ಕುಣ್ಣೂರು ಸುತ್ತಲಿರುವ ಪ್ರಮುಖ ಆಕರ್ಷಕ ತಾಣಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಡ್ರೂಗ್ ಫೋರ್ಟ್ ಕೂಡ ಒಂದಾಗಿದೆ. ಸುತ್ತಲಿನ ಪ್ರದೇಶಗಳ ವಿಹಂಗಮ ನೋಟ ಇಲ್ಲಿ ಸಿಗುವುದರಿಂದ ಟಿಪ್ಪು ಸುಲ್ತಾನ ಇದನ್ನು ತನ್ನ ಮಿಲಿಟರಿ ಔಟ್ ಪೋಸ್ಟ್ ಆಗಿ ಬಳಸುತ್ತಿದ್ದ. ಶತ್ರುಗಳನ್ನು ಹತ್ತಿಕ್ಕಲು ಈ ಕೋಟೆ ಸಾಕಷ್ಟು ಅನುಕೂಲಗಳನ್ನು ಒದಗಿಸಿತ್ತು. ಕೋಟೆಯ ಗೋಡೆ ಪಾಳುಬಿದ್ದಿದ್ದರೂ ಕೋಟೆಯಿಂದ ಸಿಗುವ ಪಕ್ಷಿನೋಟ ಎಳ್ಳಷ್ಟೂ ಬದಲಾಗಿಲ್ಲ.
ಡ್ರೂಗ್ ಫೋರ್ಟ್ ತಲುಪಲು ನಾನ್ ಸಚ್ ಎಸ್ಟೇಟಿನಿಂದ ಸುಮಾರು 4 ಕಿ.ಮೀ. ಚಾರಣ ಮಾಡಬೇಕು. ಸಮುದ್ರಮಟ್ಟದಿಂದ 2000 ಮೀಟರ್ ಎತ್ತರದಲ್ಲಿರುವ ಕೋಟೆಯಿಂದ ಹರವಿಕೊಂಡಿರುವ ಸೌಂದರ್ಯವನ್ನು ಸವಿಯಬಹುದು. ಇಲ್ಲಿ ಅಪರೂಪದ ಪಕ್ಷಿಗಳು ಬರುವುದರಿಂದ ಪಕ್ಷಿವೀಕ್ಷಣೆಗೂ ಇದೆ ಹೆಸರಾಗಿದೆ.