Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ಹವಾಮಾನ

ಅಂಬಾಜಿ ಹವಾಮಾನ

ಅಂಬಾಜಿ ಯಲ್ಲಿ ಹವಾಗುಣವು ವರ್ಷಪೂರ್ತಿ ಅಪ್ಯಾಯಮಾನವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳಿನವರೆಗಿನ ಅವಧಿಯು ಅಂಬಾಜಿಯಲ್ಲಿ ಬೇಸಿಗೆಕಾಲವಾಗಿರುತ್ತದೆ.  ಈ ಸಂದರ್ಭದಲ್ಲಿ ಉಷ್ಣತೆಯು ಹಗಲಿನ ವೇಳೆ 42 ಡಿಗ್ರಿ ಸೆಲ್ಷಿಯಸ್ ನಷ್ಟಾಗಬಹುದು ಮತ್ತು ರಾತ್ರಿಗಳು ತುಸು ಬೆಚ್ಚಗಿರುತ್ತವೆ. ಸಾಮಾನ್ಯವಾಗಿ ಪ್ರವಾಸಿಗರು ಬೇಸಿಗೆಯ ಕಾಲದಲ್ಲಿ ಅಂಬಾಜಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ.

ಮಳೆಗಾಲ

ಜುಲೈ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನ ವರೆಗೆ ಅಂಬಾಜಿಯು ಹದವಾದ ಮಳೆಯನ್ನು ಪಡೆದು, ವಾತಾವರಣವು ಒದ್ದೆ ಮತ್ತು ತೇವಯುಕ್ತವಾಗಿರುತ್ತದೆ.  ಮಳೆಗಾಲದ ಸಮಯವು ಮಂಜಿನ ಸೌಂದರ್ಯವನ್ನು ಸವಿಯಲು ಸೂಕ್ತ ಕಾಲವಾಗಿದೆ.

ಚಳಿಗಾಲ

ಚಳಿಗಾಲದ ಅವಧಿಯಲ್ಲಿಯೇ ಇಲ್ಲಿನ ವಾತಾವರಣವು ಅಪ್ಯಾಯಮಾನ ಹಾಗೂ ಅಹ್ಲಾದಕರವಾಗಿರುತ್ತದೆ.  ಏಕೆಂದರೆ, ಈ ಸಂದರ್ಭದಲ್ಲಿ ಗರಿಷ್ಟ ಉಷ್ಣತೆಯು ಎಂದಿಗೂ 25 ಡಿಗ್ರಿ ಸೆಲ್ಷಿಯಸ್ ಅನ್ನು ಮೀರುವುದಿಲ್ಲ ಹಾಗೂ ಅತೀ ಕಡಿಮೆ ಉಷ್ಣಾಂಶವು ಈ  ಅವಧಿಯಲ್ಲಿ ಯಾವಾಗಲೂ 10 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿಯೇ ಇರುತ್ತದೆ.  ಆಗಾಗ್ಗೆ ಈ ಅವಧಿಯಲ್ಲಿ ಇಬ್ಬನಿ, ಹಿಮಪಾತವನ್ನೂ ಸಹ ಕಾಣಬಹುದು.