Search
 • Follow NativePlanet
Share
ಮುಖಪುಟ » ಸ್ಥಳಗಳು» ಪೊಲ್ಲಾಚಿ

ಪೊಲ್ಲಾಚಿ - ಮಾರುಕಟ್ಟೆಯ ಸ್ವರ್ಗ!

29

ಪೊಲ್ಲಾಚಿ ನಗರ ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿದೆ. ಕೊಯಮತ್ತೂರ್ ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ ವಾತಾವರಣ ಕೊಡುವುದು ಮಾತ್ರವಲ್ಲ, ಮನಮೋಹಕ ಸೌಂದರ್ಯದ ಖಣಿಯೂ ಹೌದು. ಸಿನಿಮಾ ಮಂದಿಗೂ ಪೊಲ್ಲಾಚಿ ಪ್ರಿಯವಾದ ಸ್ಥಳವಾಗಿದ್ದು ಸುಮಾರು 1500 ಕ್ಕೂ ಹೆಚ್ಚು ಸಿನಿಮಾ ಚಿತ್ರೀಕರಣ ಹಿಂದಿನ ಕೆಲವು ವರ್ಷಗಳಲ್ಲಿ ಇಲ್ಲಿ ನಡೆದಿದೆ.

ಪೊಲ್ಲಾಚಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳು:

ಸುಬ್ರಹ್ಮಣ್ಯಾರ್ ದೇವಸ್ಥಾನ ಪೊಲ್ಲಾಚಿಯಲ್ಲಿ ಪ್ರಸಿದ್ದವಾದ ಪ್ರವಾಸಿ ತಾಣ. ಪೊಲ್ಲಾಚಿಯ ಬೆಲ್ಲದ ಮಾರುಕಟ್ಟೆಯು ಏಷ್ಯಾದಲ್ಲಿಯೇ ದೊಡ್ಡದು ಮತ್ತು ತರಕಾರಿ ಮಾರುಕಟ್ಟೆಯೂ ಕೂಡ ದೊಡ್ಡದಾಗಿದ್ದು, ಕೇರಳದ ಮಧ್ಯ ಭಾಗದಲ್ಲಿಯೇ ಅತಿ ಹೆಚ್ಚಿನ ಮಟ್ಟಿಗೆ ತರಕಾರಿಗಳನ್ನು ಸರಬರಾಜು ಮಾಡುವ ಹೆಗ್ಗಳಿಕೆ ಪಡೆದಿದೆ. ದನಕರು ಮತ್ತು ಕಬ್ಬಿಣದ ಮಾರುಕಟ್ಟೆಯಲ್ಲೂ ದಕ್ಷಿಣ ಭಾರತದಲ್ಲಿಯೇ ಇದು ದೊಡ್ಡದು. ಜೊತೆಗೆ ಇಲ್ಲಿ ಹಲವಾರು ಆಣೆಕಟ್ಟುಗಳಿದ್ದು, ಬಹಳ ಪ್ರವಾಸಿಗರನ್ನು ಸೆಳೆಯುತ್ತದೆ.

ಪ್ರಸಿದ್ದವಾದ ಕೆಲವು ಡ್ಯಾಂಗಳೆಂದರೆ ನಿರಾರ್ ಡ್ಯಾಂ, ಅಳಿಯರ್ ಡ್ಯಾಂ, ಮೀಂಕಾರಾ ಡ್ಯಾಂ, ಶೋಲಯರ್ ಡ್ಯಾಂ ಮತ್ತು ಪೆರುವರಿ ಪಳ್ಳಂ ಡ್ಯಾಂ. ಇನ್ನು ದೇವಸ್ಥಾನಗಳೆಂದರೆ ರಾಮಲಿಂಗ ಸೌದೇಶ್ವರಿ ಅಮ್ಮನ ದೇವಸ್ಥಾನ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಮಾಸನಿ ಅಮ್ಮನ ತಿರುಕೊಯಲ್, ಅಲಗುನಾಚಿ ಅಮ್ಮನ್ ದೇವಸ್ಥಾನ, ತಿರುಮೂರ್ತಿ ದೇವಸ್ಥಾನ, ಸುಲಕ್ಕಲ್ ಮಾರಿಯಮ್ಮನ್ ತಿರುಕೊಯ್ಲ್, ಶ್ರೀ ವೇಲಾಯುಧ ಸ್ವಾಮಿ ತಿರುಕೊಯ್ಲ್, ಎಚಾನರಿ ವಿನಯಾಗರ್ ತಿರುಕೊಯಿಲ್, ಅಂಬಾರಪಾಳ್ಯಮ್ ದರ್ಗಾ ಮತ್ತು ಅರುಳ್ಮಿಗು ಪ್ರಸಂದ ವಿನಯಾಗರ್ ದೇವಸ್ಥಾನಗಳು ಪ್ರಸಿದ್ದವಾದವು.

ಅಳಿಯರ್ ಸಿದ್ದಾಶ್ರಮ, ಅಣ್ಣಾಮಲೈ ಅಭಯಾರಣ್ಯ, ಟಾಪ್ ಸ್ಲಿಪ್, ವಾಲ್ಪಾರೈ, ಮಾಸನಿಯಮ್ಮನ್ ದೇವಸ್ಥಾನ, ಅಮರಾವತಿ ಡ್ಯಾಂ ಮತ್ತು ಮೊಸಳೆ ಪಾರ್ಕ್ಗಳೂ ಕೂಡ ಪ್ರವಾಸಿಗರನ್ನು ಸೆಳೆಯುತ್ತವೆ.

ಇತಿಹಾಸದ ಪುಟಗಳು:

ಪೊಲ್ಲಾಚಿಯ ಹಳೆಯ ಹೆಸರು ಪೊರುಲ್ ಆಚಿ ಎಂದಾಗಿತ್ತು. ಇದರರ್ಥ ನೈಸರ್ಗಿಕ  ಸಂಪತ್ತು ಮತ್ತು ಉನ್ನತಿಯ ಆಗರ ಎಂಬುದು. ಮೂರನೇ ಕೊಳೋತ್ತುಂಗ ಚೋಳನ ಕಾಲದಲ್ಲಿ ಈ ಪಟ್ಟಣಕ್ಕೆ ಮುದಿ ಕೊಂಡ ಚೋಳ ನಲ್ಲೂರ್ ಎಂಬ ಹೆಸರೂ ಇತ್ತು. ಇಲ್ಲಿರುವ ಸುಬ್ರಮಣ್ಯಾರ್ ದೇವಾಲಯವು ಸುಮಾರು 8 ಶತಮಾನಗಳಷ್ಟು ಹಳೆಯದು. ಐತಿಹಾಸಿಕವಾಗಿ ಈ ಹಿಂದೆ ಈ ದೇವಸ್ಥಾನವು ಶಿವನ ದೇವಸ್ಥಾನವಾಗಿದ್ದಿರಬೇಕು ಎಂದು ಹೇಳಲಾಗುತ್ತದೆ. ಇತಿಹಾಸದಲ್ಲಿ ಪ್ರಸಿದ್ದಿ ಪಡೆದುಕೊಂಡ ಪೊಲ್ಲಾಚಿ ಮಾರುಕಟ್ಟೆಗೆ ಪೊಲ್ಲಾಚಿ ಸಂದೈ ಎಂಬ ಹೆಸರೂ ಇತ್ತು.

ಪೊಲ್ಲಾಚಿ ಪ್ರಸಿದ್ಧವಾಗಿದೆ

ಪೊಲ್ಲಾಚಿ ಹವಾಮಾನ

ಪೊಲ್ಲಾಚಿ
23oC / 73oF
 • Haze
 • Wind: ESE 0 km/h

ಉತ್ತಮ ಸಮಯ ಪೊಲ್ಲಾಚಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೊಲ್ಲಾಚಿ

 • ರಸ್ತೆಯ ಮೂಲಕ
  ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳೆರಡರ ಸೌಲಭ್ಯವಿದೆ. ಕೊಯಮತ್ತೂರ್, ದಿಂಡುಕ್ಕಲ್, ಚೆನ್ನೈ ಮುಂತಾದ ನಗರಗಳಿಂದ ಪೊಲ್ಲಾಚಿಗೆ ಬಸ್ ಸೌಕರ್ಯಗಳಿವೆ. ಬಸ್ ಪ್ರಯಾಣ ಹಿತಕರವಾಗಿರುತ್ತದೆ. ನಿರಂತರವಾದ ಟ್ಯಾಕ್ಸಿ ಸೌಲಭ್ಯಗಳೂ ಇವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪೊಲ್ಲಾಚಿ ರೈಲ್ವೇ ನಿಲ್ದಾಣ ಮುಖ್ಯ ಮಾರ್ಗದಲ್ಲಿಯೇ ಇದ್ದು ಹಲವಾರು ರೈಲುಗಳು ಇಲ್ಲಿಂದ ಹಾದುಹೋಗುತ್ತವೆ. ಹೀಗಾಗಿ ಪೊಲ್ಲಾಚಿಗೆ ತಲುಪಲು ರೈಲ್ವೇ ಪ್ರಯಾಣ ಸೂಕ್ತ ಹಾಗೂ ಸರಳವಾಗಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನನಿಲ್ದಾಣವಿರುವುದು 40 ಕಿ.ಮೀ ದೂರದ ಕೊಯಮತ್ತೂರ್ ನಲ್ಲಿ. ವಿಮಾನನಿಲ್ದಾಣದಿಂದ ಪೊಲ್ಲಾಚಿಗೆ ನಿರಂತರವಾದ ಟ್ಯಾಕ್ಸಿ ಮತ್ತು ಬಸ್ ಸೌಕರ್ಯಗಳಿವೆ. ಟ್ಯಾಕ್ಸಿ ಬಾಡಿಗೆ ಸುಮಾರು 600 ರೂಪಾಯಿಗಳಾಗಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Pollachi
  23 OC
  73 OF
  UV Index: 11
  Haze
 • Tomorrow
  Pollachi
  17 OC
  62 OF
  UV Index: 11
  Partly cloudy
 • Day After
  Pollachi
  18 OC
  64 OF
  UV Index: 11
  Sunny