Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಣ್ಣೂರು

ಕುಣ್ಣೂರು ಪ್ರವಾಸೋದ್ಯಮ - ಎಂದೂ ಮಲಗದ ಕಣಿವೆ

21

ಪ್ರತಿಯೊಬ್ಬ ಸಂದರ್ಶನಕಾರನಿಗೆ ಕುಣ್ಣೂರ್ ಪ್ರವಾಸ, ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ನೆನಪುಗಳನ್ನು ತರುತ್ತದೆ. ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1850 ಮೀ. ಎತ್ತರದಲ್ಲಿರುವ ಪುಟ್ಟ ಪಟ್ಟಣದ ಒಟ್ಟಾರೆ ಪರಿಸರ ಪ್ರವಾಸಿಗರನ್ನು ಆಕರ್ಷಿಸಿ ತನ್ನತ್ತ ಒಲಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಕುಣ್ಣೂರ್ ನಲ್ಲಿ ತಂಗಿದಾಗ, ಒಂದಲ್ಲ, ಅನೇಕ ಬಾರಿ ಪಟ್ಟಣಕ್ಕೆ ಪ್ರವಾಸಿಗರ ಆಗಮನವನ್ನು ಕಾಣುತ್ತೇವೆ. ಕೆಲವೊಮ್ಮೆ ಪಟ್ಟಣಕ್ಕೆ ಪ್ರವಾಸಿಗರ ಸುರಿಮಳೆಯೇ ಆದರೆ, ಕೆಲವೊಮ್ಮೆ ಜಿನುಗುವ ವೇಗದಲ್ಲಿ ಪ್ರವಾಸಿಗರು ಬರುತ್ತಾರೆ. ಇದು ವರ್ಷದಲ್ಲಿ ನಾವು ಯಾವ ಸಮಯದಲ್ಲಿ ಕುಣ್ಣೂರ್ ಪ್ರವಾಸವನ್ನು ಕೈಗೊಂಡಿದ್ದೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರವಾಸಿಗರ ಸದ್ದು ಗದ್ದಲ ಇದ್ದರೂ, ಈ ಸ್ಥಳವು ಪ್ರಶಾಂತವಾದ ಹಾಗು ನಿರಾತಂಕವಾದ ವಾತಾವರಣವನ್ನು ಹೊಂದಿದೆ. ಆದ್ದರಿಂದ ಈ ಸ್ಥಳವನ್ನು ಎಂದೂ ಮಲಗದ ಕಣಿವೆ ಎಂದು ವರ್ಣಿಸಿದ್ದಾರೆ.

ಕುಣ್ಣೂರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ನೀಲಗಿರಿ ಬೆಟ್ಟದ ರೈಲುರಸ್ತೆಯ ಮೇಲೆ ಪಯಣಿಸದೆ ಕುಣ್ಣೂರು ಗಿರಿಧಾಮಕ್ಕೆ ನೀಡುವ ಭೇಟಿ ಪರಿಪೂರ್ಣಗೊಳ್ಳುವುದಿಲ್ಲ. ರೈಲು ಮಾರ್ಗವು ಮೆಟ್ಟುಪಾಳಯಮ್ ನಿಂದ ಶುರುವಾಗಿ, ಬೆಟ್ಟದ ಮೇಲೆ ಏರಿ ಕುಣ್ಣೂರ್ ತಲುಪಿ ನಂತರ ಇದೇ ಮಾರ್ಗವು ಊಟಿಗೆ ಮುಂದುವರೆಯುತ್ತದೆ. ಮಾರ್ಗ ಮಧ್ಯದಲ್ಲಿ ಕಾಣಲು ಸಿಗುವ ಸೊಗಸಾದ ದೃಶ್ಯಾವಳಿಗಳು, ಪ್ರಕೃತಿಯ ಭವ್ಯತೆ ಪ್ರಯಾಣಿಕರನ್ನು ಮಂತ್ರಮುಗ್ಧರನ್ನಾಗಿ ಮಾಡುವಲ್ಲಿ ಸಂಶಯವೇ ಇಲ್ಲ.

ಪ್ರವಾಸಿಗರು ಸಿಮ್ಸ್ ಪಾರ್ಕ್, ಡಾಲ್ಫಿನ್ ನೋಸ್, ದೂರ್ಗ್ ಕೋಟೆ, ಲ್ಯಾಂಬ್ಸ್ ರಾಕ್, ಹಿಡನ್ ವ್ಯಾಲಿ, ಕ್ಯಾಟರಿ ಫಾಲ್ಸ್, ಸೇಂಟ್ ಜಾರ್ಜ್ ಚರ್ಚ್ ಮುಂತಾದ ಸ್ಥಳಗಳಿಗೆ ಭೇಟಿ ಕೊಡದೇ ಇರಬಾರದು. ಇವೆಲ್ಲವೂ ಕುಣ್ಣೂರ್ ನ ಮುಖ್ಯವಾದ ಪ್ರವಾಸಿ ತಾಣಗಳು.

ಚಹಾ ಮತ್ತು ಚಾಕಲೇಟ್ ನ ಸ್ವಾದಗಳು

ಕುಣ್ಣೂರ್ ನ ಆರ್ಥಿಕ ವ್ಯವಸ್ಥೆ ಬಹುತೇಕ ಚಹಾ ವ್ಯಾಪಾರದ ಮೇಲೆ ನಿಂತಿದೆ. ಇಲ್ಲಿನ ಬಹುತೇಕ ಮಂದಿ ಚಹಾದ ಬೇಸಾಯ ಹಾಗು ಅದರ ವ್ಯಾಪಾರವನ್ನು ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ನೀಲಗಿರಿ ಮತ್ತು ಕುಣ್ಣೂರ್ ನ ಮತ್ತೊಂದು ವೈಶಿಷ್ಟ್ಯವೆಂದರೆ, ಮನೆಯಲ್ಲಿ ತಯಾರಾಗುವ ಚಾಕಲೇಟ್ ಗಳು. ಕುಣ್ಣೂರ್ ನ ಪ್ರತಿಯೊಂದು ಬೀದಿಯಲ್ಲಿ, ಗಲ್ಲಿಗಳಲ್ಲಿ, ಹೋಮ್ ಮೇಡ್ ಚಾಕಲೇಟ್ ಗಳು ದೊರೆಯುತ್ತವೆ. ಇದನ್ನು ಮಿಸ್ ಮಾಡಲೇಬಾರದು.

ಕುಣ್ಣೂರ್, ತೋಟಗಾರಿಕೆಗೆ ಮತ್ತು ಹೂ ಬಿಡುವ ಸಸ್ಯಗಳ ಕೃಷಿ (ಫ್ಲಾರಿಕಲ್ಚರ್) ಕೈಗಾರಿಕೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ವಿವಿಧ ಬಗೆಯ ಅಪರೂಪದ ಆರ್ಕಿಡ್ ಮತ್ತು ಇತರ ಜಾತಿಯ ಹೂ ಬಿಡುವ ಸಸ್ಯಗಳನ್ನು ಬೆಳೆಸಿ, ಕುಣ್ಣೂರ್ ಕೃಷಿ ಕ್ಷೇತ್ರದಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ದೊರೆಯುವ ವೈವಿಧ್ಯಮಯ ಹೂವುಗಳು ವಿಶ್ವದಾದ್ಯಂತ ಎಲ್ಲೂ ದೊರೆಯದಿರುವ ಕಾರಣದಿಂದಾಗಿ, ಒಂದು ಒಳ್ಳೆಯ ಅನುಭವ ನೀಡುತ್ತವೆ.

ನೀಲಗಿರಿ ಬೆಟ್ಟದ ರೈಲು ಮಾರ್ಗ - ನೀಲಗಿರಿ ಬೆಟ್ಟದ ಹೃದ್ಭಾಗಕ್ಕೆ ಪ್ರವಾಸ

ನೀಲಗಿರಿಗೆ ಭೇಟಿ ಕೊಡುವ ಪ್ರತಿಯೊಬ್ಬ ಸಂದರ್ಶನಕಾರನು ರೈಲು ಮಾರ್ಗವಾಗಿ ಕುಣ್ಣೂರ್, ಮುಂದೆ ಊಟಿಗೆ ಪ್ರಯಾಣ ಬೆಳೆಸಿ ಅದರ ಅನುಭವವನ್ನು ಪಡೆಯಲು ಮಿಸ್ ಮಾಡಬಾರದು. ನೀಲಗಿರಿ ಬೆಟ್ಟದ ರೈಲು ಮಾರ್ಗ, ಡಾರ್ಜಿಲಿಂಗ್ ಬೆಟ್ಟದ ರೈಲು ಮಾರ್ಗವನ್ನು ಯುನೆಸ್ಕೊ ನಿಯಮಿಸಿದಂತೆ, ವಿಶ್ವದ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಕ್ ಮತ್ತು ಪಿನಿಯನ್ ವ್ಯವಸ್ಥೆಯನ್ನು ಬಳಸುವ ವಿಶ್ವದ ಕೆಲವೇ ಕೆಲವು ಸ್ಥಳಗಳಲ್ಲಿ ಇದೂ ಒಂದಾಗಿದೆ.

ಬ್ರಿಟೀಷರಿಂದ ಕಟ್ಟಲ್ಪಟ್ಟ ಇದನ್ನು 1908ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಮೊದಲಿಗೆ, ಮದ್ರಾಸ್ ರೇಲ್ವೆ ಅಧಿಕಾರದ ವ್ಯಾಪ್ತಿಗೆ ಬರುತ್ತಿತ್ತಾದರೂ, ಭಾರತೀಯ ರೇಲ್ವೆಯ ಸೇಲಮ್ ವಿಭಾಗವು ಇದನ್ನು ನಡೆಸಿಕೊಂಡು ಬರುತ್ತಿದೆ. ಇಂದಿಗೂ, ರೈಲುಗಳಿಗೆ ಸ್ಟೀಮ್ ಎಂಜಿನ್ ಅನ್ನೇ ಬಳಸಲಾಗುತ್ತಿದ್ದು, ಇನ್ನು ಮುಂದೆ ಹಣ ಮತ್ತು ಸಮಯವನ್ನು ಉಳಿಸಲು, ಡೀಸೆಲ್ ಎಂಜಿನ್ ಗೆ ಪರಿವರ್ತಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಕುಣ್ಣೂರ್ ಹವಾಮಾನ

ಕುಣ್ಣೂರ್ ಒಂದು ಗಿರಿಧಾಮವಾದ್ದರಿಂದ ಅದರ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ಹೆಚ್ಚು ಚಳಿಯಿದ್ದು, ಬೇಸಿಗೆಯಲ್ಲಿ ಉಷ್ಣಾಂಶ ಹಿತಕರವಾಗಿರುತ್ತದೆ. ಮುಂಗಾರಿನಲ್ಲಿ ಹೆಚ್ಚು ಮಳೆಯಾಗುವುದರಿಂದ ಕುಣ್ಣೂರ್ ಪ್ರವಾಸ ಕೈಗೊಳ್ಳದಿರುವುದೇ ಉತ್ತಮ. ಭಾರಿ ಮಳೆ ಅಥವಾ ಕೊರೆಯುವ ಚಳಿ ಪ್ರವಾಸಕ್ಕೆ ಹಿತಕರವಲ್ಲದ ಕಾರಣ ಮಳೆಗಾಲದಲ್ಲಿ ಕುಣ್ಣೂರ್ ಗೆ ಪ್ರವಾಸ ಸೂಕ್ತವಲ್ಲ.

ಕುಣ್ಣೂರ್ ತಲುಪುವ ಬಗೆ

ಕುಣ್ಣೂರ್ ತಲುಪುವ ಬಗೆ ಬಹಳ ಸುಲಭ. ಮೊದಲಿಗೆ, ರೈಲು ಮಾರ್ಗವಾಗಿ ಕೊಯಮತ್ತೂರ್ ನ ಗಾಂಧಿಪುರಮ್ ಬಸ್ ನಿಲ್ದಾಣದಿಂದ ಮೆಟ್ಟುಪಾಳಯಮ್ ಗೆ, ಹೋಗಿ ನಂತರ ನೀಲಗಿರಿ ಬೆಟ್ಟದ ರೇಲ್ವೆ ಮಾರ್ಗವಾಗಿ ಕುಣ್ಣೂರ್ ಗೆ ಮತ್ತೊಂದು ರೈಲು ಮೂಲಕ ತಲುಪಬಹುದು. ಇಲ್ಲವಾದರೆ, ಗಾಂಧಿಪುರಮ್ ನಿಂದ ಊಟಿಗೆ ಹೋಗುವ ಡೈರೆಕ್ಟ್ ಬಸ್ ಹತ್ತಿ ಕುಣ್ಣೂರಲ್ಲಿ ಇಳಿಯಬಹುದು.

ಕೊಯಮತ್ತೂರ್ ನಿಂದ ಕುಣ್ಣೂರ್ ಗೆ ಸುಮಾರು ಮೂರುವರೆ ಗಂಟೆಗಳ ಕಾಲದ ಪ್ರಯಾಣದ ಅವಧಿ ಇರುತ್ತದೆ. ದಾರಿಯುದ್ದಕ್ಕೂ ನಿಸರ್ಗದತ್ತ ಸೌಂದರ್ಯ, ಅಲ್ಲಲ್ಲಿ ಪ್ರವಾಸಿ ತಾಣಗಳು, ಚಾಕಲೇಟ್ ಗಳು, ಪ್ಲಾಂಟೇಷನ್ ಗಳು, ಹಿತಕರವಾದ ವಾತಾವರಣ ಹವ್ಯಾಸಿ ಪ್ರವಾಸಿಗರಿಗೆ, ಮಧುಚಂದ್ರ ಆಚರಿಸುವ ದಂಪತಿಗಳಿಗೆ, ಕುಣ್ಣೂರ್ ಹೇಳಿ ಮಾಡಿಸಿದಂಥಹ ಸ್ಥಳ.

ಕುಣ್ಣೂರು ಪ್ರಸಿದ್ಧವಾಗಿದೆ

ಕುಣ್ಣೂರು ಹವಾಮಾನ

ಉತ್ತಮ ಸಮಯ ಕುಣ್ಣೂರು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಣ್ಣೂರು

  • ರಸ್ತೆಯ ಮೂಲಕ
    ಮೆಟ್ಟುಪಾಳಯಮ್ ನಿಂದ ಊಟಿಗೆ ಹೋಗುವ ರಸ್ತೆ, ಕುಣ್ಣೂರ್ ತಲುಪಲು ಸುಲಭವಾದ ಮಾರ್ಗ. ಮಾರ್ಗದ ಮಧ್ಯ ಭಾಗದಲ್ಲಿ ಈ ಕುಣ್ಣೂರ್ ಉಪಸ್ಥಿತವಿದೆ. ಕೊಯಂಬತ್ತೂರ್ ನ ಗಾಂಧಿಪುರಮ್ ನಿಂದ ಬಸ್ ಮಾರ್ಗವಾಗಿ ಸೀದಾ ಕುಣ್ಣೂರ್ ತಲುಪಬಹುದು. ಅಥವಾ ಮೆಟ್ಟುಪಾಳಯಮ್ ನಿಂದ ಹೊರಡುವ ಬಸ್ ಹತ್ತಿ ಕುಣ್ಣೂರ್ ನಲ್ಲಿ ಇಳಿಯಬಹುದು. ಬೆಟ್ಟದ ಮೇಲಿನ ಪ್ರಯಾಣ ಮೆಟ್ಟುಪಾಳಯಮ್ ನಿಂದ ಕುಣ್ಣೂರ್ ಗೆ, ಸುಮಾರು ಮೂರು ಗಂಟೆಗಳ ಅವಧಿ ಬೇಕಾಗುತ್ತದೆ. ತಮಿಳುನಾಡಿನ ಎಲ್ಲಾ ಪ್ರಮುಖ ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಮತ್ತು ಖಾಸಗಿ ಬಸ್ ಗಳು ಕುಣ್ಣೂರ್ ಪಟ್ಟಣಕ್ಕೆ ಓಡಾಡುತ್ತವೆ. ದಕ್ಷಿಣ ಭಾರತದ ಮುಖ್ಯ ನಗರಗಳಾದ ಬೆಂಗಳೂರು ಹಾಗು ಚೆನ್ನೈ ನಿಂದ ವಿಲಾಸಿ ಹಾಗು ವೋಲ್ವೋ ಬಸ್ ಗಳ ವ್ಯವಸ್ಥೆಯೂ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇತರ ಪ್ರಯಾಣಕ್ಕೆ ಹೋಲಿಸಿದರೆ, ರೈಲು ಪ್ರಯಾಣ ಅಗ್ಗ ಎಂದೇ ಹೇಳಬಹುದು. ಮೊದಲಿಗೆ ರೈಲು ಮಾರ್ಗವಾಗಿ, ಕೊಯಮತ್ತೂರ್ ಗೆ ತಲುಪಿ, ನಂತರ ಅಲ್ಲಿಂದ ಮೆಟ್ಟುಪಾಳಯಮ್ ಹೋಗಬೇಕು. ಮೆಟ್ಟುಪಾಳಯಮ್ ನಿಂದ ನೀಲಗಿರಿ ಬೆಟ್ಟದ ರೈಲು ಮಾರ್ಗ ಪ್ರಾರಂಭವಾಗುತ್ತದೆ. ಇಲ್ಲಿಂದ ಮತ್ತೊಂದು ರೈಲು ಹಿಡಿದು ಕುಣ್ಣೂರ್ ತಲುಪಬಹುದು. ಬೆಟ್ಟದ ಮೇಲೆ ರೈಲು ನಿಧಾನವಾಗಿ ಚಲಿಸುವುದರಿಂದ ಕುಣ್ಣೂರ್ ತಲುಪಲು ಸಮಯ ಬೇಕಾಗುತ್ತದೆ. ಆದರೆ ಪ್ರಯಾಣಿಸಿದ ಅವಧಿ ಎಂದೂ ಮರೆಯಲಾಗುವಂಥಹದು. ಕುಣ್ಣೂರ್ ಗೆ ಅತ್ಯಂತ ಸಮೀಪದ ರೇಲ್ವೆ ನಿಲ್ದಾಣವೆಂದರೆ ಕೊಯಮತ್ತೂರ್ ಜಂಕ್ಷನ್. ಇಲ್ಲಿಂದ ಸಾಮಾನ್ಯವಾಗಿ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ರೈಲು ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕುಣ್ಣೂರ್ ಪಟ್ಟಣದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಕೊಯಮತ್ತೂರ್ ವಿಮಾನ ನಿಲ್ದಾಣವೇ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಕೊಯಮತ್ತೂರ್ ವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ, ಅಲ್ಲಿಂದ ಬಸ್ ಅಥವಾ ಕ್ಯಾಬ್ ಮೂಲಕ ಕುಣ್ಣೂರ್ ತಲುಪಬಹುದು. ಕೊಯಮತ್ತೂರ್ ವಿಮಾನ ನಿಲ್ದಾಣವು, ದಕ್ಷಿಣ ಭಾರತದ ಮುಖ್ಯ ನಗರಗಳಾದ ಬೆಂಗಳೂರು ಹಾಗು ಚೆನ್ನೈಗೆ ಸಂಪರ್ಕ ಹೊಂದಿದೆ. ಪ್ರಯಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಸುಮಾರು 325 ಕಿ.ಮೀ ದೂರದಲ್ಲಿರುವ ಕುಣ್ಣೂರ್ ಪಟ್ಟಣಕ್ಕೆ ಪ್ರಯಾಣ ಬೆಳಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri