಿಲ್ಲೆಯ ದಂತ ತಲುಕದಲ್ಲಿದೆ.  ಈ ಬನಸ್ಕಂಥ ಜಿಲ್ಲೆಯು ಗುಜರಾತ್  ಮತ್ತು ರಾಜಸ್ಥಾನ ರಾಜ್ಯಗಳ ಗಡಿಯಲ್ಲಿದೆ.  

ಅಂಬಾಜಿಯು ಪ್ರಪಂಚದಾದ್ಯಂತ ಸಾವಿರಾರು ಯಾತ್ರಿಕರನ್ನು, ಅದರಲ್ಲೂ ವಿಶೇಷವಾಗಿ, ಭಾದರ್ವಿ ಪೂರ್ಣಿಮ ಮತ್ತು ದೀಪಾವಳಿಯ  ಸಂದರ್ಭದಲ್ಲಂತೂ ಬಹು ಸಂಖ್ಯೆಯಲ್ಲಿ ಯಾತ್ರಿಕರನ್ನು ಆಕರ್ಷಿಸುತ್ತದೆ.  ಅರಾವಳಿ ಶ್ರೇಣಿಗಳ ದಟ್ಟವಾದ ಕಾಡುಗಳಿಂದ ಈ ಶಕ್ತಿ ಸ್ಥಳವು ಸುತ್ತುವರೆಯಲ್ಪಟ್ಟಿದೆ.  ಈ ಸ್ಥಳವು ಪ್ರಾಕೃತಿಕ ಸೌಂದರ್ಯ ಮತ್ತು ಅಧ್ಯಾತ್ಮಿಕತೆಯ ಒಂದು ಪರಿಪೂರ್ಣವಾದ ಸಮಾವೇಶವನ್ನು ತನ್ನ ಯಾತ್ರಾರ್ಥಿಗಳಿಗೆ ಒದಗಿಸುತ್ತದೆ.

ಗಬ್ಬರ್ ಪರ್ವತ

ಗಬ್ಬಾರ್ ಪರ್ವತವು ಅರಸುರ್ (Arasur) ಬೆಟ್ಟಗಳ ಮೇಲೆ, ವೇದಗಳ ಕಾಲಕ್ಕೆ ಸೇರಿದ ಸರಸ್ವತಿ ನದಿಯ ಮೂಲದ ಸಮೀಪದಲ್ಲಿದೆ.  ಇದು ಪ್ರಾಚೀನ ಅರಾವಳ್ಳಿ ಬೆಟ್ಟಗಳ ನೈಋತ್ಯ ಭಾಗದಲ್ಲಿದ್ದು, ಸಮುದ್ರ ಪಾತಳಿಯಿಂದ 1,600 ಅಡಿಗಳಷ್ಟು ಎತ್ತರದಲ್ಲಿದೆ.  ಗಬ್ಬಾರ್ ನ ಕಡಿದಾದ ಬೆಟ್ಟವು ಏರಲು ಕಷ್ಟಕರವಾಗಿದೆ.  ಯಾತ್ರಾರ್ಥಿಗಳು 300 ಕಲ್ಲು ಮೆಟ್ಟಿಲುಗಳನ್ನು ಬೆಟ್ಟದ ಕೆಳಭಾಗದಿಂದ ಆರಂಭಿಸಿ ಏರಬೇಕಾಗಿದ್ದು, ಇದು ಕಟ್ಟಕಡೆಗೆ ಕಿರಿದಾದ ಅಪಾಯಕರ ಕಾಲುದಾರಿಯತ್ತ ಯಾತ್ರಿಕರನ್ನು ಕೊಂಡೊಯ್ಯುತ್ತದೆ.  ಮುಖ್ಯವಾದ ದೇವಸ್ಥಾನವನ್ನು ತಲುಪಬೇಕಾದರೆ, ಈ ದಾರಿಯ ಮೂಲಕ ಸಾಗಬೇಕು.

ಧಾರ್ಮಿಕ ಮಹತ್ವ

ಅಂಬಾಜಿ ದೇವಸ್ಥಾನವು ಭಾರತದ ಪ್ರಮುಖ ಶಕ್ತಿಪೀಠಗಳ ಪೈಕಿ ಒಂದೆಂದು ಪರಿಗಣಿತವಾಗಿದೆ.  ಸ್ಥಳ ಪುರಾಣದ ಪ್ರಕಾರ, ದೇವಿ ಸತಿಯ ದೇಹದ ಹೃದಯ ಭಾಗವು ಗಬ್ಬಾರ್ ಬೆಟ್ಟದ ತುದಿಯಲ್ಲಿ ಬಿದ್ದಿತು. ಅರಸುರ್ ಬೆಟ್ಟಗಳ ಮೇಲಿರುವ ಕಾರಣಕ್ಕಾಗಿ ಅರಸುರಿ ಅಂಬಾಜಿ ಎಂದು ಕರೆಯಲ್ಪಡುವ ಈ ಪವಿತ್ರ ದೇವಸ್ಥಾನದಲ್ಲಿ, ಪಾವನಳಾದ ದೇವಿಯ ಯಾವುದೇ ಪ್ರತಿಮೆಯಿರುವುದಿಲ್ಲ.  "ಶ್ರೀ ವಿಸ ಯಂತ್ರ" ವು ಮೂಲ ಪ್ರತಿಮೆಯ ರೂಪದಲ್ಲಿ ಪೂಜಿಸಲ್ಪಡುತ್ತದೆ.  ಬರಿಗಣ್ಣಿನಿಂದ ಈ "ಯಂತ್ರ" ವನ್ನು ನೋಡಲು ಸಾಧ್ಯವಿಲ್ಲ.  

ವಿಸ ಯಂತ್ರವನ್ನು ಪೂಜಿಸುವವರು ತಮ್ಮ ಕಣ್ಣುಗಳಿಗೆ ಪಟ್ಟಿಯೊಂದನ್ನು ಕಟ್ಟಿಕೊಳ್ಳಬೇಕು.  ಪ್ರತಿವರ್ಷವೂ ಭಾದರ್ವಿ ಪೂರ್ಣಿಮದಂದು, ಒಂದು ದೊಡ್ಡ ಮೇಳವನ್ನು ಆಯೋಜಿಸಲಾಗುತ್ತಿದ್ದು, ಜನರು ದೇಶದ ಮೂಲೆ ಮೂಲೆಗಳಿಂದ ಜುಲೈ ತಿಂಗಳಿನಲ್ಲಿ ತಾಯಿ ಅಂಬೆಯನ್ನು ಆರಾಧಿಸಲು ಇಲ್ಲಿಗೆ ಬರುತ್ತಾರೆ.  ಅಲ್ಲದೇ, ದೀಪಾವಳಿ ಇಡಿಯ  ಅಂಬಾಜಿ ದೇವಸ್ಥಾನವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.  ಮಹಾಭಾರತದಲ್ಲಿಯೂ ಕೂಡ ಅಂಬಾಜಿಯ ಉಲ್ಲೇಖವಿದೆ.  ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಭಗವತಿ ಅಂಬಾಜಿಯನ್ನು ಪೂಜಿಸಿದ್ದರು ಎಂದು ಮಹಾಭಾರತವು ಪ್ರಸ್ತಾವಿಸಿದೆ.

ಭೌಗೋಳಿಕತೆ

ಅಂಬಾಜಿಯು ಗುಜರಾತ್ ಮತ್ತು ರಾಜಾಸ್ಥಾನ ರಾಜ್ಯಗಳ ಗಡಿಭಾಗಕ್ಕೆ ಸಮೀಪದಲ್ಲಿರುವ ಕಡಿಯದ್ರದಿಂದ 50 ಕಿ.ಮೀ. ದೂರದಲ್ಲಿ, ಮೌಂಟ್ ಅಬುವಿನಿಂದ 45 ಕಿ. ಮೀ. ದೂರದಲ್ಲಿ, ಮತ್ತು ಪಾಲನ್ಪುರ್  ನಿಂದ 65 ಕಿ.ಮೀ. ದೂರದಲ್ಲಿದೆ.

ಅಂಬಾಜಿ ಪ್ರಸಿದ್ಧವಾಗಿದೆ

ಅಂಬಾಜಿ ಹವಾಮಾನ

ಅಂಬಾಜಿ
28oC / 82oF
 • Partly cloudy
 • Wind: WSW 14 km/h

ಉತ್ತಮ ಸಮಯ ಅಂಬಾಜಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಂಬಾಜಿ

 • ರಸ್ತೆಯ ಮೂಲಕ
  ಅಂಬಾಜಿಯು ನಗರ ಪ್ರದೇಶಗಳಾದ ಅಹಮದಾಬಾದ್ (180 ಕಿ.ಮೀ.), ಅಬು ರೋಡ್ ಸ್ಟೇಷನ್ (20 ಕಿ.ಮೀ.), ಮೌಂಟ್ ಅಬು (45 ಕಿ.ಮೀ.), ದೆಹಲಿ (700 ಕಿ.ಮೀ.), ಪಲನ್ಪುರ್ (65 ಕಿ.ಮೀ.), ಮತ್ತು ಹಿಮ್ಮತ್ ನಗರ್ ಗಳಿಗೆ ಸಂಪರ್ಕವನ್ನು ಹೊಂದಿದೆ. ರಾಜ್ಯ ಸರಕಾರಕ್ಕೆ ಸೇರಿರುವ ಬಸ್ಸುಗಳ ಸೇವೆಯು ಈ ನಗರಗಳಿಂದ ಅಂಬಾಜಿಗೆ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಬು ರೈಲ್ವೆ ನಿಲ್ದಾಣವು ಅಂಬಾಜಿಗೆ ಅತೀ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಇದು ಅಂಬಾಜಿಯಿಂದ 20 ಕಿ.ಮೀ. ದೂರದಲ್ಲಿದೆ. ಅಂಬಾಜಿಗೆ ಸಮೀಪವಿರುವ ಎಲ್ಲಾ ಪ್ರಮುಖ ನಗರಗಳಿಗೂ ರೈಲುಗಳು ಇಲ್ಲಿಂದ ಲಭ್ಯವಿದ್ದು, ಇವುಗಳ ಪೈಕಿ ದೆಹಲಿಯೂ ಕೂಡ ಒಂದಾಗಿದೆ. ರೈಲ್ವೆ ನಿಲ್ದಾಣದಿಂದ ಅಂಬಾಜಿಗೆ ತೆರಳಲು ಟ್ಯಾಕ್ಸಿ ಸೇವೆಯು ರೂ. 200 ರಷ್ಟರ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅಂಬಾಜಿಗೆ ಅತೀ ಸಮೀಪದಲ್ಲಿರುವ ವಿಮಾನ ನಿಲ್ದಾಣವು, ಅಹಮದಾಬಾದ್ ನಲ್ಲಿರುವ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಅಂಬಾಜಿಯಿಂದ 180 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಬಾಡಿಗೆಯು ಸುಮಾರು ರೂ. 2500 ರಷ್ಟಿರುತ್ತದೆ. ಈ ವಿಮಾನ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಮಾತ್ರವಲ್ಲದೇ, ಕೆಲವೊಂದು ಅಂತರಾಷ್ಟ್ರೀಯ ನಗರಗಳನ್ನೂ ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Ambaji
  28 OC
  82 OF
  UV Index: 8
  Partly cloudy
 • Tomorrow
  Ambaji
  28 OC
  82 OF
  UV Index: 8
  Partly cloudy
 • Day After
  Ambaji
  26 OC
  79 OF
  UV Index: 8
  Partly cloudy