Search
 • Follow NativePlanet
Share
ಮುಖಪುಟ » ಸ್ಥಳಗಳು» ನಾಮಕ್ಕಲ್

ನಾಮಕ್ಕಲ್ - ದೇವರುಗಳ ಮತ್ತು ರಾಜರುಗಳ ಪ್ರದೇಶ

16

ಒಂದು ನಗರ ಹಾಗೂ ಆಡಳಿತದ ಜಿಲ್ಲಾ ಕೇಂದ್ರವಾದ ನಾಮಕ್ಕಲ್ ದಕ್ಷಿಣ ಭಾರತದ ತಮಿಳುನಾಡಿನಲ್ಲಿರುವ ಲೋಕಪ್ರಿಯ ಪ್ರವಾಸಿತಾಣಗಳಲ್ಲೊಂದಾಗಿದೆ.  ನಾಮಕ್ಕಲ್, ವಿವಿಧ ಆಸಕ್ತಿಗಳಿರುವ ಜನರಿಗೆ ವಿಶಾಲ ಶ್ರೇಣಿಯ ಆಕರ್ಷಣೆಗಳನ್ನು ಒದಗಿಸುತ್ತದೆ. ಈ ನಗರವು ಉತ್ತಮವಾಗಿ ನಿರ್ವಹಿಸಲ್ಪಟ್ಟ ಮೂಲಭೂತ ಸೌಕರ್ಯಗಳಿಗೆ ಮತ್ತು ಪರಿಸರಕ್ಕೆ ಹೆಸರುವಾಸಿಯಾಗಿದೆ. ಇದು ಒಂದು ಐತಿಹಾಸಿಕ ನಗರ, ಶೈಕ್ಷಣಿಕ ನಗರ, ಕೋಳಿಸಾಕಾಣೆ ಕೇಂದ್ರ ಮತ್ತು ಸರಂಜಾಮು ಸಾಗಣೆಯ ನಗರವೆಂದು ಪ್ರಖ್ಯಾತವಾಗಿದೆ. ಸೇಲಂ ಜಿಲ್ಲೆಯಿಂದ 1997ರಲ್ಲಿ ಬೇರ್ಪಡಿಸಿದ ನಂತರ ಇದು ಒಂದು ಅಧಿಕೃತವಾಗಿ ಜಿಲ್ಲೆಯಾಯಿತು.  ನಾಮಕ್ಕಲ್ಲಿನ ಇತಿಹಾಸ 7 ನೇ ಶತಮಾನದಷ್ಟು ಹಿಂದಿನದಾಗಿದೆ.

ನಾಮಕ್ಕಲ್ ಮತ್ತು ಸುತ್ತಮುತ್ತ ಇರುವ ಪ್ರವಾಸಿ ಸ್ಥಳಗಳು

ನಾಮಕಲ್ಲಿನಲ್ಲಿ ಪ್ರವಾಸಿಗಳಿಗೆ ಭೇಟಿ ನೀಡಲು ಅನೇಕ ದೇವಾಲಯಗಳು ಮತ್ತು ಪವಿತ್ರಸ್ಥಳಗಳಿವೆ. ಆಂಜನೇಯ ದೇವಸ್ಥಾನ, ನರಸಿಂಹ ದೇವಸ್ಥಾನ, ಕೂಲಿಪ್ಪಟ್ಟಿ ಮುರುಗನ್ ದೇವಸ್ಥಾನ, ತಾತಗಿರಿ ಮುರುಗನ್ ದೇವಸ್ಥಾನ, ತಿರುಚೆಂಗೋಡು ಅರ್ಧನಾರೀಶ್ವರ ದೇವಸ್ಥಾನ ಮತ್ತು ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನ ಇವುಗಳು ಕೆಲವು ಪ್ರಖ್ಯಾತ ಆಕರ್ಷಣೆಗಳು. ನಾಮಕ್ಕಲ್ ದುರ್ಗಂ ಕೋಟೆ ಇನ್ನೊಂದು ಪ್ರಖ್ಯಾತ ಪ್ರವಾಸಿ ಸ್ಥಳ.  ರಾಕ್ ಫೋರ್ಟ್, ನೈನಾಮಲೈ ಬೆಟ್ಟ ಇವುಗಳು ಪ್ರವಾಸಿಗಳಿಗೆ ಪ್ರಖ್ಯಾತ ಕೇಂದ್ರವಾಗಿವೆ.

ನಾಮಕ್ಕಲ್ - ಇತಿಹಾಸದ ಒಂದು ಇಣುಕುನೋಟ

ಈ ನಗರದ ಮಧ್ಯಭಾಗದಲ್ಲಿರುವ ಒಂದು ಏಕಕಲ್ಲಿನ ವಿನ್ಯಾಸದಿಂದ ಈ ಸ್ಥಳಕ್ಕೆ ನಾಮಗಿರಿ ಎಂದು ಕರೆಯಲಾಯಿತು. ನಾಮಕ್ಕಲ್ ತಮಿಳುನಾಡಿನ ಕೊಂಗು ನಾಡಿನ ಭಾಗವಾಗಿತ್ತು. ಈ ನಗರವನ್ನು ಅದಿಯಮಾನ್ ವಂಶದ ಗುಣಶೀಲ ಎಂಬ ರಾಜನು ಆಳುತ್ತಿದ್ದನು. ಇದು ರಂಗನಾಥಸ್ವಾಮಿ ದೇವಸ್ಥಾನ ಮತ್ತು ರಾಜ ಗುಣಶೀಲ ಕಟ್ಟಿಸಿದ ನರಸಿಂಹಸ್ವಾಮಿ ದೇವಸ್ಥಾನದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ.

ಪಲ್ಲವ ವಂಶದೊಂದಿಗೆ ಈ ರಾಜನ ವೈವಾಹಿಕ ಸಂಬಂಧಗಳಿಂದ ವಾಸ್ತುಶಿಲ್ಪಗಳ ಪ್ರಭಾವಗಳಿಗೆ ಕಾರಣವಾಯಿತು. ನಂತರ ಚೋಳರು ಆಕ್ರಮಿಸಿಕೊಂಡ ಈ ಪ್ರದೇಶ ಮುಂದಕ್ಕೆ ಹೊಯ್ಸಳರು 14ನೇ ಶತಮಾನದವರೆಗೆ ಆಳಲ್ಪಟ್ಟಿತು. ಆ ಬಳಿಕ ವಿಜಯನಗರದ ದೊರೆಗಳು, ಮದುರೈ ನಾಯಕರು, ಬಿಜಾಪುರದ ಸುಲ್ತಾನರು, ಗೋಲ್ಕೊಂಡ ಮೈಸೂರು ರಾಜರು, ಮರಾಠರು, ಹೈದರ್ ಆಲಿ ಮತ್ತು ಅಂತಿಮವಾಗಿ ಬ್ರಿಟೀಷರು ಅನುಸರಿಸಿದರು. ಹೀಗೆ ಪ್ರತಿಯೊಬ್ಬ ರಾಜರುಗಳು ತಮ್ಮ ತಮ್ಮ ಸಂಸ್ಕೃತಿಯ ಗುರುತುಗಳನ್ನು ಈ ಪ್ರದೇಶದ ಮೇಲೆ ಬಿಟ್ಟು ಹೋದರು.

ನಾಮಕ್ಕಲ್ ಹವಾಮಾನ

ಇತರ ದಕ್ಷಿಣಭಾರತದ ಭಾಗಗಳಂತೆ, ನಾಮಕ್ಕಲ್ ತೀವ್ರ ಬೇಸಿಗೆ ವಾತಾವರಣವನ್ನು ಎದುರಿಸುತ್ತದೆ. ಆದ್ದರಿಂದ ಮಳೆಗಾಲದ ನಂತರ ಅಕ್ಟೋಬರ‍್ನಿಂದ  ಮಾರ್ಚ್ವರೆಗೆ ತಾಪಮಾನವು ಹದವಾಗಿರುವುದರಿಂದ ನಾಮಕ್ಕಲ್ಲನ್ನು ಭೇಟಿ ಮಾಡಲು ಸೂಕ್ತ ಸಮಯ.

ನಾಮಕಲ್ ತಲಪುವುದು ಹೇಗೆ?

ಅನೇಕ ಪ್ರಮುಖ ನಗರಗಳು ಹತ್ತಿರವಿರುದರಿಂದ ನಾಮಕಲ್ಲಿಗೆ ಪ್ರಯಾಣಮಾಡಲು ಕಷ್ಟವೇನಿಲ್ಲ. ಇದು ರಸ್ತೆಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ನಾಮಕಲ್ ಪ್ರತಿಯೊಬ್ಬ ಪ್ರವಾಸಿಗನು ನಿಸ್ಸಂಶಯವಾಗಿ ನೋಡಲೇಬೇಕಾದ ಸ್ಥಳವಾಗಿದೆ.

ನಾಮಕ್ಕಲ್ ಪ್ರಸಿದ್ಧವಾಗಿದೆ

ನಾಮಕ್ಕಲ್ ಹವಾಮಾನ

ಉತ್ತಮ ಸಮಯ ನಾಮಕ್ಕಲ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಾಮಕ್ಕಲ್

 • ರಸ್ತೆಯ ಮೂಲಕ
  ನಾಮಕಲ್ಲಿಗೆ ಉತ್ತಮ ರಸ್ತೆ ಸಂಪರ್ಕವಿದೆ ಮತ್ತು ನಾಮಕಲ್ಲಿಗೆ ರಸ್ತೆಯ ಮೂಲಕ ಪ್ರಯಾಣ ಮಾಡುವುದು ಹೆಚ್ಚು ಕಡಿಮೆ ಸುಲಭವಾಗಿದೆ. ಬಸ್ಸುಗಳು ತಮಿಳುನಾಡಿನ ಪ್ರತಿಯೊಂದು ದೊಡ್ಡ ಮತ್ತು ಸಣ್ಣ ಊರುಗಳಿಂದ ಹಾಗೂ ಕರ್ನಾಟಕ ಮತ್ತು ಕೇರಳದ ಕೆಲವು ಪಟ್ಟಣಗಳಿಂದ ಲಭಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸದ್ಯದಲ್ಲಿ ನಾಮಕಲ್ಲಿಗೆ ರೈಲುಮಾರ್ಗವಿಲ್ಲ. ಆದಾಗ್ಯೂ ಬ್ರಾಡ್ಗೇಜ್ ರೈಲು ಮಾರ್ಗದ ಕೆಲಸವು ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಬಹಳ ಸಮೀಪದ ರೈಲ್ವೇ ವ್ಯವಸ್ಥೆಯು ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಹೊಂದಿರುವ ಸೇಲಂ ಮತ್ತು ಕರೂರಿನಲ್ಲಿವೆ. ಬಸ್ ಮತ್ತು ಟ್ಯಾಕ್ಸಿಗಳು ಸೇಲಂ ಮತ್ತು ಕರೂರಿನಲ್ಲಿ ದೊರಕುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಿರುಚಿರಾಪಳ್ಳಿ ವಿಮಾನನಿಲ್ದಾಣವು ನಾಮಕ್ಕಲ್ಲಿಗೆ ಅತೀ ಹತ್ತಿರದ ನಿಲ್ದಾಣ. ಅಂತರ ರಾಷ್ಟ್ರೀಯವಿಮಾನನಿಲ್ದಾಣವಾದ ತಿರುಚಿರಾಪಳ್ಳಿ ನಾಮಕ್ಕಲ್ಲಿನಿಂದ 74 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಕೌಲಲಂಪೂರ್, ಸಿಂಗಪೂರ್, ಕೊಲೊಂಬೊ ಮತ್ತು ಮಧ್ಯ ಪ್ರಾಚ್ಯ(ಮಿಡ್ಲ್ ಈಸ್ಟ್) ಗಳಿಗೆ ಅಂತಾರಾಷ್ಟ್ರೀಯ ಸೇವೆ ಮತ್ತು ಚೆನ್ನೈ ನಗರಕ್ಕೆ ರಾಷ್ಟ್ರೀಯ ಸೇವೆ ಲಭಿಸುತ್ತದೆ. ತಿರುಚಿರಾಪಳ್ಳಿಯಿಂದ ಬಸ್ಸುಗಳು ನಾಮಕಲ್ಲಿಗೆ ನಿಯಮಿತ ಅಂತರದಲ್ಲಿ ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Jan,Sat
Return On
23 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Sat
Check Out
23 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Sat
Return On
23 Jan,Sun