ಡಿಸೆಂಬರ್ ತಿಂಗಳಿನಿಂದ ಫೇಬ್ರವರಿಯವರೆಗಿನ ಚಳಿಗಾಲ ಪೊಲ್ಲಾಚಿಯ ಭೇಟಿ ಸೂಕ್ತ ಸಮಯ. ಮಳೆಗಾಲದ ನಂತರ ಪೊಲ್ಲಾಚಿ ನಗರ ಸುಂದರವಾಗಿ ಕಂಗೊಳಿಸುತ್ತದೆ. ಜೊತೆಗೆ ವಾತಾವರಣವೂ ಹಿತಕರವಾಗಿರುತ್ತದೆ.
ಪೊಲ್ಲಾಚಿಯಲ್ಲಿ ಸಮಶೀತೋಷ್ಣ ವಾತಾವರಣವಿರುತ್ತದೆ. ಹೀಗಾಗಿ ವರ್ಷಪೂರ್ತಿ ಹಿತಕರವಾದ ಮೃದು ವಾತಾವರಣವಿರುತ್ತದೆ. ಬೇಸಿಗೆಯ ಉಷ್ಣಾಂಶ 30 ಡಿಗ್ರಿ ಸೆಲ್ಶಿಯಸ್ ನಿಂದ 35 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಬೇಸಿಗೆ ಇರುತ್ತದೆ.
ಜೂನ್ ನಿಂದ ಅಕ್ಟೋಬರ್ ವರೆಗೆ ಪೊಲ್ಲಾಚಿಯಲ್ಲಿ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ಈ ಪ್ರದೇಶದ ಸೌಂದರ್ಯ ವ್ರದ್ದಿಸುತ್ತದೆ. ಮಳೆಗಾಲ ಪೊಲ್ಲಾಚಿಗೆ ಭೇಟಿ ನೀಡಲು ಸೂಕ್ತ ಸಮಯ.
ಡಿಸೆಂಬರ್ ನಿಂದ ಫೇಬ್ರವರಿಯವರೆಗೆ ಚಳಿಗಾಲ ಕೊರೆಯುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ 22 ಡಿಗ್ರಿಯಿಂದ 30 ಡಿಗ್ರಿಗೆ ಕುಸಿಯುತ್ತದೆ. ಚಳಿಗಾಲದಲ್ಲಿ ವಾತಾವರಣ ಸುಂದರವಾಗಿರುತ್ತದೆ ಮತ್ತು ಹಿತಕರವಾಗಿರುತ್ತದೆ. ಚಳಿಗಾಲವೂ ಪೊಲ್ಲಾಚಿಯ ಭೇಟಿಗೆ ಉತ್ತಮ ಕಾಲ.